Thursday, February 25, 2010

ವಿಚಿತ್ರ ಸೋಮಾರಿ ಗದ್ದೆ ಮಿಂಚುಳ್ಳಿ


ದ್ದೆ ಭಾಗದಲ್ಲಿರುವ ಎಲೆಗಳಿಲ್ಲದ ಮರಗಳ ಕೊಂಬೆ, ಟೆಲಿಫೋನ್ ಅಥವಾ ವಿದ್ಯುತ್ ತಂತಿಗಳೇ ಈ ಹಕ್ಕಿಯ ಸೋಮಾರಿ ಕಟ್ಟೆ. ಸೋಮಾರಿಗಳಲ್ಲೂ ವಿಚಿತ್ರ ಸೋಮಾರಿ. ಶಿಕಾರಿ ಕಣ್ಣಿಗೆ ಬಿದ್ದ ಬಳಿಕ ಅದೇಸ್ಟೇ ಕಸ್ಟವಾದರೂ ಸರಿ. ತನ್ನ ಬಾಯಿಗೆ ಬೀಳಲೇಬೇಕು. ಭಕ್ಷಿಸಲೇಬೇಕು. ಬೇಟೆ ಸಿಗುವ ತನಕ ತಾನು ಕುಳಿತಲ್ಲಿಂದ ಒಂದಿಂಚೂ ಅಲ್ಲಾಡದ ಸೋಮಾರಿ!
ಇಂಥ ವಿಶೇಷತೆಯ ಹಕ್ಕಿ ಈ 'ಗದ್ದೆ ಮಿಂಚುಳ್ಳಿ' 'ಬೆಳ್ಳೆದೆ ಮಿಂಚುಳ್ಳಿ' (Whait brested Kingfisher ).
ಗುಬ್ಬಚ್ಚಿಗಿಂತ ಸ್ವಲ್ಪ ದೊಡ್ಡದಾಗಿರುವ ಗದ್ದೆ ಮಿಂಚುಳ್ಳಿ ಕರೆ, ಗದ್ದೆ ಭಾಗದಲ್ಲೇ ಜಾಸ್ತಿಯಾಗಿ ಕಾಣಸಿಗುತ್ತದೆ. ಕರಾವಳಿಯಲ್ಲಿ ಈ ಹಕ್ಕಿಗಳನ್ನು ಜಾಸ್ತಿಯಾಗಿ ಕಾಣಬಹುದು. ಆಹಾರಕ್ಕೆ ಇನ್ನುಳಿದ ಮಿಂಚುಳ್ಳಿಗಳು ಪಡುವಸ್ಟು ಶ್ರಮ ಈ ಹಕ್ಕಿಗಿಲ್ಲ. ತೀರಾ ಕಷ್ಟ ಎಂದಾಗ ಕುಳಿತಲ್ಲಿಂದ ಎದ್ದೇಳುವುದಿಲ್ಲ. ಮೀನು, ಕಪ್ಪೆಯೇ ಆಗಬೇಕು ಎಂದು ಕಾಯುವುದೂ ಇಲ್ಲ. ಕೀಟಗಳು ಕಣ್ಣೆದುರು ಬಂದರೆ ಅದನ್ನೇ ಭಕ್ಷಿಸಿ ತೃಪ್ತಿಪಡುತ್ತದೆ.
ನೀರ ಸನಿಹದಲ್ಲಿ ನೆಲಕ್ಕೆ ಹತ್ತಿರ ಇರುವಷ್ಟು ಎತ್ತರದಲ್ಲಿ ಗೂಡು ಮಾಡಿಕೊಂಡಿರುತ್ತದೆ. ಸಾಮಾನ್ಯವಾಗಿ ಮಾರ್ಚ್ ನಿಂದ ಜುಲೈ ವೇಳೆಯಲ್ಲಿ ಗೂಡು ಕಟ್ಟಿಕೊಂಡು 4 -6 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ.
ಎದೆ ಭಾಗದಲ್ಲಿ ಬೆಳ್ಳಗಿನ ಮಚ್ಚೆ, ರೆಕ್ಕೆಗಳ ಮೇಲಿನ ನೀಲಿ ಆಕರ್ಷಣೀಯ. ದೇಹದ ಇನ್ನುಳಿದ ಭಾಗ ಕಂದು ಬಣ್ಣದಿಂದ ಇರುತ್ತದೆ. ಗದ್ದೆ ಮಿಂಚುಳ್ಳಿಯನ್ನು ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾಗಳಲ್ಲಿ ಜಾಸ್ತಿಯಾಗಿ ಅಲೆದಾಡಿಕೊಂಡಿರುತ್ತದೆ.
ಚಿತ್ರ: ಅಂತರ್ಜಾಲ

Monday, February 22, 2010

ಕುಟುಕಿಗಿಂತ ಗುಟುಕೇ ಇಸ್ಟ!



