ಕಪ್ಪು ಕತ್ತಿನ ಬಾತುಕೋಳಿ Black necked Swan |
'ಸ್ಕಾರ್ಲೆಟ್ ಕೆಂಬರಲು Scarlet Lbis' |
ಜೊತೆಗೆ ಈ ಪಕ್ಷಿಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಇಲ್ಲಿ ನೀಡಿದ್ದೇನೆ.
'ಸ್ಕಾರ್ಲೆಟ್ ಕೆಂಬರಲು Scarlet Lbis'
ದಕ್ಷಿಣ ಅಮೆರಿಕ, ಟ್ರಿನಿಡಾಡ್-ಟೊಬೆಗೊ ಸೇರಿದಂತೆ ಕೆಲವು ದ್ವೀಪ ರಾಷ್ಟ್ರಗಳಲ್ಲಿ ಕಂಡುಬರುವ ಪಕ್ಷಿ ಇದು. ಭಾರತದಲ್ಲೂ ಈ ಜಾತಿಗೆ ಸೇರಿದ ಪಕ್ಷಿಗಳಿವೆ. ಆದರೆ ಮೈ ಪೂರ್ತಿ ಕೆಂಪಗಿರುವ ಪಕ್ಷಿಗಳು ಇಲ್ಲ. ಕಂಡು ಮಿಶ್ರಿತ ಕಪ್ಪು ಬಣ್ಣದ ಮತ್ತು ಬೆಳ್ಳಗಿನ ಬಣ್ಣದ ಕೆಂಬರಲು ಪಕ್ಷಿಗಳಿವೆ. ಹೀಗಾಗಿ ಈ ಪಕ್ಷಿ ನಮಗೆ ವಿಶೇಷ, ಅಪರೂಪ.
ಸ್ಕಾರ್ಲೆಟ್ ಕೆಂಬರಲು- ಇದು ಟ್ರಿನಿಡಾಡ್-ಟೊಬೆಗೊ ದೇಶಗಳ ರಾಷ್ಟ್ರ ಪಕ್ಷಿ ಕೂಡ ಹೌದು. ಭಾರತದಲ್ಲಿ ಕಾಣ ಸಿಗುವ ಕೆಂಬರಲು ಹಕ್ಕಿಗೂ ಸ್ಕಾರ್ಲೆಟ್ ಕೆಂಬರಲು ಹಕ್ಕಿಗೂ ಗಾತ್ರದಲ್ಲಾಗಲಿ ಅಥವಾ ಇನ್ನಾವುದೇ ರೀತಿಯಿಂದ ಬಹಳ ವ್ಯತ್ಯಾಸ ಕಾಣಸಿಗುವುದಿಲ್ಲ. ಆದರೆ ವಾತಾವರಣ ಹೊಂದಿಕೊಂಡು ಇರಾಬೆಕಾದ ಕಾರಣ ಸ್ವಲ್ಪ ಮಟ್ಟಿಗಿನ ವ್ಯತ್ಯಾಸ ಹುಡುಕಬಹುದು. ಸ್ಕಾರ್ಲೆಟ್ ಕೆಂಬರಲು ಹಕ್ಕಿ ಕೂಡ ಓಟ, ಹಾರಾಟದಲ್ಲಿ ಒಂದು ಹೆಜ್ಜೆ ಮುಂದೆ ಸ್ಕಾರ್ಲೆಟ್ ಕೆಂಬರಲಿನ ಕೊಕ್ಕು ಗಟ್ಟಿ. ಎಲ್ಲ ಕೆಂಬರಲಿನಂತೆ ನೀಳವಾಗಿ, ಸ್ವಲ್ಪ ಬಾಗಿಕೊಂಡಿರುತ್ತದೆ. ಕತ್ತು ಮತ್ತು ಕೊಕ್ಕು ಸೇರುವ ಜಾಗದಲ್ಲಿ ಚಿಕ್ಕದೊಂದು ಚೀಲವಿದ್ದು, ಇದರಲ್ಲಿ ಆಹಾರ ಸಂಗ್ರಹಿಸಿ ಕೊಳ್ಳುತ್ತವೆ.
ಕೆಸರು ಗದ್ದೆ ಗಳಲ್ಲಿ ಇರುವ ಈ ಹಕ್ಕಿಗೆ ಕೀಟಗಳೇ ಪ್ರಮುಖ ಆಹಾರ. ಸಣ್ಣ ಸಣ್ಣ ಗುಂಪು ಮಾಡಿಕೊಂಡು ಗದ್ದೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ 25 ರಿಂದ 28 ಸೆಂಟಿ ಮೀಟರ್ ಎತ್ತರವಿರುವ ಸ್ಕಾರ್ಲೆಟ್ ಕೆಂಬರಲಿನ ಮೈ ಭಾರ ಅಂದಾಜು 650 ಗ್ರಾಂ. ಹೆಚ್ಚೂಕಡಿಮೆ 15 ರಿಂದ 22 ವರ್ಷ ಬಾಳುವ ಸ್ಕಾರ್ಲೆಟ್ ಕೆಂಬರಲು ಮರಗಳ ಮೇಲೆ ಕಡ್ಡಿಗಳನ್ನೂ ಕುಡಿ ಕಾಗೆಯಂತೆ ಗೂಡು ಕಟ್ಟಿಕೊಳ್ಳುತ್ತವೆ. ನವೆಂಬೆರ್ - ಜನವರಿ ಅವಧಿಯಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡು ಒಮ್ಮೆ 3 -4 ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಮೊಟ್ಟೆ ಇಟ್ಟ ಬಳಿಕ 22 ರಿಂದ 28 ದಿನಗಳೊಳಗೆ ಮರಿ ಮಾಡುತ್ತವೆ.
