Monday, May 25, 2009

ಅರೆ ರೆರೆರೆರೆರೆ ತರಗಲೆ ನೆಲಗುಟುರ...



ಗಾಬರಿಯಾದರೆ ಕೈಸಿಗದು. ಪುಕ್ಕಲು ಸ್ವಭಾವ. ಕ್ಷಣಾರ್ಧದಲ್ಲಿ ಮಾಯ ವಾಗಬಲ್ಲ ಸಾಮರ್ಥ್ಯ. ನೆಲದ ಮೇಲೆ ಚೆಂಡು ಉರುಳುತ್ತಿದೆಯೇನೋ ಎನ್ನುವಂತೆ ಓಡಾಟ. ಗಂಡು-ಹೆಣ್ಣಿಗೆ ಮೈಬಣ್ಣದಲ್ಲಿ ಮಾತ್ರ ವ್ಯತ್ಯಾಸ. ತರಗಲೆಗಳ ಮಧ್ಯೆ ಸದ್ದಿಲ್ಲದಂತೆ ಓಡಾಡಿಕೊಂಡಿರುತ್ತದೆ!
ಇಸ್ಟೆಲ್ಲ ಕೇಳಿದ ಮೇಲೆ ಹಳ್ಳಿ ಹೈದನಿಗೆ ಇದು ಯಾವ ಹಕ್ಕಿ ಇರಬಹುದು ಎಂದು ಬೇಗ ನೆನಪಾಗಿ ಬಿಡುತ್ತದೆ. ಆದರೆ ಈ ಹಕ್ಕಿಗೆ ಹೀಗೆಂದು ಕರೆಯುತ್ತಾರೆ ಎನ್ನುವುದು ಮಾತ್ರ ಗೊತ್ತಿರುವುದಿಲ್ಲ ಅಸ್ಟೆ. ಆದರೆ ಈಗೀಗ ಈ 'ತರಗಲೆ ನೆಲಗುಟುರ' (White throated ground-thrush) ತೀರ ಅಪರೂಪವಾಗಿಬಿಟ್ಟಿದೆ.
ಕಾಡಿನಲ್ಲಿಯೇ ವಾಸವಾಗಿರುತ್ತಿದ್ದ ಈ ಹಕ್ಕಿಗಳನ್ನು ಈಗ ಗುರುತಿಸಬೇಕೆಂದರೆ ಹರಸಾಹಸ ಪಡಬೇಕು. ಅಂದಹಾಗೆ ಈ ಜಾತಿಗೇ ಸೇರಿದ ಇನ್ನಿತರ ಹಕ್ಕಿಗಳು ಲಭ್ಯ. ತರಗಲೆ ನೆಲಗುಟುರ ಮಾತ್ರ ವಿರಳ. ಪ್ರಾದೇಶಿಕವಾಗಿ ಈ ಹಕ್ಕಿಯನ್ನು ಪಟ್ಟೆ ನೆಲಗುಟುರ, ಒಣಗೆಲೆ ಗುಟುರ, ಎಲೆ ನೆಲಗುಟುರ ಎಂದೆಲ್ಲ ಕರೆಯುತ್ತಾರೆ. ತರಗೆಲೆಗೆ ಕರಾವಳಿಯ ಕೆಲ ಭಾಗದಲ್ಲಿ ದರ್ಕು, ತೆರ್ಕು ಎಂದು ಕರೆಯುವ ಕಾರಣ ಈ ಹಕ್ಕಿಯನ್ನು ಆ ಭಾಗದಲ್ಲಿ ದರ್ಕಲಕ್ಕಿ, ತೆರ್ಕಲಕ್ಕಿ ಎನ್ನುತ್ತಾರೆ.
ಕಾಡುಗಳಲ್ಲಿ ಜೋಡಿಯಾಗಿ ಇರುವ ತರಗಲೆ ನೆಲಗುಟುರ ಗಾಬರಿಯಾದಾಗ ನೆಲಬಿಟ್ಟು ಮರದ ಮೇಲೆ ಸದ್ದು ಮಾಡುತ್ತಾ ಕುಳಿತಿರುತ್ತದೆ. ಗುಬ್ಬಿಗಿಂತ ಸ್ವಲ್ಪ ದೊಡ್ಡದಾಗಿರುವ ಈ ಹಕ್ಕಿ ಗುಂಡುಗುಂಡಾಗಿದ್ದು ಬಾಲ ಮೊಟಾಗಿರುತ್ತದೆ. ಕಂಡು ಕಾಲುಗಳು ಉದ್ದ. ಕೊಕ್ಕು ಚಿಕ್ಕದಾಗಿದ್ದು, ಬೂದು ಮಿಶ್ರಿತ ಕೇಸರಿ ಬಣ್ಣದಿಂದಿರುತ್ತದೆ. ತೇವಾಂಶವಿರುವ ಜಾಗಗಳಲ್ಲಿ ಕೀಟಗಳ ಬೇಟೆಗಾಗಿ ಕುಳಿತಿರುತ್ತದೆ. ಹಸಿರು ಮಿಶ್ರಿತ ನೀಲಿ ರೆಕ್ಕೆಗಳು, ಕಣ್ಣ ಕೆಳಗಿನ ಪಟ್ಟಿ ಮತ್ತು ಎದೆ-ಹೊಟ್ಟೆ ಭಾಗದ ಕೇಸರಿ ಮಿಶ್ರಿತ ಬಣ್ಣವೇ ಸೌಂದರ್ಯದ ಗುಟ್ಟು. ಸೊಕ್ಕೇರಿದರೆ ತರಗಲೆಗಳ ಮಧ್ಯೆ ಮನಸೋ ಇಚ್ಚೆ ಓಡಾಡಿಕೊಂಡಿರುತ್ತದೆ.
ಬೇಸಿಗೆಗಾಳದಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುವ ತರಗೆಲೆ ನೆಲಗುಟುರ ಮೇ ಮತ್ತು ಜೂನ್ ತಿಂಗಳಿನಲ್ಲಿ 2-3 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಈ ಸಂದರ್ಭದಲ್ಲಿ ಸಿಳ್ಳೆ ಹೊಡೆಯುತ್ತದೆ. (ಚಿತ್ರ ಕೃಪೆ: ಅಂತರ್ಜಾಲ)

