Saturday, March 19, 2011

ಗುಬ್ಬಚ್ಚಿ ಬಗ್ಗೆ ಮನಬಿಚ್ಚಿ....


Kullu, Himachal Pradesh, India
  • ಗುಬ್ಬಚ್ಚಿ ನಗರ ಬಿಟ್ಟು ಓಡಿದವು... ಎಂದು ಗುಬ್ಬಚ್ಚಿದಿನಾಚರಣೆ ಬಂದಾಗಲೆಲ್ಲ ಕತೆ ಹೇಳ್ತೇವೆ....

  • ಮೊಬೈಲ್ ಟವರ್ ಗಳು ಜಾಸ್ತಿ ಆಗ್ತಿರೋ ಕಾರಣ ಗುಬ್ಬಚ್ಚಿ ನಗರ ಬಿಟ್ಟು ಹೋಗ್ತಿವೆ....
 ಗುಬ್ಬಚ್ಚಿಗಳೆಲ್ಲ ನಗರ ಬಿಟ್ಟು ಹೋಗಲು ಕೇವಲ ಮೊಬೈಲ್ ಒಂದೇ ಕಾರಣ ಅಲ್ಲ. ಶೇಕಡಾ 20 ಇದ್ದಿರಬಹುದು ಅಸ್ಟೆ.
ಮೊಬೈಲ್ ಗುಬ್ಬಿಗಳಿಗೊಂದೇ ತೊಂದರೆ ಮಾಡುತ್ತಿವೆಯಾ? ಕಾಗೆ, ಮೈನಾ ಇತ್ಯಾದಿ ಕೆಲ ಪಕ್ಷಿಗಳಿಗೆ ತೊಂದರೆ ಮಾಡುತ್ತಿಲ್ಲವೇ? ಶಿವಾಜಿನಗರ ಸೇರಿದಂತೆ ಬೆಂಗಳೂರಿನ ನೂರಾರು ಕಡೆ ಮಾರಾಟಕ್ಕೆಂದು ಬಂಧಿಸಿಟ್ಟ ತರಾವರಿಯ ಲವ್ ಬರ್ಡ್ಸ್ ಗಳಿಗೆ ಯಾವುದೇ ತೊಂದರೆ ಮಾಡುತ್ತಿಲ್ಲವೇ?
 ಹೀಗೆ ಅನೇಕ ಪ್ರಶ್ನೆಗಳು ನನ್ನನ್ನ ಕಾಡಿದ್ದಿದೆ. ಆದರೆ ನಾನು ತಿಳಿದು ಕೊಂಡಂತೆ ಗುಬ್ಬಚ್ಚಿ
ಗಳು ನಗರವನ್ನು ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲೇ ಇವೆ. ನಿಮ್ಮ ಮನೆ ಬಾಗಿಲಿಗೆ ಬರುತ್ತಿಲ್ಲ ಅಸ್ಟೆ.
 ಕೆಲ ವರ್ಷಗಳ ಹಿಂದೆ ಈ ಗುಬ್ಬಿಗಳಿಗೆ ನಮ್ಮ-ನಿಮ್ಮ ಮನೆಯಲ್ಲಿ ಆಹಾರ ಸಿಗುತ್ತಿದ್ದವು. ಆದರೆ ಇಂದು ಆಹಾರ ಸಿಗುತ್ತಿವೆಯಾ? ಪ್ರಾಮಾಣಿಕವಾಗಿ ನಾವು ಗುಬ್ಬಚ್ಚಿ
ಗೆ ಬೇಕಾದ ಆಹಾರ ನೀಡುತ್ತಿದ್ದೇವಾ?