ದೇನೋ ಕಳೆದು ಕೊಂಡ ವರಂತೆ ಇರುತ್ತದೆ. ಯಾವತ್ತೂ ಚಿಂತಾ ಕ್ರಾಂತ. ಎಲ್ಲಿಲ್ಲದ ಹುಮ್ಮಸ್ಸು ಬಂತೆಂದರೆ ಮರ ಸುತ್ತುವ ಹವ್ಯಾಸ ಇದರದು. ಅತ್ತಿತ್ತ ಸಣ್ಣಪುಟ್ಟ ಸದ್ದಾದರೂ ಕಕ್ಕಾಬಿಕ್ಕಿಯಾಗಿ ಚಡಪಡಿಸುತ್ತದೆ.
ತನ್ನದೇ ಜಾತಿಗೆ ಸೇರಿದ ಇನ್ನೊಂದು ಹಕ್ಕಿ ವಾಸ ಮಾಡಿ ಬಿಟ್ಟ ಪೊಟರೆಯನ್ನೇ ಹುಡುಕಿಕೊಂಡು ತನ್ನ ಮನೆ ಮಾಡಿಕೊಳ್ಳತ್ತೆ. ಈ 'ಹಸಿರು ಮರಕುಟುಕ' (Little green Woodpecker ).
ಹಾಗಂತ ಈ ಹಕ್ಕಿಗೆ ಪೊಟರೆ ಕೊರೆದುಕೊಳ್ಳಲು ಬಾರದು ಎಂದೇನಿಲ್ಲ. ಎಲ್ಲ ಹಕ್ಕಿಗಳನ್ನಸ್ಟೇ ಮರ ಕೊರೆಯುತ್ತದೆ. ಮರಗಳಲ್ಲಿ ಇರುವ ಕೀಟ, ಗೆದ್ದಲು ಹುಳು ಹಾಗೂ ಆಲ, ಮತ್ತಿ ಹಣ್ಣುಗಳೇ ಈ ಹಕ್ಕಿಗೆ ಆಹಾರ.
ನೋಡಲು ಗೊರವಂಕ ಹಕ್ಕಿಗಿಂತ ಸ್ವಲ್ಪ ಚಿಕ್ಕದು. ಇದರ ರೆಕ್ಕೆಗಳು ಹಸಿರಾಗಿರುತ್ತವೆ. ಎದೆ ಮತ್ತು ಹೊಟ್ಟೆ ಭಾಗ ಹಳದಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುತ್ತವೆ. ಕೊಕ್ಕು ಕೂಡ ಹಸಿರು ಮಿಶ್ರಿತ ಬೂದು ಬಣ್ಣದಿಂದ ಇರುತ್ತದೆ. ಗೆದ್ದಲು ಹುಳುಗಳನ್ನು ಹಿಡಿದು ತಿನ್ನುವ ವೈಖರಿ ಆಕರ್ಷಣಿಯ.
ಭಾರತ ಸೇರಿ ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾ ದೇಶಗಳಲ್ಲಿ ಈ ಹಕ್ಕಿಗಳನ್ನು ನೋಡಲು ಸಾಧ್ಯ. ಜನವರಿ ವೇಳೆಗೆಲ್ಲಾ ಸ್ವಲ್ಪ ತೇವಭರಿತ ಹವಾಮಾನ ಇರುವ ಜಾಗಕ್ಕೆ ವಲಸೆ ಹೋಗಿ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತದೆ. ಜೂನ್ ವೇಳೆಗೆಲ್ಲ ನಾಲ್ಕಾರು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಗೆದ್ದಲು, ದುಂಬಿ ಈ ಹಕ್ಕಿಯ ಪ್ರಮುಖ ಆಹಾರ.
ಪ್ರಾದೇಶಿಕವಾಗಿ ಈ ಹಕ್ಕಿಗೆ ಪಾಚಿ ಮರಕುಟುಕ, ಸಣ್ಣ ಮರಕುಟುಕ, ಹಸಿರು ಕುಟುಕ ಎಂದೆಲ್ಲ ಕರೆಯುತ್ತಾರೆ.
ಚಿತ್ರ: ಅಂತರ್ಜಾಲ