Friday, April 24, 2009

ಅರೆ ಅರೆ ತಿರುಕ "ಚುಕ್ಕೆ ಸಾರಸ"



ತಿರುಕ...ಗುಮ್ಮನಗುಸುಕ!
ಬಿಡುವಿಲ್ಲದೆ ಎಲ್ಲೆಂದರಲ್ಲಿ ಸುತ್ತಾಡಿಕೊಂಡಿರುತ್ತದೆ. ಮನಸ್ಸಿಗೆ ಬೆಜಾರ್ ಆದರೆ ನಾವು ನೀವು ಮುಖ ಸಿಂಡರಿಸಿಕೊಂಡು ದಿನವೆಲ್ಲ ಒಂದೇ ಕಡೆ ಕುಳಿತಿರುತ್ತೇವಲ್ಲ ಹಾಗೆ ಯಾವದೋ ಒಂದು ಮರದಲ್ಲಿ ಕುಳಿತು ಕಾಲ ಕಳೆಯುತ್ತದೆ. ಪಕ್ಕಾ ಪಕ್ಕಾ ಮೂಡಿ, ಉಂಡಾಡಿಗುಂಡಾ.
ಪ್ರವಾಸದ ಹುಚ್ಚು ಜಾಸ್ತಿ. ಈ ಚುಕ್ಕೆ ಸಾರಸನಿಗೆ (Malayan Night Heron) ಸ್ವಲ್ಪ ಹಟ ಜಾಸ್ತಿ.
ಚುಕ್ಕೆ ಸಾರಸನ ಅವಸಾಲು ಅಲ್ಲಿ ಇಲ್ಲಿ ಎನ್ನುವ ಹಾಗಿಲ್ಲ. ಎಲ್ಲೆಂದರಲ್ಲಿ ಇದ್ದು ಬೆಳಗು ಮಾಡುತ್ತದೆ. ಕಡ್ಡಿ ನಾರುಗಳನ್ನು ತಂದು ತಟ್ಟೆಯಾಕಾರದ ಗೂಡು ಕಟ್ಟಿಕೊಳ್ಳುತ್ತದೆ. ಆದರೆ ಹೆಚ್ಚು ಕಾಲ ಕಳೆಯುವ ತಾಳ್ಮೆಯಿಲ್ಲ. ಬಹುತೇಕ ರಾತ್ರಿ-ಹಗಲುಗಳನ್ನು ಮರದ ಟೊಂಗೆಗಳ ಮೇಲೆ ಇದ್ದು ಕಳೆಯುತ್ತದೆ.
ಹೆಚ್ಚುಕಡಿಮೆ 45 ಸೆಂ.ಮೀ.ನಸ್ಟು ಎತ್ತರವಿರುವ ಈ ಹಕ್ಕಿ ಕೊಕ್ಕರೆ ಜಾತಿಗೆ ಸೇರಿದ್ದು. ಗುಣ-ಲಕ್ಷಣದಲ್ಲಿ ರಾತ್ರಿ ಕೊಕ್ಕರೆಗೂ ಇದಕ್ಕೂ
ಸಾಕಸ್ಟು ಸಾಮ್ಯತೆ ಇದೆ. ಹೊಲ, ಗದ್ದೆ, ಕೆರೆ ಭಾಗ ಸೇರಿದಂತೆ ಕಾಡುಗಳಲ್ಲಿ ಇರುವ ಚುಕ್ಕೆ ಸಾರಸನನ್ನು "ಹುಲಿಬಕ", ಚುಕ್ಕೆ ಕೊಕ್ಕರೆ" ಎಂದೂ ಕರೆಯುತ್ತಾರೆ. ದೇಹದ ಬಹುತೇಕ ಭಾಗ ಬಿಳಿ, ಕಪ್ಪು ಚುಕ್ಕೆಗಳಿರುವ ಬೂದು ಮಿಶ್ರಿತ ಕಂದು ಬಣ್ಣದಿಂದಿರುತ್ತದೆ. ರೆಕ್ಕೆ ಮತ್ತು ಕತ್ತಿನ ಭಾಗದಲ್ಲಿ ಚುಕ್ಕೆಗಳು ಜಾಸ್ತಿ. ಕಾಲುಗಳು ಮತ್ತು ಕೊಕ್ಕು ಕಂದು ಬಣ್ಣದಿಂದಿರುತ್ತವೆ. ಕತ್ತು ಮತ್ತು ಹೊಟ್ಟೆ ಭಾಗದಲ್ಲಿ ಕೇಸರಿ, ಹಳದಿ ಮಿಶ್ರಿತ ಬಿಳಿಗರಿಗಳು ಇರುತ್ತವೆ. ರಾತ್ರಿ ಹೊತ್ತಿನಲ್ಲಿ ವಲಸೆ.
ಆಗಸ್ಟ್-ನವೆಂಬರ್ ತಿಂಗಳಾವದಿಯಲ್ಲಿ ಸಂತಾನೋತ್ಪತ್ತಿಯ ಕಾರ್ಯದಲ್ಲಿ ತೊಡಗಿಕೊಳ್ಳುವ ಚುಕ್ಕೆ ಸಾರಸ 2 ರಿಂದ 4 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. 18ರಿಂದ 25 ದಿನಗಳ ಕಾಲ ಕಾವು ನೀಡುತ್ತದೆ. ಚುಕ್ಕೆ ಸಾರಸ ಭಾರತ, ಪಿಲಿಫೈನ್ಸ್ ಮತ್ತು ಚೀನಾಗಳಲ್ಲಿ ಜಾಸ್ತಿ. ವಿಶ್ವದ ಉಳಿದ ಭಾಗಗಳಿಂದ ಸಂತಾನೋತ್ಪತ್ತಿಯ ವೇಳೆ ಇಲ್ಲಿಗೆ ವಲಸೆ ಬರುತ್ತವೆ. ಕ್ರಾಕ್..ಕ್ರಾಕ್... ಎಂದು ಸದ್ದು ಮಾಡುತ್ತಿರುತ್ತವೆ.

Sunday, April 12, 2009

ಮಿರುಗುವ ಕೆಂಬರಲು


ಮೈ ಮಾಟವೇ ಚೆಂದ. ಸೊಂಟ ಬಳುಕಿಸುತ್ತಾ ಮೊಣಕಾಲು ನೀರಿರುವ ಕೆರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಯಾರುತಾನೆ ನೋಡಲ್ಲ ಹೇಳಿ? ಹುಚ್ಚೆದ್ದರೆ ಕೆಸರೆರಚಾಡುವ ವಿಚಿತ್ರ ಮನಸ್ಸು... ಆ ಉದ್ದನೆಯ ಕೈಕಾಲು, ಕೊಕ್ಕಿನ ಬಾಯನ್ನು ದೇವರು ಕೊಟ್ಟಿದ್ದೇ ಬೇಟೆಗಾಗಿ!
ಇನ್ನು ತನ್ನ ಸಂಗಾತಿ ಜತೆ ಚೆಲ್ಲಾಡುವ ಮನಸ್ಸು ಯಾರಿಗಿಲ್ಲ. ಇದು ಕೂಡ ಇದರಲ್ಲಿ ಯಾರಿಗೇನು ಕಡಿಮೆ ಇಲ್ಲ.
ಎಲ್ಲೆಲ್ಲೂ, ಮನಸ್ಸು ಬಿಚ್ಚಿ ಪ್ರೀತ್ಸೆ....!