 ಖಂಡಿತವಾಗಿಯೂ ಇಲ್ಲ ಬಿಡಿ. ಬದಲಾದ ನಮ್ಮ ಜೀವನ ಶೈಲಿ ಈ ಗುಬ್ಬಿಗಳ ಜೀವಕ್ಕೆ ಕಂಟಕ ಪ್ರಾಯವಾಗಿದೆ. ನಮ್ಮ ಮನೆ ಸದಸ್ಯರಂತೆ ವಾಸವಾಗುತ್ತಿದ್ದ ಗುಬ್ಬಿಗಳು ಇಂದಿನ ಸ್ಲ್ಯಾಬ್ ಮನೆಗಳಲ್ಲಿ ಎಲ್ಲಿ ವಾಸಿಸಬೇಕು? ನಾವೇನಾದ್ರು ಅದಕ್ಕೊಂದು ಪ್ರತ್ಯೇಕ ಮನೆ(ಗೂಡು) ಮಾಡಿಕ್ಕೊಟ್ಟಿದ್ದೇವಾ? ಮನೆ ಇರಲಿ ನಾವಿದ್ದ ಮನೆ ಆವರಣಕ್ಕೆ ಕಾಲಿಡಲೇ ಬಿಡುತ್ತಿಲ್ಲ.
 ನಮ್ಮ ಅಮ್ಮನೋ, ಅಜ್ಜಿಯೋ ಮನೆಯಲ್ಲಿ ಅಕ್ಕಿ, ಗೋದಿ, ಜೋಳ, ರಾಗಿಯಲ್ಲಿದ್ದ ಹುಳು, ನೆಲ್ಲು ಆರಿಸಿ ಅಂಗಳಕ್ಕೆ ಎಸೆಯುತ್ತಿದ್ದರು. ಅವನ್ನೆಲ್ಲ ಆರಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು ಈ ಗುಬ್ಬಿಗಳು. ಎಸ್ಟೋ ಮನೆಗಳಲ್ಲಿ ಬೆಳಿಗ್ಗೆ, ಸಾಯಂಕಾಲ ಧಾನ್ಯಗಳನ್ನ ತುಳಸಿ ಕಟ್ಟೆಯ ಮೇಲೆ, ಮನೆ ಎದುರ ಬಾಗಿಲಲ್ಲಿ ಇಡುವ ಪರಿಪಾಟ ಇತ್ತು. ಇಗೆಲ್ಲಿವೆ?
 ಇನ್ನು ಹಳ್ಳಿಗಳಲ್ಲಿ ಇನ್ನೂ ಉಳಿದಿವೆ. ಹುಲ್ಲಿನಿಂದ ಬತ್ತವನ್ನ ಬೇರ್ಪಡಿಸುವ ವೇಳೆ ಸಹಜವಾಗಿಯೇ ಕಾಣಲು ಸಾಧ್ಯವಿದೆ. ನಗರ ಪ್ರದೇಶದ ಮನೆಗಳಲ್ಲಿ ಇಂಥ ಯಾವುದೇ ಸನ್ನಿವೇಶಗಳು ಇಲ್ಲದಿರುವಾಗ ಹೇಗೆ ಗುಬ್ಬಚ್ಚಿ
ಗಳು ಇರಬೇಕು? ಆದರೆ ಎಪಿಎಮ್ ಸಿ ಯಾರ್ಡ್ ಗಳಲ್ಲಿ , ಮಾರುಕಟ್ಟೆ ಪ್ರದೇಶಗಳಲ್ಲಿ, ಕಿರಾಣಿ ಅಂಗಡಿಗಳ ಮುಂಭಾಗ ಈಗಲೂ ಗುಬ್ಬಿಗಳು ಇವೆ. ಪ್ರತಿಯೊಬ್ಬರೂ ಮನೆಗಳಲ್ಲಿ ಕಾಳು-ಕಡಿ ಹಾಕುವ ಆಭ್ಯಾಸ ಬೆಳೆಸಿಕೊಂಡರೆ ಈಗಲೂ ಗುಬ್ಬಚ್ಚಿಗಳು ನಿಮ್ಮ ಮನೆಯಲ್ಲಿ, ಅಥವಾ ನೆರೆಹೊರೆಯ ಕಟ್ಟಡಗಳಲ್ಲಿ ವಾಸವಾಗಿದ್ದು, ಪ್ರತಿದಿನ ನಿಮ್ಮ ಮನೆಗೆ ಭೇಟಿ ಕೊಡುವುದರಲ್ಲಿ ಅನುಮಾನವಿಲ್ಲ.

