

ಪತ್ರಿಕಾ  ರಂಗದಲ್ಲಿ ಸಾಕಸ್ಟು  ಜನಪ್ರಿಯರಾಗಿರುವ ಟಿ.ಎಸ್. ಸತ್ಯನ್ ಈಗ ನೆನಪು ಮಾತ್ರ. ಭಾನುವಾರ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವಯಸ್ಸಾಗಿತ್ತು. ಪತ್ರಿಕಾ ರಂಗ ಕಂಡ ವಿಬಿನ್ನ ಫೋಟೋ ಜರ್ನಲಿಸ್ಟ್. ಕಳೆದ ಮೂರ್ನಾಲ್ಕು ದಶಮಾನಗಳ ಹಿಂದೆ ಪತ್ರಿಕಾರಂಗದಲ್ಲಿ ತಮ್ಮ ಅದ್ಭುತ ಛಾಯಾಚಿತ್ರಗಳಿಂದ ವಿಶ್ವದ ಗಮನವನ್ನೇ ಸೆಳೆದವರಲ್ಲಿ ಸತ್ಯನ್ ಕೂಡ ಒಬ್ಬರು. ಮೈಸೂರಿನವರೇ ಆದ ಸತ್ಯನ್ ನಿಜಕ್ಕೂ ಈಗ ನನ್ನ ಕಣ್ಣ ಮುಂದೆ ಬರುತ್ತಿದ್ದಾರೆ.
ಸಾಕಶ್ತು ವರ್ಷಗಳ ಹಿಂದಿನ ಗಟನೆಯಲ್ಲ. ೮ ವರ್ಷಗಳ ಹಿಂದೆ ನಾನು ಮೈಸೂರಿನ ಶ್ರೀ ಕಲಾನಿಕೇತನ ಕಲಾ ಶಾಲೆಯಲ್ಲಿ ಆರ್ಟ್ ಮಾಸ್ಟರ್ ಓದುತ್ತಿದ್ದ ವೇಳೆಯಲ್ಲಿ ಛಾಯಾಚಿತ್ರ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೆವು. ಆಗ ಸತ್ಯನ್ ಸೇರಿದಂತೆ ಮೈಸೂರಿನ ಅನೇಕ ಕ್ಯಾತ ಛಾಯಾಚಿತ್ರಕಾರರು ಟಿಪ್ಸ್ ನೀಡಿದ್ದರು. ಅಂದು ಸತ್ಯನ್ ನಮಗೆ ಛಾಯಾಚಿತ್ರದಲ್ಲಿ ಬೆಳಕಿನ ಮಹತ್ವದ ಬಗ್ಗೆ ವಿವರಿಸಿದ್ದರು. ಆ ಬಳಿಕ ಅವರ ಛಾಯಾಚಿತ್ರಗಳನ್ನು ನೋಡಿ ಆನಂದಿಸಿದ್ದೆ. ಅವರ ಛಾಯಾಚಿತ್ರಗಳಲ್ಲಿ ವಿಶೇಷವಾಗಿ ಬೆಳಕು ಮತ್ತು ಯಥಾದೃಷ್ಟರೂಪಣ, ಪರಿದೃಶ್ಯ (perspective) ಗೆ ಮಹತ್ವ ನಿಡುತ್ತಿದುದನ್ನು ಕಾಣಬಹುದು. ಅಸ್ಟೇ ಅಲ್ಲ, ವಿಷಯಾಧಾರಿತ ಚಿತ್ರಗಳನ್ನೂ ಕ್ರಿಯಾಶೀಲವಾಗಿ ಸೆರೆ ಹಿಡಿದಿರುವುದನ್ನು ನೋಡಲು ಸಾಧ್ಯ.
ಟಿ. ಎಸ್. ಸತ್ಯನ್ ಅವರ ‘ಕಾಲಕ್ಕೆ ಕನ್ನಡಿ’ ಪುಸ್ತಕದಲ್ಲಿ ಇಂಥ ಕೆಲವೊಂದು ಮಹತ್ವದ ವಿಚಾರಗಳಿವೆ. ಪತ್ರಿಕೋದ್ಯಮದ ಅಪರೂಪದ ಅನುಭವಗಳನ್ನು ಬರೆದಿದ್ದಾರೆ, ಅನೇಕ ನೆನಪುಗಳನ್ನು ಮೆಲುಕು ಹಾಕಿದ್ದಾರೆ.  ಪ್ರಿಸಂ ಬುಕ್ಸ್ ಈ ಪುಸ್ತಕ ಪ್ರಕಟಿಸಿದೆ. ಇದು ಕನ್ನಡ, ಇಂಗ್ಲಿಷ್ ಎರಡೂ ಭಾಷೆಯಲ್ಲಿ ಮುದ್ರಣಗೊಂಡಿದೆ. ಸತ್ಯನ್ ಅವರ ಅನೇಕ ಛಾಯಾಚಿತ್ರಗಳು ಇಂಡಿಯಾ ಟುಡೇ, ನ್ಯೂಸ್ ವೀಕ್, ಔಟ್ ಲುಕ್ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸತ್ಯನ್ ಅವರಿಗೆ ಅಂತಾರಾಷ್ಟ್ರೀಯ ಪ್ರಚಾರ ಗಿಟ್ಟಿಸಿ ಕೊಟ್ಟವರಲ್ಲಿ ಯುನಿಸೆಫ್ ಪಾತ್ರ ಮಹತ್ವದ್ದು. 1979  ರಲ್ಲಿ ನ್ಯೂಯಾರ್ಕ್ ನಲ್ಲಿ ಸತ್ಯನ್ ಅವರ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿತು. ನಂತರ ಅವರು ಅನೇಕ ರೀತಿಯಿಂದ ಬೆಳೆಯಲೂ ಕಾರಣವಾಯಿತು.
ಟಿ. ಎಸ್. ಸತ್ಯನ್ ಜನಿಸಿದ್ದು 1923  ರಲ್ಲಿ. ಸತ್ಯನ್ ಗೆ ೧೯೭೭ ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಸಂದಿದೆ.