Thursday, July 2, 2009
ಕೋಗಿಲೆಗೆ ತಲೆಯ ಮೇಲೆ ಜುಟ್ಟು...
ಸಾಮಾನ್ಯವಾಗಿ ಮದುರ ಕಂಠದ ಧ್ವನಿಯನ್ನು ಕೋಗಿಲೆಗೆ ಹೊಲಿಸುತ್ತೇವೆ. ಆದರೆ ಆ ಕೋಗಿಲೆಯನ್ನು ಕಣ್ಣಾರೆ ಕಂಡರೆ 'ಯಪ್ಪಾ ಇದೇನು ಕಪ್ಪು' ಎಂದು ರಾಗ ಎಳೆಯುವುದು ಸಾಮಾನ್ಯ. ಆದರೆ ಈ ಕೋಗಿಲೆಯನ್ನು ನೋಡಿದರೆ ನಿಮಗೆ ನಿರಾಸೆಯಾಗುವುದಿಲ್ಲ.
ಕಾರಣ ಈ ಹಕ್ಕಿ ಅಸ್ಟು ಕಪ್ಪಗಿನ ಕೋಗಿಲೆಯಲ್ಲ. ಭಾರತದ ಸಾಮನ್ಯ ಕೋಗಿಲೆಗಿಂತ ಇದು ಭಿನ್ನವಾಗಿರುತ್ತದೆ. ಈ ಹಕ್ಕಿಯಲ್ಲಿ ಕಾಣಬಹುದಾದ ಇನ್ನೊಂದು ವಿಶೇಷವೆಂದರೆ ಇದು ನಮ್ಮ ದೇಶದ ಹಕ್ಕಿ ಅಲ್ಲ. ಆದರೆ ವರ್ಷದಲ್ಲಿ ಅರ್ಧದಸ್ಟು ದಿನಗಳನ್ನು ಸಹ್ಯಾದ್ರಿ ಸೇರಿ ಭಾರತದ ಇನ್ನಿತರ ದಟ್ಟಡವಿಯಲ್ಲೇ ಕಳೆಯುತ್ತದೆ. ಇನ್ನೇನು ಮಳೆಗಾಲ ಮುಗಿಯುತ್ತಿದೆ ಎನ್ನುವ ದಿನಗಳಲ್ಲಿ ದಕ್ಷಿಣ ಆಫ್ರಿಕಾದಿಂದ ನೇರವಾಗಿ ಭಾರತಕ್ಕೆ ವಲಸೆ ಬರುತ್ತವೆ. ಕತ್ತಲೆ ಆವರಿಸಿರುವ ದಟ್ಟಡವಿಯಲ್ಲೇ ಕಾಲ ಕಳೆಯುತ್ತದೆ.
ಆಫ್ರಿಕಾ ಖಂಡದಿಂದ ಬರುವ ಅತಿಥಿಗಳ ವಲಸೆ ಎಲ್ಲ ವರ್ಷವೂ ಒಂದೇ ರೀತಿ ಇರುವುದಿಲ್ಲ. ಮುಂಗಾರಿನಲ್ಲಿ ಹೇಗೆ ಬದಲಾವಣೆಗಳಿವೆಯೋ ಹಾಗೇ ಬದಲಾಗುತ್ತ ಹೋಗುತ್ತದೆ. ಮಳೆಯ ಆರಂಭವೇ ತಡವಾದರೆ ಭಾರತಕ್ಕೆ ಇದರ ಆಗಮನವೂ ತಡವಾಗುತ್ತದೆ. ಈ ಅತಿಥಿಯನ್ನು ನಾವು 'ಜುಟ್ಟು ಕೋಗಿಲೆ' (Pied Crested Cuckoo) ಎಂದು ಕರೆದಿದ್ದೇವೆ.
ತಲೆಯ ಮೇಲೆ ಬಿಳಿ ಮಿಂಚುಳ್ಳಿ, ಚೊಟ್ಟಿ ಗೊರವ ಹಕ್ಕಿಯಂತೆ ಜುಟ್ಟು ಇರುವ ಕಾರಣ ಇದಕ್ಕೆ ಈ ಹೆಸರು. ದೇಹದ ಹಿಂಭಾಗವೆಲ್ಲ ನೀಲಿ, ಹಸಿರು ಮಿಶ್ರಿತ ಕಪ್ಪು ಬಣ್ಣದಿಂದ ಇರುತ್ತದೆ. ಆದರೆ ಕತ್ತಿನಿಂದ ಕೆಳಕ್ಕೆ, ಹೊಟ್ಟೆ ಮತ್ತು ಎದೆಯೆಲ್ಲ ಬೆಳ್ಳಗಾಗಿರುತ್ತದೆ. ರೆಕ್ಕೆಯ ಕೆಳಭಾಗದಲ್ಲೂ ಬೆಳ್ಳಗಾಗಿದ್ದು, ಇದು ಹಾರುವಾಗ ಮಾತ್ರ ಕಾಣಿಸುತ್ತದೆ. ರೆಕ್ಕೆಯ ಗರಿಗಳ ತುದಿಯಲ್ಲಿ ಬಿಳಿಯ ಪಟ್ಟಿಗಳಿರುತ್ತವೆ.