Thursday, January 27, 2011

Kingfisher dive captured on camera

ಕಿಂಗ್ ಫಿಷರ್ ಅರ್ಥಾತ್ ಮಿಂಚುಳ್ಳಿಯ ಬೇಟೆ ಹೇಗಿರುತ್ತೆ ಅನ್ನೋದಕ್ಕೆ ಇಲ್ಲೊಂದು ಅಧ್ಬುತ ಛಾಯಾಚಿತ್ರ ನಿಮಗಾಗಿ. Noel Marry ನಿರಂತರ ಒಂದು ವರ್ಷಗಳ ಕಾಲ ಕಾದು ಕಾದು ಇಂತದ್ದೊಂದು ಕ್ಷಣವನ್ನು ಸೆರೆ ಹಿಡಿದಿದ್ದಾನೆ. ಛಾಯಾಚಿತ್ರ ನೋಡಿ ನಿಮ್ಮ ಖುಷಿ ಹಂಚಿಕೊಳ್ಳಿ.

Dedicated Noel Marry got the perfect photo of a kingfisher catching a fish - after spending a year setting it up.
 The father of three was close to giving up on his dream of photographing the brightly coloured bird diving underwater for a minnow.
 But, just as he was about to pack in his year long quest, his efforts were rewarded with stunning pictures of the fish 'plunge-diving' to catch its lunch.
 Mr Marry got the idea after watching a BBC documentary about the notoriously shy bird.
 The 53-year old built a fish tank in which he would place a minnow he caught in a net before almost completely submerging the tank into a river.
 Mr Marry built a hide for himself metres away from the tank so he didn't scare off the bird and operated the camera by a remote control.
 He built a perch above the tank and over the months the kingfisher got used to fishing its lunch out of the tank.
 Gradually, Mr Marry was able to take it further out of the water so that he could get a clearer shot.
 And eventually he was able to snap the bird with the tank completely out of the river as it dived headlong into the water to catch its prey.
 The photos were taken at the Broadmeadow river, in Swords, County Dublin, Republic of Ireland.
 Mr Marry said: "I was absolutely delighted when I got the set of photos as it was the result of a lot of months of hard work.
 "I would sit and wait for hours with my camera and sometimes the bird wouldn't even show up.
 "I was starting to get downhearted and just when I thought about packing it all in it just happened. It was really special."


ಇಲ್ಲೂ ಒಮ್ಮೆ ಇಣುಕಿನೋಡಿ...http://1x.com/ 
http://www.cruzine.com/2010/12/21/animals-photography-showcase/

Sunday, November 14, 2010

Wish you happy children's day

ಮುದ್ದು ಮಗುವಿನ ಭಾವನೆಗಳಿಗೆ ಹ್ಯಾಟ್ಸಾಫ್... ಮಗು ಅತ್ತರೂ ಚೆನ್ನ, ನಕ್ಕರೂ ಚೆನ್ನ. ಅವರದೇ ಲೋಕದಲ್ಲಿದ್ದಾಗ ಹೇಗಿದ್ದರೂ ಚೆನ್ನ... ಚಿನ್ನ ನೀ ನಗುನಗುತಾ ಇರು. ನಗಿಸುತ್ತಿರು.












