Tuesday, July 14, 2009

ಬೀದಿಗೆ ಬಾರದು ಬೂದು ಸಿಪಿಲೆ!

ಳಿ ಜೋರಾ ಗುತ್ತಿದ್ದಂತೆ ಇನ್ನಸ್ಟು ಚಳಿ ಇರುವ ಪ್ರದೇಶಗಳಿಗೆ ವಲಸೆ ಹೋಗುವ ಹಕ್ಕಿಗಳಿವೆ. ಗುಂಪಿಗೆ ಸೇರಿದ ಹಕ್ಕಿಗಳಲ್ಲಿ 'ಬೂದು ಸಿಪಿಲೆ'(Grey Wagtail) ಕೂಡ ಒಂದು. ಸಾಮಾನ್ಯವಾಗಿ ಕೃಷಿಭೂಮಿ, ಜೌಗು ಪ್ರದೇಶಗಳಲ್ಲಿ ಇರುವ ಬೂದು ಸಿಪಿಲೆ ನೋಡಲಿಕ್ಕೆ ಹೆಚ್ಚು ಕಡಿಮೆ ಹಳದಿ ಸಿಪಿಲೆಯಂತೆ ಇರುತ್ತದೆ.
ಬಹುತೇಕ ಪ್ರದೇಶಗಳಲ್ಲಿ ಈ ಹಕ್ಕಿಯನ್ನೇ ಬೂದು ಸಿಪಿಲೆ ಎಂದು ಕರೆಯುವುದುಂಟು. ಈ ಹಕ್ಕಿಗೂ ಬೂದು ಸಿಪಿಲೆಗೂ ಹೆಚ್ಚೇನು ವ್ಯತ್ಯಾಸವಿಲ್ಲ. ಬೂದು ಸಿಪಿಲೆಯ ಮೇಲ್ಭಾಗವೆಲ್ಲ ಬೂದು ಮಿಶ್ರಿತ ಕಂದು ಬಣ್ಣದಿಂದ ಇದ್ದರೆ, ಹಳದಿ ಸಿಪಿಲೆಯ ಮೇಲ್ಭಾಗವೆಲ್ಲ ಹಳದಿ ಮಿಶ್ರಿತ ಕಪ್ಪು ಬಣ್ಣ. ಅಕ್ಕ-ಪಕ್ಕಕ್ಕೆ ನಿಲ್ಲಿಸಿದರೆ ಗುರುತಿಸುವುದು ಬಹಳ ಕಷ್ಟ. ಗಾತ್ರದಲ್ಲೂ ತೀರಾ ವ್ಯತ್ಯಾಸವಿಲ್ಲ. ಹಳದಿ ಸಿಪಿಲೆ ಕೊಂಚ ಚಿಕ್ಕದಿರಬಹುದು. ಇನ್ನುಳಿದ ಸಿಪಿಲೆಗಳಂತೆ ಬಾಲವನ್ನು ಮೇಲಕ್ಕೆ-ಕೆಳಕ್ಕೆ ಅಲ್ಲಾಡಿಸುತ್ತಾ ಇರುತ್ತದೆ. ಹೆಚ್ಚಿನ ಸಮಯವನ್ನು ನೆಲದ ಮೇಲೆ ನಡೆದಾಡಿಕೊಂಡು ಕಳೆಯುವ ಬೂದು ಸಿಪಿಲೆ ಕ್ಷಣಕ್ಷಣಕ್ಕೂ ಜಂಪ್ ಮಾಡುತ್ತಿರುತ್ತದೆ. ಅನಿವಾರ್ಯ ಎನಿಸಿದಾಗ ಮಾತ್ರ ಹಾರುತ್ತದೆ. ಓಟದಲ್ಲಿಯೂ ಈ ಹಕ್ಕಿ ಯಾರಿಗೂ ಪೈಪೋಟಿ ನೀಡಬಲ್ಲದು.
ಬೂದು ಸಿಪಿಲೆ ಬಹಳ ಚುರುಕಿನ ಹಕ್ಕಿ. ಗಾಬರಿಯಾದಾಗಲೆಲ್ಲ ಸ್ವೀಸ್ ಸ್ವಿಸ್... ಎಂದು ಸದ್ದು ಮಾಡುತ್ತಿರುತ್ತದೆ. ಗಾತ್ರದಲ್ಲಿ ಗುಬ್ಬಚ್ಚಿಗಿಂತ ಸ್ವಲ್ಪ ದೊಡ್ಡದು. ಎದೆ, ಹೊಟ್ಟೆ ಭಾಗ ಹಳದಿ ಮಿಶ್ರಿತ ಬೆಳ್ಳಗಿನ ಬಣ್ಣದಿಂದ ಇರುತ್ತದೆ. 8 ವರ್ಷ ಬದುಕಿರುವ ಬೂದು ಸಿಪಿಲೆ ಹಕ್ಕಿಯನ್ನು ಬೂದು ಕುಂಡೆಕುಸ್ಕ, ಬೂದು ದಾಸರಿ, ಬೂದು ಬಾಲಾಡಿ ಎಂದೂ ಕರೆಯುತ್ತಾರೆ. ಚಾರ್ಚ್-ಅಕ್ಟೋಬರ್ ತಿಂಗಳಾವಧಿಯಲ್ಲಿ 4-5 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಕೀಟಗಳು ಇದರ ಪ್ರಮುಖ ಆಹಾರ.
------------------------------