ಈ ಹಕ್ಕಿಯನ್ನು ಭಾರತ ಸೇರಿ ನೆರೆಯ ಬಾಂಗ್ಲ, ಶ್ರೀಲಂಕ, ನೇಪಾಳ, ಪಾಕಿಸ್ತಾನಗಳಲ್ಲಿಯೂ ಕಾಣಬಹುದು. ಸಂತಾನೋತ್ಪತ್ತಿಯ ವೇಳೆಯಲ್ಲಿ ಬೇರೆ ಹಕ್ಕಿಯ ಗೂಡನ್ನು ಹುಡುಕಲು ಆರಂಭಿಸುತ್ತದೆ. ಸಾಮಾನ್ಯವಾಗಿ ಕಾಗೆಯ ಗೂಡಲ್ಲಿ 2 ರಿಂದ 3 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ವಸಂತದ ವೇಳೆಯಲ್ಲಿ ಫ್ಯೂ ಫ್ಯೂ ಫೀ... ಎಂದು ಕೂಗುತ್ತಿರುತ್ತದೆ. ಜುಟ್ಟು ಕೋಗಿಲೆಯನ್ನು ತುರಾಯಿ ಕೋಗಿಲೆ, ಚೊಟ್ಟಿ ಕೋಗಿಲೆ ಎಂದೂ ಕರೆಯುತ್ತಾರೆ.
ಚಿತ್ರ ಕೃಪೆ: ಅಂತರ್ಜಾಲ
Subscribe to:
Post Comments (Atom)
17 comments:
ಉತ್ತಮ ಫೋಟೊಗಳು..
ಸಂಗಡ...
ಉಪಯುಕ್ತ ಮಾಹಿತಿ...
ನಿಮ್ಮ ಹಕ್ಕಿ ಪ್ರಪಂಚ ಉತ್ತಮ ಸಂಗ್ರಹ...
ಅಭಿನಂದನೆಗಳು..
ಅಗ್ನಿ ಸರ್,
ಸೊಗಸಾದ ಫೋಟೊಗಳ ಜೊತೆಗೆ ಬಹಳ ಉಪಯುಕ್ತವಾದ ಮಾಹಿತಿಯನ್ನು ಹಕ್ಕಿಯ ಬಗ್ಗೆ ಹೇಳಿದ್ದೀರಿ...
ಧನ್ಯವಾದಗಳು.
ಅಗ್ನಿಹೋತ್ರಿ ಅವರೆ,
ಕೋಗಿಲೆ ಬಗೆಗಿನ ಲೇಖನ ತುಂಬಾ ಚೆನ್ನಾಗಿವೆ. ಅವುಗಳ ಬಗ್ಗೆ ಒಳ್ಳೆ ಮಾಹಿತಿಗಳನ್ನು ಸಂಗ್ರಹಿಸಿ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು!
ನಿಮ್ಮ ಹಕ್ಕಿ ಪ್ರಪಂಚದ ಮಾಹಿತಿ ಚೆನ್ನಾಗಿದೆ, ತುಂಬಾ ಸುಂದರ ಫೋಟೋಗಳು ಕೂಡಾ
ನಿಮ್ಮೀ ಪಕ್ಷಿ ಪ್ರಪಂಚ ತುಂಬಾ ಚೆನ್ನಾಗಿದೆ. ನಮಗೂ ಮಕ್ಕಳಿಗೂ ಫೋಟೋಗಳ ಜೊತೆಗೆ ಒಳ್ಳೆ ಮಾಹಿತಿಯುಳ್ಳ ತಾಣ. ಹೊಸ ಕೋಗಿಲೆಯ ವಿಚಾರ ತಿಳಿಸಿದಕ್ಕೆ ವಂದನೆಗಳು.
ತುಂಬ ಚೆನ್ನಾಗಿದೆ. ಇ ಕೋಗಿಲೆ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದಿರಿ.
