



Best of Luck ಮಿಥುನ್...
ಈಗ ನಿಮ್ಮ ನಿಜವಾದ ಕ್ರಿಕೆಟ್ ಹೋರಾಟ ಆರಂಭಗೊಂಡಿದೆ. ಇಷ್ಟು ದಿನದ ನಿಮ್ಮ ಶ್ರಮಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಈಗ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಕನ್ನಡನಾಡಿಗು, ದೇಶಕ್ಕೂ ಕೀರ್ತಿ ತನ್ನಿ. ನಿಮ್ಮಲ್ಲಿ ಆ ಸಾಮರ್ಥ್ಯ ಇದೆ. Once Again Best of Luck.
ಇದೇ ಮೊದಲ ಬಾರಿ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದು ಕೊಂಡಿರುವ ಬೆಂಗಳೂರಿನ ಅಭಿಮನ್ಯು ಮಿಥುನ್ ಅವರಿಗೆ ಸಹಸ್ರಾರು ಕ್ರಿಕೆಟ್ ಅಭಿಮಾನಿಗಳ ಶುಭ ಸಂದೇಶ ಇದು. 2009ರ ರಣಜಿ ಋತುವಿನಲ್ಲಿ ಕರ್ನಾಟಕ ತಂಡದಲ್ಲಿ ಇದೇ ಮೊದಲ ಬಾರಿಗೆ ಆಡಿ ಶಹಬ್ಬಾಸ್ ಎನಿಸಿ ಕೊಂಡಿರುವ ಮಿಥುನ್ ಅತಿ ಹೆಚ್ಚು ವಿಕೆಟ್ ಪಡೆದುಕೊಳ್ಳುವ ಮೂಲಕ ಕ್ರಿಕೆಟ್ ವೃತ್ತಿ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಈ ಮೊದಲೇ ಕ್ರಿಕೆಟ್ ಉಸಿರಾಗಿಸಿ ಕೊಂಡಿದ್ದರೂ ಅವರ ನಿಜವಾದ ವೃತ್ತಿಜೀವನ ಈಗ ಆರಂಭಗೊಂಡಿದೆ. ಕಾರಣ ದಕ್ಷಿಣಆಫ್ರಿಕ ವಿರುದ್ದದ ಟೆಸ್ಟ್ ಸರಣಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ರಣಜಿ ಟೂರ್ನಿ ಆಡಿರುವ ಮೊದಲ ಪಂದ್ಯದಲ್ಲೇ 47 ವಿಕೆಟ್ ಪಡೆದು, ರಾಷ್ಟ್ರೀಯ ಆಯ್ಕೆ ಮಂಡಳಿಯ ಗಮನ ಸೆಳೆಯುವುದರಲ್ಲೂ ಯಶಸ್ವಿಯಾಗಿದ್ದಾರೆ. ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ಸಮಿತಿ 20 ರ ಹರೆಯದ ಮಿಥುನ್ ಅವರಿಗೆ ಈಗ ಅವಕಾಶ ಕಲ್ಪಿಸಿದೆ.
11 ವರ್ಷಗಳ ಬಳಿಕ:
ಮಿಥುನ್ ಹೀಗೊಂದು ದಾಖಲೆ ಬರೆದಿದ್ದಾರೆ. 1999 ರ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡ ಕನ್ನಡಿಗ ಎನಿಸಿಕೊಂಡಿದ್ದಾರೆ. 1999 ರಲ್ಲಿ ವಿಜಯ್ ಭಾರದ್ವಾಜ್ ಟೆಸ್ಟ್ ತಂಡದಲ್ಲಿ ಸ್ಥಾನ ಪದೆದುಕೊಂಡಿದ್ದರು. ಭಾರದ್ವಾಜ್ ನಂತರ ರಾಬಿನ್ ಉತ್ತಪ್ಪ ಸ್ಥಾನ ಪಡೆದಿದ್ದರು. ಆದರೆ ಉತ್ತಪ್ಪ ಏಕದಿನ ತಂಡವನ್ನು ಮಾತ್ರ ಪ್ರತಿನಿಧಿಸಿದ್ದಾರೆ.
1990ರಲ್ಲಿ ಅನಿಲ್ ಕುಂಬ್ಳೆ, 1996ರಲ್ಲಿ ರಾಹುಲ್ ದ್ರಾವಿಡ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಸುನಿಲ್ ಜೋಷಿ ಕೂಡ 1996ರಲ್ಲೇ ಟೆಸ್ಟ್ ಆಡಿದ ಕರ್ನಾಟಕದ ಆಟಗಾರ.