Friday, March 12, 2010

ಚೋರೆಚಾಣನ ಚೂರಿ ಇರಿತ



ಕೆಲವೊಮ್ಮೆ ಏನೇನೋ ಕಾರಣಕ್ಕಾಗಿ ಒಂದೆಡೆ ಯಿಂದ ಇನ್ನೊಂ ದೆಡೆಗೆ ಸ್ಥಳಾಂತರ ಗೊಳ್ಳಲು ನಮ್ಮ ಮನಸ್ಸುಗಳು ಹೇಗೆ ಕೆಲಸ ಮಾಡುತ್ತವೋ ಹಾಗೆಯೇ ಹಕ್ಕಿಗಳು ಕೆಲವೊಮ್ಮೆ ತನ್ನ ಜಾಗ ಬದಲಾಯಿಸುತ್ತವೆ.
ಇಂಥ ಗುಣವನ್ನು ಸುಲಭವಾಗಿ ಗುರುತಿಸಬಲ್ಲ ಹಕ್ಕಿ ಎಂದರೆ ಈ 'ಚೋರೆಚಾಣ' ಅರ್ಥಾತ್ Kestrel. ಗಿಡುಗ ಜಾತಿಗೆ ಸೇರಿದ ಹಕ್ಕಿ ಇದು. ವಿಚಿತ್ರ ಸ್ವಭಾವದ ಹಕ್ಕಿ ಇದು. ನಮಗೆ ಹೇಗೆ ಒಂದು ಸ್ಥಳದಲ್ಲಿ ಹೊಂದಿಕೊಳ್ಳಲು ಸಾಧ್ಯವಾಗದೇ ಇನ್ನೊಂದು ಸೂಕ್ತ ಸ್ಥಳಕ್ಕಾಗಿ ಹುಡುಕಾಡಿ ಅದನ್ನು ದಕ್ಕಿಸಿಕೊಳ್ಳುತ್ತೇವೋ ಹಾಗೆಯೇ ಈ ಚೋರೆ ಚಾಣ ಕೂಡ ತನ್ನ ಆಹಾರ, ಆವಾಸಕ್ಕಾಗಲಿ ಆಗಾಗ ಸ್ಥಳ ಬದಲಾಯಿಸುತ್ತವೆ. ಇನ್ನೊಂದು ವಿಶೇಷತೆಯನ್ನು ಈ ಹಕ್ಕಿಯಲ್ಲಿ ಕಾಣಲು ಸಾಧ್ಯ. ಹಾರಾಟದಲ್ಲಿ ಈ ಹಕ್ಕಿ ಯುದ್ಧ ವಿಮಾನಗಳು ಇದ್ದಂತೆ. ಹಾರುವಾಗ ಯಾವುದೇ ಕ್ಷಣದಲ್ಲಿ ತನ್ನ ಹಾರಾಟದ ದಿಕ್ಕನ್ನು ಬದಲಾಯಿಸಿಕೊಳ್ಳುತ್ತದೆ. ಅದಕ್ಕೆ ತಕ್ಕುದಾದ ರೆಕ್ಕೆಯ ವಿನ್ಯಾಸ ಇದಕ್ಕಿದೆ. ತನ್ನ ರೆಕ್ಕೆಗಳ ಚಲನೆಯಿಂದಲೇ ಸುಲಭವಾಗಿ ದಿಕ್ಕನ್ನು ಬದಲಿಸಿಕೊಳ್ಳುತ್ತದೆ.
ಈ ಚೋರೆ ಚಾಣ ಹಕ್ಕಿಯನ್ನು ರಾಜ್ಯದ ಬಯಲುಸೀಮೆ ಪ್ರದೇಶಗಳಲ್ಲಿ ಕಾಣಲು ಸಾಧ್ಯ. ದೇಹದ ಬಹುತೇಕ ಭಾಗ ಕಂದು ಬಣ್ಣದಿಂದ ಕೂಡಿರುತ್ತದೆ. ಮೈಮೇಲೆ ಕಪ್ಪು ಚುಕ್ಕೆಗಳನ್ನು ನೋಡಲು ಸಾಧ್ಯ. ಪುಕ್ಕದ ತುದಿಯಲ್ಲಿ ಕಪ್ಪು ಪಟ್ಟಿಗಳಿರುತ್ತವೆ. ಕೊಕ್ಕು ಮತ್ತು ಕಾಲುಗಳು ಇನ್ನುಳಿದ ಗಿಡುಗನಂತೆ ಗಟ್ಟಿ, ಮಾಂಸ ಕಡಿದು ತಿನ್ನಲು ಅನುಕೂಲವಾಗುವಂತೆ ಇವೆ. ಕತ್ತನ್ನು ಕ್ಷಣ ಕ್ಷಣಕ್ಕೆ ಅತ್ತಿತ್ತ ಹೊರಳಿಸುತ್ತಲೇ ಇರುತ್ತದೆ. ಗಾತ್ರದಲ್ಲಿ ಹೆಚ್ಚು ಕಡಿಮೆ ಚೋರೆ ಹಕ್ಕಿಯಷ್ಟೇ ಇರುತ್ತದೆ.
ಈ ಹಕ್ಕಿಯನ್ನು ಭಾರತ, ಬಾಂಗ್ಲ, ಲಂಕಾ, ಪಾಕಿಸ್ತಾನಗಳಲ್ಲಿ ಕಾಣಲು ಸಾಧ್ಯ. ಸಂತಾನೋತ್ಪತ್ತಿಯ ವೇಳೆ ತಂಪು ಹವಾಮಾನ ಪ್ರದೇಶಗಳಿಗೆ ಹೋಗಿ ಏಪ್ರಿಲ್-ಜುಲೈ ತಿಂಗಳಾವಧಿಯಲ್ಲಿ 3 -4 ಮೊಟ್ಟೆಯಿಟ್ಟು ಮರಿ ಮಾಡುತ್ತದೆ.
ಚಿತ್ರ: ಅಂತರ್ಜಾಲ