ಫೋಟೋಗಳು ಗಳು ಮತ್ತು ಅ ಹಕ್ಕಿಗಳ ಜೀವನ ಕ್ರಮ, ಆಫ್ರಿಕ ದಿಂದ ಭಾರತಕ್ಕೆ ವಲಸೆ, ಅದರಲ್ಲೂ ಸಹ್ಯಾದ್ರಿ ಲಿ ನೆಲೆ... ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬ ಧನ್ಯವಾದಗಳು
ಪ್ರಕಾಶ್ ಹೆಗ್ಡೆ, ಶಿವೂ ಅವರಿಗೆ ಧನ್ಯವಾದಗಳು. ಜತೆಗೆ ಅಪರೂಪಕ್ಕಾದರೂ ಅಗ್ನಿ ಪ್ರಪಂಚಕ್ಕೆ ಭೇಟಿ ನೀಡುವ ಎಸ್ಎಸ್ ಕೆ, ಬಾಲು ಅವರಿಗೂ ಧನ್ಯವಾದಗಳು. ನಿಮ್ಮ ಬೇಟಿ ಆಗಾಗಲಾದರು ಆಗುತ್ತಿರಲಿ. ಜತೆಗೆ ಗುರುಮೂರ್ತಿ ಹೆಗಡೆ ಅವರಿಗೆ ಸ್ವಾಗತ, ಧನ್ಯವಾದ.
ಅಗ್ನಿ,
ಪಕ್ಷಿಗಳ ಬಗ್ಗೆ ನೀವು ಹಾಕ್ತಾ ಇರೋ ಫೋಟೋಗಳು ಹಾಗೂ ಬರೆಯುವ ವಿವರಗಳನ್ನು ನೋಡಿದರೆ ನನಗೆ ತೇಜಸ್ವಿ ನೆನಪಿಗೆ ಬರ್ತಾರೆ. ಅವರ ಹಾಗೆ ಅಂದರೆ ಬೇರೆ ಮೆಚ್ಚುಗೆ ಬೇಕಾಗಿಲ್ಲ ಅಲ್ವಾ ?
- ಹರೀಶ್ ಕೇರ
ಹರೀಶ್ ಅವರೇ
ಅಸ್ಟೊಂದು ದೊಡ್ಡ ವ್ಯಕ್ತಿಗೆ ಹೋಲಿಕೆ ಬೇಡ. ಆದರೆ ಅವರನ್ನು ನೆನಪಿಸಿಕೊಂಡಿರಲ್ಲ ಅದು ಖುಷಿಯಾಯಿತು. ಅನುಭವಿ ತೇಜಸ್ವಿ ಇನ್ನೊಂದಿಸ್ಟು ದಿನ ಇರಬೇಕಿತ್ತು. ಅವರ ಸಾಧನೆ ಕ್ಷಣ ಕ್ಷಣಕ್ಕೂ ನೆನಪಿಗೆ ಬರತ್ತೆ.
ಧನ್ಯವಾದಗಳು.
ಉಪಯುಕ್ತ ಮಾಹಿತಿಗಳನ್ನು ಕೊಟ್ಟಿದ್ದೀರಿ.
ಧನ್ಯವಾದಗಳು.
ರವಿ
ಜಿಎಸ್ ಬಿ, ಕೋಗಿಲೆ ಅಷ್ಟು ಕಪ್ಪು ಇರೊಲ್ಲ..ಕಾಗೆಗೆ ಹೋಲಿಸಿದರೆ, ಇದು ಕಂದು ಬಣ್ಣದ್ದು, ಇದರ ಮರಿಗಳಿಗೆ ಕಾಗೆಗಳಿಂದ ತೊಂದರೆಯಿಲ್ಲವೇ..?? ಕೋಗಿಲೆ ಕಾಗೆ ಗೂಡಲ್ಲಿ ಮರಿಮಾಡುತ್ತೆ ಅಂತ ಕೇಳಿದ್ದೇನೆ...? ಚಿತ್ರ ಮತ್ತು ಮಾಹಿತಿ ಮಹತ್ತರವಾದುದು.
@ಜಲನಯನ
ಜಿಎಸ್ ಬಿ, ಕೋಗಿಲೆ ಅಷ್ಟು ಕಪ್ಪು ಇರೊಲ್ಲ..ಕಾಗೆಗೆ ಹೋಲಿಸಿದರೆ, ಇದು ಕಂದು ಬಣ್ಣದ್ದು, ಇದರ ಮರಿಗಳಿಗೆ ಕಾಗೆಗಳಿಂದ ತೊಂದರೆಯಿಲ್ಲವೇ..?? ಕೋಗಿಲೆ ಕಾಗೆ ಗೂಡಲ್ಲಿ ಮರಿಮಾಡುತ್ತೆ ಅಂತ ಕೇಳಿದ್ದೇನೆ...? ಎಂದು ಕೇಳಿದ್ದಿರಿ.