'ಸಿಮೆಂಟ್' ಬೆಳ್ಳಕ್ಕಿ ಇದು ಕಡಲ ಹಕ್ಕಿ
ಡೀ ದೇಹಕ್ಕೆ ಸಿಮೆಂಟ್!
ಇದೇನು ಜೀವಂತ ಹಕ್ಕಿಯೋ ಅಥವಾ ಸಿಮೆಂಟಿನಿಂದ ರಚಿತ ನಿರ್ಜೀವ ಕಲಾಕೃತಿಯೋ ಎಂದು ನೀವು ಹುಬ್ಬು ಮೇಲೇರಿಸಿದರೆ ಆಶ್ಚರ್ಯವಿಲ್ಲ. ಅಸ್ಟರಮಟ್ಟಿಗೆ ಈ ಹಕ್ಕಿಗೆ ಸಿಮೆಂಟ್ ಬಣ್ಣ. ಪ್ರಾದೇಶಿಕವಾಗಿ ಈ ಹಕ್ಕಿಯನ್ನು ಸಿಮೆಂಟ್ ಬೆಳ್ಳಕ್ಕಿ ಎಂದು ಕರೆದಿದ್ದಾರೆ. ಕತ್ತಿನ ಕೆಳಭಾಗ, ರೆಕ್ಕೆಗಳ ಕೆಳಭಾಗ ಮತ್ತು ಹೊಟ್ಟೆಯಿಂದ ಪುಕ್ಕದ ನಡುವಿನ ಭಾಗದಲ್ಲಿ ಬೆಳ್ಳಗಾಗಿರುತ್ತದೆ.
ಅಸ್ತಕ್ಕು ಈ ಹಕ್ಕಿ ಎಲ್ಲೆಂದರಲ್ಲಿ ಕಾಣಸಿಗುವುದಿಲ್ಲ. ಸಾಮಾನ್ಯವಾಗಿ ಬೆಳ್ಳಕ್ಕಿಗಳು ಗದ್ದೆ, ಜೌಗು ಪ್ರದೇಶ ಮತ್ತು ಹುಲ್ಲುಗಾವಲು ಪ್ರದೇಶಗಳಲ್ಲಿ ಇರುವುದು ಜಾಸ್ತಿ. ಆದರೆ ಈ 'ಕಡಲ ಬೆಳ್ಳಕ್ಕಿ' (Western Reef Heron ) ಹಾಗಲ್ಲ. ಹೆಸರಿಗೆ ತಕ್ಕಂತೆ ಇದರ ವಾಸವೆನಿದ್ದರೂ ಸಮುದ್ರಕ್ಕೆ ಸನಿಹದಲ್ಲೆ.
ವಿಶೇಷವೆಂದರೆ ಈ ಕಡಲ ಬೆಳ್ಳಕ್ಕಿಗೆ ಸಮುದ್ರದ ಅಲೆಗಳ ಭಯವೇ ಇಲ್ಲ. ಅದೆಸ್ಟೇ ದೊಡ್ಡ ಅಲೆ ಬಂದರೂ ನಿರ್ಭೀತಿಯಿಂದ ತೀರದಲ್ಲಿ ಬೇಟೆಯಾಡುತ್ತಿರುತ್ತವೆ. ಸಮುದ್ರದ ಸಣ್ಣ ಸಣ್ಣ ಜೀವಿಗಳೇ ಇದರ ಆಹಾರ. ಬಿಳಿ ಏಡಿ ಎಂದರಂತೂ ಈ ಹಕ್ಕಿಗೆ ಪಂಚಪ್ರಾಣ. ಮುಂಗಾರು ಆರಂಭಗೊಂಡು ಸಮುದ್ರ ತನ್ನ ಅಬ್ಬರದ ಗರ್ಜನೆ ಆರಂಭಿಸಿದಾಗಲಂತೂ ಅಲ್ಲಿಂದ ಅಲ್ಲಾಡುವುದಿಲ್ಲ. ಆಗ ಜೀವಿಗಳು ಕಾಣಿಸಿಕೊಳ್ಳುತ್ತವೆಂದು ಚೆನ್ನಾಗಿ ಅರಿತಿದೆ ಈ ಬೆಳ್ಳಕ್ಕಿ.
ಈ ಹಕ್ಕಿಯಲ್ಲಿ ಕಾಣಬಹುದಾದ ಇನ್ನೊಂದು ವಿಶೇಷವೆಂದರೆ ಸಂತಾನೋತ್ಪತ್ತಿಯ ವೇಳೆಯಲ್ಲಿ ಹೆಣ್ಣು ಹಕ್ಕಿಯ ನೆತ್ತಿಯಿಂದ ನೀಳವಾದ ಜುಟ್ಟು ಬೆಳೆಯುತ್ತಾ ಇರುತ್ತದೆ. ಸಾಮಾನ್ಯವಾಗಿ ಏಪ್ರಿಲ್-ಜುಲೈ ಅವಧಿಯಲ್ಲಿ 2-4 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಭಾರತ, ಲಂಕಾ, ಬಾಂಗ್ಲಗಳಲ್ಲಿ ಈ ಹಕ್ಕಿಯ ಸಂತತಿ ಇದೆ. ಹಾರಾಟದಲ್ಲಿ ಎಷ್ಟು ನಿಪುಣ ಹಕ್ಕಿಯೋ ಅಸ್ಟೇ ಜಿಪುಣ ಕೂಡ ಹೌದು.