Thursday, February 25, 2010

ವಿಚಿತ್ರ ಸೋಮಾರಿ ಗದ್ದೆ ಮಿಂಚುಳ್ಳಿ


ದ್ದೆ ಭಾಗದಲ್ಲಿರುವ ಎಲೆಗಳಿಲ್ಲದ ಮರಗಳ ಕೊಂಬೆ, ಟೆಲಿಫೋನ್ ಅಥವಾ ವಿದ್ಯುತ್ ತಂತಿಗಳೇ ಈ ಹಕ್ಕಿಯ ಸೋಮಾರಿ ಕಟ್ಟೆ. ಸೋಮಾರಿಗಳಲ್ಲೂ ವಿಚಿತ್ರ ಸೋಮಾರಿ. ಶಿಕಾರಿ ಕಣ್ಣಿಗೆ ಬಿದ್ದ ಬಳಿಕ ಅದೇಸ್ಟೇ ಕಸ್ಟವಾದರೂ ಸರಿ. ತನ್ನ ಬಾಯಿಗೆ ಬೀಳಲೇಬೇಕು. ಭಕ್ಷಿಸಲೇಬೇಕು. ಬೇಟೆ ಸಿಗುವ ತನಕ ತಾನು ಕುಳಿತಲ್ಲಿಂದ ಒಂದಿಂಚೂ ಅಲ್ಲಾಡದ ಸೋಮಾರಿ!
ಇಂಥ ವಿಶೇಷತೆಯ ಹಕ್ಕಿ ಈ 'ಗದ್ದೆ ಮಿಂಚುಳ್ಳಿ' 'ಬೆಳ್ಳೆದೆ ಮಿಂಚುಳ್ಳಿ' (Whait brested Kingfisher ).
ಗುಬ್ಬಚ್ಚಿಗಿಂತ ಸ್ವಲ್ಪ ದೊಡ್ಡದಾಗಿರುವ ಗದ್ದೆ ಮಿಂಚುಳ್ಳಿ ಕರೆ, ಗದ್ದೆ ಭಾಗದಲ್ಲೇ ಜಾಸ್ತಿಯಾಗಿ ಕಾಣಸಿಗುತ್ತದೆ. ಕರಾವಳಿಯಲ್ಲಿ ಈ ಹಕ್ಕಿಗಳನ್ನು ಜಾಸ್ತಿಯಾಗಿ ಕಾಣಬಹುದು. ಆಹಾರಕ್ಕೆ ಇನ್ನುಳಿದ ಮಿಂಚುಳ್ಳಿಗಳು ಪಡುವಸ್ಟು ಶ್ರಮ ಈ ಹಕ್ಕಿಗಿಲ್ಲ. ತೀರಾ ಕಷ್ಟ ಎಂದಾಗ ಕುಳಿತಲ್ಲಿಂದ ಎದ್ದೇಳುವುದಿಲ್ಲ. ಮೀನು, ಕಪ್ಪೆಯೇ ಆಗಬೇಕು ಎಂದು ಕಾಯುವುದೂ ಇಲ್ಲ. ಕೀಟಗಳು ಕಣ್ಣೆದುರು ಬಂದರೆ ಅದನ್ನೇ ಭಕ್ಷಿಸಿ ತೃಪ್ತಿಪಡುತ್ತದೆ.
ನೀರ ಸನಿಹದಲ್ಲಿ ನೆಲಕ್ಕೆ ಹತ್ತಿರ ಇರುವಷ್ಟು ಎತ್ತರದಲ್ಲಿ ಗೂಡು ಮಾಡಿಕೊಂಡಿರುತ್ತದೆ. ಸಾಮಾನ್ಯವಾಗಿ ಮಾರ್ಚ್ ನಿಂದ ಜುಲೈ ವೇಳೆಯಲ್ಲಿ ಗೂಡು ಕಟ್ಟಿಕೊಂಡು 4 -6 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ.
ಎದೆ ಭಾಗದಲ್ಲಿ ಬೆಳ್ಳಗಿನ ಮಚ್ಚೆ, ರೆಕ್ಕೆಗಳ ಮೇಲಿನ ನೀಲಿ ಆಕರ್ಷಣೀಯ. ದೇಹದ ಇನ್ನುಳಿದ ಭಾಗ ಕಂದು ಬಣ್ಣದಿಂದ ಇರುತ್ತದೆ. ಗದ್ದೆ ಮಿಂಚುಳ್ಳಿಯನ್ನು ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾಗಳಲ್ಲಿ ಜಾಸ್ತಿಯಾಗಿ ಅಲೆದಾಡಿಕೊಂಡಿರುತ್ತದೆ.
ಚಿತ್ರ: ಅಂತರ್ಜಾಲ

Monday, February 22, 2010

ಕುಟುಕಿಗಿಂತ ಗುಟುಕೇ ಇಸ್ಟ!



