Wednesday, May 27, 2009

ಕಿರಿ ಕಿರಿ ಕಿರು ಮಿಂಚುಳ್ಳಿನಂಬಲಿಕ್ಕೇ ಅಸಾದ್ಯ... ದುಪ್ ಎಂದು ನೀರಿಗೆ ಬಿದ್ದರೆ ನಾಲ್ಕಾರು ನಿಮಿಷ ಎದ್ದೆಳುವುದೇ ಇಲ್ಲ. ಹೊರ ಬರುವಾಗ ಯಾವುದೇ ಕಾರಣಕ್ಕೂ ಒಂದಲ್ಲಾ ಒಂದು ಮೀನು ಅದರ ಬಾಯಲ್ಲಿ ಇರಲೇ ಬೇಕು. ಅಜ್ಜಪ್ಪ ಎಂದರೂ ಬಿಡಲೋಪ್ಪದು. ಗಾತ್ರದಲ್ಲಿ ತನ್ನಿಂತ ದೊಡ್ಡ ಗಾತ್ರದ ಬಂಗಡೆ ಮೀನೇ ಇದ್ದರೂ ಅಸ್ಟು ಸುಲಭವಾಗಿ ಬಿಡುವ ಜಾಯಮಾನದ ಹಕ್ಕಿ ಇದಲ್ಲ.
ಅದೇನಾದರೂ ಹಕ್ಕಿಗಳಿಗೆ ಡೈವಿಂಗ್ ಸ್ಪರ್ಧೆ ಏರ್ಪಡಿಸಿದರೆ ಬಹುಷಃ ಈ 'ಕಿರು ಮಿಂಚುಳ್ಳಿ' (Small Blue Kingfisher) ಚಾಂಪಿಯನ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ನಿಮ್ಮ ಮನೆಯ ಪಕ್ಕದಲ್ಲೆಲ್ಲಾದರೂ ಕೆರೆ, ಹರಿಯುವ ನೀರಿರುವ ಪ್ರದೆಶಗಳಿದ್ದರೆ ಆ ಪ್ರದೇಶದಲ್ಲಿ ಈ ಹಕ್ಕಿ ಇದ್ದೇ ಇರುತ್ತದೆ. ದಿನದ ಒಂದು ಗಂಟೆ ಆ ಪ್ರದೇಶದಲ್ಲಿ ಸದ್ದಿಲ್ಲದೆ ಕುಳಿತಿದ್ದರೆ ನೀವೂ ಈ ಹಕ್ಕಿಯನ್ನು ಸುಲಭವಾಗಿ ಗುರುತಿಸಲು ಸಾದ್ಯ.
ನೀಲಿ ಬಣ್ಣದ ಹಕ್ಕಿ ಇದು. ಕುತ್ತಿಗೆ ಮತ್ತು ಹೊಟ್ಟೆ ಭಾಗವೆಲ್ಲ ಹೊಂಬಣ್ಣದಿಂದಿರುತ್ತದೆ. ಕಿರು ಮಿಂಚುಳ್ಳಿಯ ಕೊಕ್ಕು ಬಲು ಬಲಿಷ್ಠ. ಆ ಚೋಟುದ್ದದ ಕಾಲುಗಳನ್ನು ಮಾತ್ರ ಕುಳಿತಿದ್ದಾಗ ಕಾಣಿಸುವುದೇ ಕಷ್ಟ. ಅದರಲ್ಲೂ ಸ್ವಲ್ಪ ವಯಸ್ಸಾಗಿರುವ ಹಕ್ಕಿಯಾದರಂತೂ ಗರಿಗಳು ಮುಚ್ಚಿಕೊಡಿರುತ್ತವೆ. ಪಾದಗಳು ಗುಂಡಾಗಿರುತ್ತವೆ. ಈ ಹಕ್ಕಿಯ ಹಾರಾಟ ಗಮಿನಿಸುವಾಗ ಒಮ್ಮೆ ಬೆಚ್ಚಿ ಬಿದ್ದರೂ ಅಚ್ಚರಿಯಿಲ್ಲ. ಅಸ್ಟೊಂದು ಚುರುಕುತನ ಈ ಹಕ್ಕಿಯಲ್ಲಿ ಕಾಣಬಹುದು.
ಚೀ ಚಿಕ್ ಎಂದು ಕೂಗುತ್ತಲೇ ಹಾರುವ ಈ ಕಿರು ಮಿಂಚುಳ್ಳಿ ಬಾಲ ಮತ್ತು ಕತ್ತನ್ನು ಆಗಾಗ ಮೇಲೆ-ಕೆಳಕ್ಕೆ ಮಾಡುತ್ತಲೇ ಇರುತ್ತದೆ. ನೀರು ಮತ್ತು ನೆಲದ ಮೇಲೆ ಒಂದೆರಡು ಅಡಿ ಅಂತರದಲ್ಲಿ ಎಲ್ಲಿಂದ ಎಲ್ಲಿಯ ವರೆಗೂ ಹಾರಾಡಬಲ್ಲ ಸಾಮರ್ಥ್ಯ ಈ ಹಕ್ಕಿಗಿದೆ.
ಈ ಹಕ್ಕಿಯ ಕೇಸರಿ ಮತ್ತು ನೀಲಿ ಬಣ್ಣ ಪ್ರಜ್ವಲಿಸುತ್ತದೆ. ಅದರಲ್ಲೂ ಸಂತಾನೋತ್ಪತ್ತಿಯ ವೇಳೆಯಲ್ಲಿ ಮಿರುಗುವಸ್ಟು ಪ್ರಜ್ವಲತೆ. ಸಾಮಾನ್ಯವಾಗಿ ಫೆಬ್ರವರಿಯಿಂದ ಜೂನ್ ತಿಂಗಳಾವಧಿಯಲ್ಲಿ 2-4 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಮರದ ಪೊಟರೆಯಲ್ಲಿ ಗೂಡು ಮಾಡಿಕೊಳ್ಳುತ್ತದೆ. ಮೀನು ಇದರ ಪ್ರಮುಖ ಆಹಾರ. ಭಾರತ, ಶ್ರೀಲಂಕಾ, ಬಾಂಗ್ಲಾದಲ್ಲಿ ಜಾಸ್ತಿ.