9 comments:

shivu.k said...

ಅಗ್ನಿ ಸರ್,

ನಿಮ್ಮ ಹಕ್ಕಿಗಳ ಫೋಟೋ ತುಂಬಾ ಚೆನ್ನಾಗಿರುತ್ತವೆ ಮತ್ತು ಉತ್ತಮ ಮಾಹಿತಿಯನ್ನು ನೀಡುತ್ತಿವೆ...ಥ್ಯಾಂಕ್ಸ್...

ರೂpaश्री said...

pratiyondu asla hosatondu pakshiya bagge tiLisi koDuva nimage thanks:)

sunaath said...

Very good information and very good photos.

Anonymous said...

ನಿಮ್ಮ ಪೋಸ್ಟ್ ನ ವಿಶೇಷತೆ ಅಂದ್ರೆ ಒಳ್ಳೇ ಫೋಟೋಗಳು ಮತ್ತು ಬೇರೆ ಬೇರೆ ಹಕ್ಕಿಗಳ ಬಗ್ಗೆ ಮಾಹಿತಿ!! ಈ ಸಾರಿನೂ as usual and expected.. ತುಂಬಾ ಚೆನ್ನಾಗಿ ಬಂದಿದೆ.. ಸಿಮೆಂಟ್ ಬೆಲ್ಲಕ್ಕಿ ಫೋಟೋ ನೋಡಿ..ಎಲ್ಲಾದ್ರೂ ಸಿಕ್ಕಿದ್ರೆ ತಂದು ಇಟ್ಕೊಳ್ಳೋಣ ಅನ್ನಿಸ್ತು!!

ಜಿ.ಎಸ್.ಬಿ. ಅಗ್ನಿಹೋತ್ರಿ said...

ಅಭಿಪ್ರಾಯ ಹಂಚಿಕೊಂಡ ಎಲ್ಲರಿಗೂ ಥ್ಯಾಂಕ್ಸ್.
@ಸುಮನಾ
ನಿಮ್ಮ ಕಾಮೆಂಟ್ ನೋಡಿ ಖುಷಿಯಾಯಿತು. ಹಕ್ಕಿಗಳೇ ಹಾಗೆ ಅದರ ಒಂದೊಂದು ಚಟುವಟಿಕೆ ಕಂಡಾಗ ಸಾಕಿಕೊಳ್ಳೋಣ ಅನಿಸುತ್ತೆ. ಅದರಲ್ಲೂ ಕೆಲವು ಚಿಕ್ಕ ಚಿಕ್ಕ ಹಕ್ಕಿಗಳು ಇನ್ನೂ ಮುದ್ದಾಗಿರುತ್ತವೆ.

ಜಿ.ಎಸ್.ಬಿ. ಅಗ್ನಿಹೋತ್ರಿ said...

@ಶಿವೂ
ನಿಮ್ಮಲ್ಲಿ ಇರುವ ಹಕ್ಕಿಗಳ ಫೋಟೋ ಕಳಿಸಿ ಕೊಡ್ತಿರಾ? ನನ್ನ ಪುಸ್ತಕಕ್ಕೆ ಬಳಸಿಕೊಳ್ಳುವೆ. ಅಭ್ಯಂತರ ಇಲ್ಲ ಎಂದಾದರೆ ಮಾತ್ರ.

SSK said...

ಅಗ್ನಿಹೋತ್ರಿ ಅವರೇ,
ಅಧ್ಬುತವಾದ ಮಾಹಿತಿ ಮತ್ತು ಸುಂದರ ಫೋಟೋಗಳು! ಒಟ್ಟಾರೆ ನಿಮ್ಮ ಹಕ್ಕಿಗಳ ಬಗೆಗಿನ ಲೇಖನ ವಿಶಿಷ್ಟವಾಗಿವೆ, ಮುಂದುವರೆಸಿ ...!!

ಮನಸಿನ ಮಾತುಗಳು said...

Agni sir,
nimma ee article ishta aytu...:):)
pakshigala bagge neevu bareyuva lekhana tumba maahiti vadagisuttade...:):)

ಚಂದಿನ | Chandrashekar said...

ಉಪಯುಕ್ತ ಮಾಹಿತಿ - ಆಕರ್ಷಕವಾದ ಹಕ್ಕಿಗಳ ಫೋಟೊಗಳು.