ದೇನೋ ಕಳೆದು ಕೊಂಡ ವರಂತೆ ಇರುತ್ತದೆ. ಯಾವತ್ತೂ ಚಿಂತಾ ಕ್ರಾಂತ. ಎಲ್ಲಿಲ್ಲದ ಹುಮ್ಮಸ್ಸು ಬಂತೆಂದರೆ ಮರ ಸುತ್ತುವ ಹವ್ಯಾಸ ಇದರದು. ಅತ್ತಿತ್ತ ಸಣ್ಣಪುಟ್ಟ ಸದ್ದಾದರೂ ಕಕ್ಕಾಬಿಕ್ಕಿಯಾಗಿ ಚಡಪಡಿಸುತ್ತದೆ.
ತನ್ನದೇ ಜಾತಿಗೆ ಸೇರಿದ ಇನ್ನೊಂದು ಹಕ್ಕಿ ವಾಸ ಮಾಡಿ ಬಿಟ್ಟ ಪೊಟರೆಯನ್ನೇ ಹುಡುಕಿಕೊಂಡು ತನ್ನ ಮನೆ ಮಾಡಿಕೊಳ್ಳತ್ತೆ. ಈ 'ಹಸಿರು ಮರಕುಟುಕ' (Little green Woodpecker ).
ಹಾಗಂತ ಈ ಹಕ್ಕಿಗೆ ಪೊಟರೆ ಕೊರೆದುಕೊಳ್ಳಲು ಬಾರದು ಎಂದೇನಿಲ್ಲ. ಎಲ್ಲ ಹಕ್ಕಿಗಳನ್ನಸ್ಟೇ ಮರ ಕೊರೆಯುತ್ತದೆ. ಮರಗಳಲ್ಲಿ ಇರುವ ಕೀಟ, ಗೆದ್ದಲು ಹುಳು ಹಾಗೂ ಆಲ, ಮತ್ತಿ ಹಣ್ಣುಗಳೇ ಈ ಹಕ್ಕಿಗೆ ಆಹಾರ.
ನೋಡಲು ಗೊರವಂಕ ಹಕ್ಕಿಗಿಂತ ಸ್ವಲ್ಪ ಚಿಕ್ಕದು. ಇದರ ರೆಕ್ಕೆಗಳು ಹಸಿರಾಗಿರುತ್ತವೆ. ಎದೆ ಮತ್ತು ಹೊಟ್ಟೆ ಭಾಗ ಹಳದಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುತ್ತವೆ. ಕೊಕ್ಕು ಕೂಡ ಹಸಿರು ಮಿಶ್ರಿತ ಬೂದು ಬಣ್ಣದಿಂದ ಇರುತ್ತದೆ. ಗೆದ್ದಲು ಹುಳುಗಳನ್ನು ಹಿಡಿದು ತಿನ್ನುವ ವೈಖರಿ ಆಕರ್ಷಣಿಯ.
ಭಾರತ ಸೇರಿ ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾ ದೇಶಗಳಲ್ಲಿ ಈ ಹಕ್ಕಿಗಳನ್ನು ನೋಡಲು ಸಾಧ್ಯ. ಜನವರಿ ವೇಳೆಗೆಲ್ಲಾ ಸ್ವಲ್ಪ ತೇವಭರಿತ ಹವಾಮಾನ ಇರುವ ಜಾಗಕ್ಕೆ ವಲಸೆ ಹೋಗಿ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತದೆ. ಜೂನ್ ವೇಳೆಗೆಲ್ಲ ನಾಲ್ಕಾರು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಗೆದ್ದಲು, ದುಂಬಿ ಈ ಹಕ್ಕಿಯ ಪ್ರಮುಖ ಆಹಾರ.
ಪ್ರಾದೇಶಿಕವಾಗಿ ಈ ಹಕ್ಕಿಗೆ ಪಾಚಿ ಮರಕುಟುಕ, ಸಣ್ಣ ಮರಕುಟುಕ, ಹಸಿರು ಕುಟುಕ ಎಂದೆಲ್ಲ ಕರೆಯುತ್ತಾರೆ.
ಚಿತ್ರ: ಅಂತರ್ಜಾಲ