12 comments:

srujan said...

ಕಿರಿ ಕಿರಿ ಮಿಂಚುಳ್ಳಿ ಗಳ ಬಗ್ಗೆ ಸೊಗಸಾದ ಮಾಹಿತಿ.
ಸೂಕ್ಷ್ಮ ಹಕ್ಕಿಗಳ ಫೋಟೋ ಹೇಗೆ ತೆಗಿತಿರಾ?
ಹಕ್ಕಿಗಳ ಆ ಸಹಜ ಬಣ್ಣ ಗಳನ್ನೂ ನೋಡ್ತಾ ನೋಡ್ತಾ ಬೆರಗ್ಗದೆ.(ಭಾರತ ದಲ್ಲಿ ಎಲ್ಲೆಲ್ಲಿ ಸಿಗುತ್ತವೆ ಈ ಹಕ್ಕಿಗಳು.)
ಲೇಖನ ಫೋಟೋ ಗಳು ಸುಪೆರ್ಬ್.
ಸೃಜನ್

Ittigecement said...

ನಾನೂ ನನ್ನ ಮಗ ಈ ಹಕ್ಕಿಯ ಫೋಟೊ ತೆಗೆಯಲು ಬಹಳ ಸಾಹಸ ಪಟ್ಟಿದ್ದೇವೆ...
ನಿಮ್ಮಷ್ಟು ಚಂದ ಬರಲಿಲ್ಲ...

ಉಪಯುಕ್ತ ಮಾಹಿತಿ...

ಬಹಳ ಚಂದದ ಫೋಟೊ...

ಅಭಿನಂದನೆಗಳು...

ಆಲಾಪಿನಿ said...

ಚೆಂದ ಮಿಂಚುಳ್ಳಿ. ಚೆಂದ ಚಿತ್ರ...

ಶಿವಪ್ರಕಾಶ್ said...

ಮಿಂಚುಳ್ಳಿ ಸೂಪರ್

ಮಲ್ಲಿಕಾರ್ಜುನ.ಡಿ.ಜಿ. said...

ಚಂದದ ಮಿಂಚುಳ್ಳಿ ಚಿತ್ರಗಳು.ಉಪಯುಕ್ತ ಮಾಹಿತಿ. ಚಿತ್ರ ನಿಮ್ಮದೇನಾ?