ವೆನುಜುವೆಲಾ ದಿಂದ ಬ್ರೆಜಿಲ್ ನಡುವಿನ ಪ್ರದೇಶದಲ್ಲಿ ಸ್ಕಾರ್ಲೆಟ್ ಕೆಂಬರಲು ಪಕ್ಷಿಗಳು ಜಾಸ್ತಿ.
ಕಪ್ಪು ಕತ್ತಿನ ಬಾತುಕೋಳಿ Black necked Swan
ಬೆಳ್ಳಗಿನ, ಕಪ್ಪು ಸೇರಿದಂತೆ ಇನ್ನೂ ಕೆಲ ಬಣ್ಣ ಬಣ್ಣದ ಬಾತುಕೋಳಿಗಳನ್ನು ನೋಡಿದ್ದೇವೆ. ಆದರೆ ಕಟ್ಟು ಮಾತ್ರ ಕಪ್ಪಗಿದ್ದು ದೇಹವೆಲ್ಲ ಬೆಳ್ಳಗಿರುವ ಬಾಳುಕೋಳಿಗಳು ನಮಗೆ ಅಪರೂಪ. ಕಾರಣ ನಮ್ಮದೇಶದಲ್ಲಿ ಇಲ್ಲ. ಆದರೆ ಇನ್ನು ಮೈಸೂರು ಮೃಗಾಲಯದಲ್ಲಿ ನೋಡಲು ಸಾಧ್ಯ ಅನ್ನೊಂದು ನಮಗೆ ಖುಷಿ ಕೊಡುವ ಸಂಗತಿ. ಕೊಕ್ಕಿನ ಮೇಲ್ಬಾಗಕ್ಕೆ ಇರುವ ಕೆಂಪು ಜುಟ್ಟ ಮತ್ತು ಕಪ್ಪನೆಯ ಕಟ್ಟು ಪ್ರಮುಖ ಆಕರ್ಷಣೆ.
ನೀವೂ ನಂಬಲಿಕ್ಕೆ ಸಾದ್ಯವಿಲ್ಲ. ಅಸ್ಟೊಂದು ದೂರವನ್ನು ಒಂದು ಗಂಟೆಯಲ್ಲಿ ಕ್ರಮಿಸಬಲ್ಲ ಪಕ್ಷಿ ಇದು. ಒಂದು ಗಂಟೆ ಅವಧಿಯಲ್ಲಿ ಬರೋಬ್ಬರಿ ೫೦ ಮೈಲಿ ದೂರ ಕ್ರಮಿಸಬಲ್ಲದು. ಬಲು ದೂರ ಹಾರುವ ಮತ್ತು ಈಜುವ ವಿಶ್ವದ ಕೆಲವೇ ಕೆಲವು ಪಕ್ಷಿಗಳಲ್ಲಿ ಕಪ್ಪು ಕತ್ತಿನ ಬಾತುಕೋಳಿ ಕೂಡ ಒಂದು. ಜಗತ್ತಿನ ಪ್ರಮುಖ ಎಂಟು ಬಾತುಕೋಳಿಗಳ ಜಾತಿಯಲ್ಲಿ ಅತಿ ವೇಗದಿಂದ ಹಾರುವ ಶಕ್ತಿ ಕಪ್ಪು ಕತ್ತಿನ ಬಾತುಕೋಳಿಯಲ್ಲೇ ಜಾಸ್ತಿ. ನೀರಿಲ್ಲದೆ ಇರಲಾರವು. ವಲಸೆ ಹಕ್ಕಿಗಳಲ್ಲಿ ಇವೂ ಒಂದು. ಗುಂಪು ಗುಂಪಾಗಿ ಇರಲು ಬಯಸುತ್ತವೆ.
45 ರಿಂದ 50 ಇಂಚು ಎತ್ತರವಿರುವ ದೊಡ್ಡ ಗಾತ್ರದ ಈ ಬಾತುಕೋಳಿಯಾ ಮೈ ಭಾರ ಅಂದಾಜು 7 ರಿಂದ 10 ಕೆಜಿ. ಹೆಚ್ಚೂಕಡಿಮೆ 14 ರಿಂದ 18 ವರ್ಷ ಬದುಕುತ್ತವೆ. ಚಳಿಗಾಲದ ವೇಳೆಯಲ್ಲಿ 4 -8 ಮೊಟ್ಟೆಗಳನ್ನಿಟ್ಟು ೧೦ ವಾರಗಳಲ್ಲಿ ಮರಿ ಮಾಡುತ್ತವೆ. ದಕ್ಷಿಣ ಅಮೆರಿಕದಿಂದ ಬ್ರೆಜಿಲ್ ವರೆಗಿನ ಪ್ರದೇಶದಲ್ಲಿ ಜಾಸ್ತಿ.