Friday, January 29, 2010

ಟೀಂ ಇಂಡಿಯಾಕ್ಕೆ ಮತ್ತೊಬ್ಬ ಕನ್ನಡಿಗ






Best of Luck ಮಿಥುನ್...
ಈಗ ನಿಮ್ಮ ನಿಜವಾದ ಕ್ರಿಕೆಟ್ ಹೋರಾಟ ಆರಂಭಗೊಂಡಿದೆ. ಇಷ್ಟು ದಿನದ ನಿಮ್ಮ ಶ್ರಮಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಈಗ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಕನ್ನಡನಾಡಿಗು, ದೇಶಕ್ಕೂ ಕೀರ್ತಿ ತನ್ನಿ. ನಿಮ್ಮಲ್ಲಿ ಆ ಸಾಮರ್ಥ್ಯ ಇದೆ. Once Again Best of Luck.
ಇದೇ ಮೊದಲ ಬಾರಿ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದು ಕೊಂಡಿರುವ ಬೆಂಗಳೂರಿನ ಅಭಿಮನ್ಯು ಮಿಥುನ್ ಅವರಿಗೆ ಸಹಸ್ರಾರು ಕ್ರಿಕೆಟ್ ಅಭಿಮಾನಿಗಳ ಶುಭ ಸಂದೇಶ ಇದು. 2009ರ ರಣಜಿ ಋತುವಿನಲ್ಲಿ ಕರ್ನಾಟಕ ತಂಡದಲ್ಲಿ ಇದೇ ಮೊದಲ ಬಾರಿಗೆ ಆಡಿ ಶಹಬ್ಬಾಸ್ ಎನಿಸಿ ಕೊಂಡಿರುವ ಮಿಥುನ್ ಅತಿ ಹೆಚ್ಚು ವಿಕೆಟ್ ಪಡೆದುಕೊಳ್ಳುವ ಮೂಲಕ ಕ್ರಿಕೆಟ್ ವೃತ್ತಿ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಈ ಮೊದಲೇ ಕ್ರಿಕೆಟ್ ಉಸಿರಾಗಿಸಿ ಕೊಂಡಿದ್ದರೂ ಅವರ ನಿಜವಾದ ವೃತ್ತಿಜೀವನ ಈಗ ಆರಂಭಗೊಂಡಿದೆ. ಕಾರಣ ದಕ್ಷಿಣಆಫ್ರಿಕ ವಿರುದ್ದದ ಟೆಸ್ಟ್ ಸರಣಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ರಣಜಿ ಟೂರ್ನಿ ಆಡಿರುವ ಮೊದಲ ಪಂದ್ಯದಲ್ಲೇ 47 ವಿಕೆಟ್ ಪಡೆದು, ರಾಷ್ಟ್ರೀಯ ಆಯ್ಕೆ ಮಂಡಳಿಯ ಗಮನ ಸೆಳೆಯುವುದರಲ್ಲೂ ಯಶಸ್ವಿಯಾಗಿದ್ದಾರೆ. ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ಸಮಿತಿ 20 ರ ಹರೆಯದ ಮಿಥುನ್ ಅವರಿಗೆ ಈಗ ಅವಕಾಶ ಕಲ್ಪಿಸಿದೆ.
11 ವರ್ಷಗಳ ಬಳಿಕ:
ಮಿಥುನ್ ಹೀಗೊಂದು ದಾಖಲೆ ಬರೆದಿದ್ದಾರೆ. 1999 ರ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡ ಕನ್ನಡಿಗ ಎನಿಸಿಕೊಂಡಿದ್ದಾರೆ. 1999 ರಲ್ಲಿ ವಿಜಯ್ ಭಾರದ್ವಾಜ್ ಟೆಸ್ಟ್ ತಂಡದಲ್ಲಿ ಸ್ಥಾನ ಪದೆದುಕೊಂಡಿದ್ದರು. ಭಾರದ್ವಾಜ್ ನಂತರ ರಾಬಿನ್ ಉತ್ತಪ್ಪ ಸ್ಥಾನ ಪಡೆದಿದ್ದರು. ಆದರೆ ಉತ್ತಪ್ಪ ಏಕದಿನ ತಂಡವನ್ನು ಮಾತ್ರ ಪ್ರತಿನಿಧಿಸಿದ್ದಾರೆ.