6 comments:

Ittigecement said...

ಉಪಯುಕ್ತ ಮಾಹಿತಿ....

ಚಂದದ ಫೋಟೊ....
ಆ ಪುಟ್ಟ ಹಕ್ಕಿ ನೋಡಿ ಖುಷಿಯಾಗುತ್ತದೆ....
ಅದನ್ನು ಫೋಟೊ ತೆಗೆಯಲು ಬಲು ಕಷ್ಟ...
ನಿಮ್ಮ ಪರಿಶ್ರಮಕ್ಕೆ ಅಭಿನಂದನೆಗಳು...

PARAANJAPE K.N. said...

ಮಾಹಿತಿ-ಫೋಟೋ ಎರಡು ಚೆನ್ನಾಗಿದೆ. ಇನ್ನಷ್ಟು ಇ೦ತಹ ವಿಚಾರ ಬರೆಯಿರಿ

ಸುನಿಲ್ ಹೆಗ್ಡೆ said...

Nimma yella barahagalu mahithoyukthavagiruttave... Bhalyadalli hakkigala kurithu apara aasakthi hondidda nanage thamma blogna chithra-barahagalu bahala kushi koduttave...;)

srujan said...

chithra baraha thumba sogasaagive.
upayuktha mahithi.
photography yavatthigu nanage berage!

srujan

ರೂpaश्री said...

ಈ ಪುಟ್ಟ ಹಕ್ಕಿಯ ಪರಿಚಯ ಮಾಡಿಕೊಟ್ಟಿದಕ್ಕೆ ಧನ್ಯವಾದಗಳು!

ಜಿ.ಎಸ್.ಬಿ. ಅಗ್ನಿಹೋತ್ರಿ said...

ಧನ್ಯವಾದಗಳು... ದಯವಿಟ್ಟು ಅಗಾಗ ನನ್ನ ಬರಹಗಳ ಪ್ರಪಂಚಕ್ಕೆ ಬರುತ್ತಿರಿ. ತಮಗನಿಸಿದ್ದನ್ನು ಹೇಳುತ್ತಿರಿ...