ಮನೆ ದಾಸರಹಳ್ಳಿ:
ಮಿಥುನ್ ಮನೆ ಇರುವುದು ಬೆಂಗಳೂರಿನ ಪೀಣ್ಯ ದಾಸರಹಳ್ಳಿ. ಅಭಿಮನ್ಯು ಮತ್ತು ಕವಿತಾ ಅವರ ಹೆಮ್ಮೆಯ ಪುತ್ರ ಮಿಥುನ್. ಚಿತ್ರಾ ಮಿಥುನ್ ಅವರ ಸೋದರಿ. ಚಿತ್ರಾ ಎಂಜಿನಿಯರಿಂಗ್ ವಿದ್ಯಾರ್ಥಿ. ತಂದೆ ಅಭಿಮನ್ಯು ಜಿಮ್ ಮಾಸ್ಟರ್. ಮಿಥುನ್ ತಮ್ಮ ತಂದೆ ಅಭಿಮನ್ಯು ಅವರ ಸ್ವಂತ ಜಿಮ್ ನಲ್ಲೆ ಫಿಟ್ನೆಸ್ ಅಭ್ಯಾಸ ನಡೆಸುತ್ತಾರೆ. ಅಭಿಮನ್ಯು ಶೇಷಾದ್ರಿಪುರಂ ಕಾಲೇಜ್ ವಿದ್ಯಾರ್ಥಿ. ಪಿಯುಸಿ ಮುಗಿಸಿದ್ದಾರೆ. ಮಿಥುನ್ ಕ್ರಿಕೆಟ್ ಕ್ರೀಡೆಯಲ್ಲಿ ಎಷ್ಟು ಟಾಲೆಂಟ್ ಆಗಿದ್ದಾರೋ ಹಾಗೇ ಓದಿನಲ್ಲೂ ಅಸ್ಟೇ ಟಾಲೆಂಟ್. ಶೇ. 68 ಅಂಕಗಳಿಸಿದ್ದಾರೆ.
ದೊಡ್ಡ ಗಣೇಶ್ ಫುಲ್ ಖುಷ್:
ಮಿಥುನ್ ಅವರಿಗೆ ಮಾರ್ಗ ದರ್ಶನ ಮಾಡುತ್ತಿರುವ ದೊಡ್ಡ ಗಣೇಶ್ ಈಗ ಫುಲ್ ಖುಷ್ ಆಗಿದ್ದಾರೆ. ಮಿಥುನ್ ಅವರಲ್ಲಿ ಒಬ್ಬ ಉತ್ತಮ ವೇಗಿ ಇದ್ದಾನೆ. ಅವನನ್ನು ಇನ್ನಸ್ಟು ಬೆಳೆಸುವ ಅಗತ್ಯ ಇದೆ ಎನ್ನುತ್ತಾರೆ.
ನಿಜಕ್ಕೂ ಗಣೇಶ್ ಅವರ ಆಸೆ ನೆರವೀರಬೇಕಿದೆ. ಮಿಥುನ್ ಇನ್ನೊಬ್ಬ ಕರ್ನಾಟಕದ 'ಶ್ರೀನಾಥ್ ' ಆಗಿ ಹೊರ ಹೊಮ್ಮಬೇಕಿದೆ. ಇದಕ್ಕೆ ಜಾವಗಲ್ ಶ್ರೀನಾಥ್ ಅವರ ಸಲಹೆಗಳ ಅಗತ್ಯ ತುಂಬಾ ಇದೆ. ಹಾಗೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ ಬೆನ್ನೆಲುಬಾಗಿ ನಿಲ್ಲಬೇಕಿದೆ.
ಪಾದಾರ್ಪಣೆ:
ಮಿಥುನ್ ಫೆಬ್ರವರಿ 6 ರಂದು ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಲಿದ್ದಾರೆ. ದಕ್ಷಿಣಆಫ್ರಿಕ ವಿರುದ್ಧ ಆಡಲಿದ್ದಾರೆ. ಭಾರತ ತಂಡ ದಕ್ಷಿಣಆಫ್ರಿಕ ವಿರುದ್ಧ ಎರಡು ಟೆಸ್ಟ್ ಪಂದ್ಯ ಆಡಲಿದೆ.
ಮಿಥುನ್ ಅಂಕಿ ಅಂಶ:
ಮಿಥುನ್ ಅವರ ಈವರೆಗಿನ ಕ್ರಿಕೆಟ್ ಸಾಧನೆಯ ನೋಟ ಇಲ್ಲಿದೆ.
http://www.cricinfo.com/ci/content/player/310958.ಹ್ತ್ಮ್ಲ್