ಜಿ.ಎಸ್.ಬಿ. ಅಗ್ನಿಹೋತ್ರಿ said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ಇಲ್ಲಿರುವ ಚಿತ್ರಗಳೆಲ್ಲ ನನ್ನದಲ್ಲ. ಸುಟೆಬಲ್ ಚಿತ್ರಗಳು ಬೇಕೆಂದಾಗ ಅಂತರ್ಜಾಲದ ಸಹಾಯ ಪಡೆಯುತ್ತೇನೆ. ಕೆಲವೊಮ್ಮೆ ನನ್ನಲ್ಲಿ ಚಿತ್ರ ಇದ್ದರೂ ಅದು ಬರಹಕ್ಕೆ ತಕ್ಕನಾಗಿರದ ಕಾರಣ ಅಂತರ್ಜಾಲದ ಮೊರೆ ಹೋಗುತ್ತೇನೆ.

ಜಿ.ಎಸ್.ಬಿ. ಅಗ್ನಿಹೋತ್ರಿ said...

@ಶೃಜನ್
ಭಾರತದಲ್ಲಿ ಎಲ್ಲೆಲ್ಲಿ ಕಾಣಸಿಗತ್ತೆ ಎಂದು ಕೇಳಿದ್ದಿರಿ... ಈ ಮಿಂಚುಳ್ಳಿ ಹಕ್ಕಿ ಭಾರತದ ಬಹುತೇಕ ಕಡೆ ಇವೆ. ಅದರಲ್ಲೂ ದಕ್ಷಿಣ, ಮಧ್ಯ ಭಾರತದಲ್ಲಿ ಜಾಸ್ತಿ. ಹೆಚ್ಚಿನದಾಗಿ ನೀರಿರುವ ಪ್ರದೇಶದಲ್ಲಿ ಇದ್ದೇ ಇರುತ್ತದೆ. ಆದರೆ ಅಸ್ಟು ಸುಲಭವಾಗಿ ಗುರುತಿಸಲು ಸಾದ್ಯವಿಲ್ಲ. ಬಹಳ ಚುರುಕಾದ ಹಕ್ಕಿ. ಏಕಾಂತವನ್ನು ಹೆಚ್ಚು ಬಯಸುವ ಹಕ್ಕಿ ಇದು.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ನೀವು ಕೊಡುವ ವಿವರಣೆಗಳು ಎಂಥವರಿಗೂ ಮನಸ್ಸಿನಲ್ಲಿ ಉಳಿಯುವಂತಿರುತ್ತವೆ. ಮುಂದೆಂದಾದರೂ ಆ ಹಕ್ಕಿ ನೋಡಿದಾಗ ಥಟ್ಟನೆ ನೆನಪಾಗುವಂತೆ. ಇವೆಲ್ಲಾ ಪುಸ್ತಕರೂಪದಲ್ಲಿ ಬಂದರೆ ಎಷ್ಟೊಂದು ಉಪಯೋಗ ಅಲ್ಲವೇ? ಇರುವ ಎಲ್ಲಾ field guides ತೀರಾ ತಾಂತ್ರಿಕ ಮತ್ತು dry ಆಗಿರುತ್ತೆ.

ಬಾಲು said...

olle lekhana with good photos... :)

Unknown said...

ಅಗ್ನಿ
ನಿಮ್ಮ ಪರಿಚಯವಾದುದು ತುಂಬಾ ಸಂತೋಷ. ಇತ್ತೀಚಿಗೆ ನನಗೆ ಹೆಚ್ಚು ಹೆಚ್ಚು ಫೋಟೋಗಳನ್ನು ನೋಡುವ ಅವಕಾಶ ದೊರೆಯುತ್ತಿದೆ. ನಿಮ್ಮ ಬ್ಲಾಗಿನ ಪೋಟೋಗಳನ್ನು ಅದರ ವಿವರಗಳೊಂದಿಗೆ ನೋಡುವ ಸೌಭಾಗ್ಯ ದೊರೆತಿದೆ. ನಿಮ್ಮ ಬ್ಲಾಗ್ ಕೂಡಾ ಅಷ್ಟೆ. ಅಚ್ಚುಕಟ್ಟಾಗಿದೆ. ನಿಮ್ಮ ಬ್ಲಾಗ್ ಫಾಲೋ ಮಾಡಿದ್ದೇನೆ.

sunaath said...

ಅಗ್ನಿ,
ಸೊಗಸಾದ ಹಕ್ಕಿಗಳನ್ನು ಅಚ್ಚುಕಟ್ಟಾಗಿ ಪರಿಚಯಿಸಿದ್ದೀರಿ.
ಧನ್ಯವಾದಗಳು.

ಚಂದಿನ said...

ಮಿಂಚುಳ್ಳಿಯಷ್ಟೇ ನಿಮ್ಮ ಬರಹವೂ ಆಪ್ತವಾಗಿದೆ.

-ಚಂದಿನ