ಕೋಗಿಲೆ ಮೊಟ್ಟೆ ಮತ್ತು ಕಾಗೆ ಮೊಟ್ಟೆ ಹೆಚ್ಚು ಕಡಿಮೆ ಒಂದೇ ಗಾತ್ರದಲ್ಲಿ ಇರತ್ತೆ. ಬಣ್ಣದಲ್ಲೂ ವ್ಯತ್ಯಾಸವಿಲ್ಲ. ಹೀಗಾಗಿ ಕಾಗೆಗೆ ಗೊತ್ತೇ ಆಗುವದಿಲ್ಲ. ಕೋಗಿಲೆ ಮೊಟ್ಟೆ ಇದುವಾಗಳು ಅಸ್ಟೆ. ಕಾಗೆ ಇಲ್ಲದಿರುವ ವೇಳೆಯಲ್ಲಿ, ಮೊಟ್ಟೆ ಇಟ್ಟ ಕಾಗೆಯ ಗೂಡಿದೆ ಹೋಗಿ ಇಟ್ಟು ಬರುತ್ತದೆ. ಕೋಗಿಲೆ ಇದರಲ್ಲಿ ಭಾರೀ ಚಾಣಾಕ್ಷ ಹಕ್ಕಿ. ಮೊಟ್ಟೆ ಇಟ್ಟು ಬಂದ ಮೇಲೆ ಮತ್ತೆ ಅತ್ತ ತಲೆ ಎತ್ತಿ ನೋಡದ ಗುಣವೂ ಕೆಲ ಹಕ್ಕಿಗಳಿಗಿವೆ.
Tumba chennagide.Tejaswiyavara "hakki pukka"da nenapaayitu .ede modala saare nimma blogige bandiddene.
Thanks,
ShwetA
ಜಿ.ಎಸ್.ಬಿ. ನಿಮ್ಮ ನಿಸರ್ಗ ಪ್ರೇಮ, ವಿಷಯಗಳ ಗ್ರಹಿಕೆ ಮತ್ತು ಹಂಚುಕೊಳ್ಳುವಿಕೆ...ಮೆಚ್ಚಿದೆ.. ನಿಮ್ಮ ಮುಂದುವರೆದ ಪ್ರಯತ್ನಗಳಿಗೆ ನಮ್ಮ ಯಾವತ್ತೂ ಪ್ರೋತ್ಸಾಹ..ಇದ್ದೇ ಇರುತ್ತೆ.
ಸರ್,
ಅಷ್ಟು ದೂರದ ಆಫ್ರಿಕಾದಿಂದ ಭಾರತಕ್ಕೆ ಬರುವ ಅತಿಥಿಯ ಬಗ್ಗೆ ಉಪಯುಕ್ತ ಮಾಹಿತಿ ಕೊಟ್ಟಿರುವಿರಿ.ಧನ್ಯವಾದಗಳು.
ಜಲನಯನ, ಮಲ್ಲಿಕಾರ್ಜುನ್, ಶ್ವೇತಾ... ನಿಮಗೆಲ್ಲ ಅಗ್ನಿಯ ಧನ್ಯವಾದಗಳು. ಈಗಾಗಲೇ ೧೫೦ ಕ್ಕೂ ಹೆಚ್ಚು ಹಕ್ಕಿಗಳ ಗುಣ, ಸ್ವಭಾವ ಮತ್ತು ವಿಶೇಷತೆಗಳ ಬಗ್ಗೆ ಬರೆದಿದ್ದೇನೆ. ಇದೊಂದು ಹೊಸ ಪ್ರಯತ್ನ ಅಂದು ಕೊಂಡಿದ್ದೇನೆ. ಪುಸ್ತಕ ರೂಪದಲ್ಲಿ ಹೊರತರುವ ಆಸೆ ಇದೆ. ಕಾಲ ಕೂಡಿ ಬಂದಿಲ್ಲ.
ಪ್ರೀತಿಯ ಅಗ್ನಿಹೋತ್ರಿಯವರೇ
ನಿಮ್ಮ ಬ್ಲೋಗ್ ತುಂಬಾ ಚೆನ್ನಾಗಿದೆ...ನಾನು ಕೂಡ ಫೋಟೋಗ್ರಫೀ ತುಂಬಾ ಇಷ್ಟ ಪಡ್ತೀನಿ. ನಿಮ್ಮ ಬರಹಗಳು ತುಂಬಾ ಚೆನ್ನಾಗಿವೆ. ಯಾವ ಕ್ಯಾಮರ ಉಪಯೋಗಿಸುತೀರಾ ತಿಳಿಸಿ.
Post a Comment