1990ರಲ್ಲಿ ಅನಿಲ್ ಕುಂಬ್ಳೆ, 1996ರಲ್ಲಿ ರಾಹುಲ್ ದ್ರಾವಿಡ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಸುನಿಲ್ ಜೋಷಿ ಕೂಡ 1996ರಲ್ಲೇ ಟೆಸ್ಟ್ ಆಡಿದ ಕರ್ನಾಟಕದ ಆಟಗಾರ.
ಮನೆ ದಾಸರಹಳ್ಳಿ:
ಮಿಥುನ್ ಮನೆ ಇರುವುದು ಬೆಂಗಳೂರಿನ ಪೀಣ್ಯ ದಾಸರಹಳ್ಳಿ. ಅಭಿಮನ್ಯು ಮತ್ತು ಕವಿತಾ ಅವರ ಹೆಮ್ಮೆಯ ಪುತ್ರ ಮಿಥುನ್. ಚಿತ್ರಾ ಮಿಥುನ್ ಅವರ ಸೋದರಿ. ಚಿತ್ರಾ ಎಂಜಿನಿಯರಿಂಗ್ ವಿದ್ಯಾರ್ಥಿ. ತಂದೆ ಅಭಿಮನ್ಯು ಜಿಮ್ ಮಾಸ್ಟರ್. ಮಿಥುನ್ ತಮ್ಮ ತಂದೆ ಅಭಿಮನ್ಯು ಅವರ ಸ್ವಂತ ಜಿಮ್ ನಲ್ಲೆ ಫಿಟ್ನೆಸ್ ಅಭ್ಯಾಸ ನಡೆಸುತ್ತಾರೆ. ಅಭಿಮನ್ಯು ಶೇಷಾದ್ರಿಪುರಂ ಕಾಲೇಜ್ ವಿದ್ಯಾರ್ಥಿ. ಪಿಯುಸಿ ಮುಗಿಸಿದ್ದಾರೆ. ಮಿಥುನ್ ಕ್ರಿಕೆಟ್ ಕ್ರೀಡೆಯಲ್ಲಿ ಎಷ್ಟು ಟಾಲೆಂಟ್ ಆಗಿದ್ದಾರೋ ಹಾಗೇ ಓದಿನಲ್ಲೂ ಅಸ್ಟೇ ಟಾಲೆಂಟ್. ಶೇ. 68 ಅಂಕಗಳಿಸಿದ್ದಾರೆ.
ದೊಡ್ಡ ಗಣೇಶ್ ಫುಲ್ ಖುಷ್:
ಮಿಥುನ್ ಅವರಿಗೆ ಮಾರ್ಗ ದರ್ಶನ ಮಾಡುತ್ತಿರುವ ದೊಡ್ಡ ಗಣೇಶ್ ಈಗ ಫುಲ್ ಖುಷ್ ಆಗಿದ್ದಾರೆ. ಮಿಥುನ್ ಅವರಲ್ಲಿ ಒಬ್ಬ ಉತ್ತಮ ವೇಗಿ ಇದ್ದಾನೆ. ಅವನನ್ನು ಇನ್ನಸ್ಟು ಬೆಳೆಸುವ ಅಗತ್ಯ ಇದೆ ಎನ್ನುತ್ತಾರೆ.
ನಿಜಕ್ಕೂ ಗಣೇಶ್ ಅವರ ಆಸೆ ನೆರವೀರಬೇಕಿದೆ. ಮಿಥುನ್ ಇನ್ನೊಬ್ಬ ಕರ್ನಾಟಕದ 'ಶ್ರೀನಾಥ್ ' ಆಗಿ ಹೊರ ಹೊಮ್ಮಬೇಕಿದೆ. ಇದಕ್ಕೆ ಜಾವಗಲ್ ಶ್ರೀನಾಥ್ ಅವರ ಸಲಹೆಗಳ ಅಗತ್ಯ ತುಂಬಾ ಇದೆ. ಹಾಗೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ ಬೆನ್ನೆಲುಬಾಗಿ ನಿಲ್ಲಬೇಕಿದೆ.
ಪಾದಾರ್ಪಣೆ:
ಮಿಥುನ್ ಫೆಬ್ರವರಿ 6 ರಂದು ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಲಿದ್ದಾರೆ. ದಕ್ಷಿಣಆಫ್ರಿಕ ವಿರುದ್ಧ ಆಡಲಿದ್ದಾರೆ. ಭಾರತ ತಂಡ ದಕ್ಷಿಣಆಫ್ರಿಕ ವಿರುದ್ಧ ಎರಡು ಟೆಸ್ಟ್ ಪಂದ್ಯ ಆಡಲಿದೆ.
ಮಿಥುನ್ ಅಂಕಿ ಅಂಶ:
ಮಿಥುನ್ ಅವರ ಈವರೆಗಿನ ಕ್ರಿಕೆಟ್ ಸಾಧನೆಯ ನೋಟ ಇಲ್ಲಿದೆ.
http://www.cricinfo.com/ci/content/player/310958.ಹ್ತ್ಮ್ಲ್