Tuesday, December 29, 2009

ಸಾಹಸ ಸಿಂಹ ವಿಷ್ಣುವರ್ಧನ್ ವಿಧಿವಶ

ಸಾಹಸ ಸಿಂಹ ವಿಷ್ಣು ವರ್ಧನ್ ವಿಧಿವಶ ರಾಗಿದ್ದಾರೆ. ಮೈಸೂರಿಗೆ ವಿಶ್ರಾಂತಿ ಗಾಗಿ ಹೋದ ಸಂದರ್ಭ ದಲ್ಲಿ ಹೃದಯಾ ಘಾತಕ್ಕೆ ಒಳಗಾಗಿ ದ್ದಾರೆ. ಕನ್ನಡ ಚಿತ್ರರಂಗ ದಲ್ಲಿ ಸಾಕಷ್ಟು ಹೆಸರು ಮಾಡಿರುವ ವಿಷ್ಣುವರ್ಧನ್ ನಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟರಾಗಿದ್ದರು. ಗಾನ ಗಾರುಡಿಗ ಸಿ. ಅಶ್ವತ್ಥ್ ಅವರನ್ನು ಕಳೆದುಕೊಂಡ ಬೆನ್ನಲ್ಲೇ ಈಗ ವಿಷ್ಣುವರ್ಧನ್ ಅವರನ್ನೂ ಕಳೆದುಕೊಂಡಿದ್ದೇವೆ. ಭುದವಾರ ಬೆಳಗಿನ ಜಾವ ಎರಡುವರೆ ಹೊತ್ತಿಗೆ ವಿಧಿವಶರಾದರು. ಕಳೆದ ಕೆಲವು ದಿನಗಳಿಂದ ಹೃದಯ ನೋವಿನಿಂದ ಬಳಲುತ್ತಿದ್ದರು.


8 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಕಾಲವನ್ನು ತಡೆಯೊರು..ಯಾರೂ..ಇಲ್ಲಾ..

Ashok Uchangi said...

ಸಾಹಸ ಸಿಂಹ ಅಭಿನಯ ಭಾರ್ಗವ ಡಾ||ವಿಷ್ಣುವರ್ಧನ್ ಆತ್ಮಕ್ಕೆ ಚಿರಶಾಂತಿ ಸಿಗಲಿ
ashok uchangi
http://mysoremallige01.blogspot.com/

ಶಿವಪ್ರಕಾಶ್ said...

ಕನ್ನಡಕ್ಕೆ, ಕನ್ನಡಿಗರಿಗೆ ತುಂಬಲಾರದ ನಸ್ಟ.

AntharangadaMaathugalu said...

ಕನ್ನಡದಲ್ಲಿ ಇನ್ನು ಹೆಸರಿಸುವಂತಹ ನಟರಾರೂ ಇಲ್ಲ. ವಿಷ್ಣು ವರ್ಧನ್ ಅವರ ಸ್ಟೈಲೇ ಬೇರೆಯಾಗಿತ್ತು. ಅವರ ಕೆಲವು ಚಿತ್ರಗಳು ಮರೆಯಲಾಗದಂತವು. ನಿನ್ನೆಯ ವಿಕ ಪತ್ರಿಕೆಯಲ್ಲಿನ ವರದಿಯೆಲ್ಲಾ ಓದಿ, ನಿಜಕ್ಕೂ ಬೇಸರವಾಯಿತು. ಸಿನಿಮಾ ಎಲ್ಲರೂ ಬೆಳೆಯಬಹುದಾದ ಒಂದು ಮಹಾನ್ ಉದ್ದಿಮೆ, ಅದರಲ್ಲಿ ಈ ತರಹದ ರಾಜಕೀಯವೇಕೋ ಕಾಣೆ. ಅಗಲಿದ ವಿಷ್ಣು ಅವರ ಆತ್ಮಕ್ಕೆ ಶಾಂತಿ ಕೋರುತ್ತಾ...

ಶ್ಯಾಮಲ

ಸೀತಾರಾಮ. ಕೆ. / SITARAM.K said...

ಅಗಲಿದ ಗಣ್ಯರಿಗೆ ಅರ್ಥಪೂರ್ಣ ನುಡಿನಮನ. ಕನ್ನಡನಾಡಿನ ಅನರ್ಘ್ಯರತ್ನಗಳು-ವಿಷ್ಣು ಹಾಗೂ ಅಶ್ವಥರು.

ದಿನಕರ ಮೊಗೇರ said...

ನಿಜ ಸರ್, ಕನ್ನಡಕ್ಕೆ ಆದ ನಿಜವಾದ ನಷ್ಟ ............. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ..........

ಸಾಗರದಾಚೆಯ ಇಂಚರ said...

ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ

Anonymous said...

nijari kaalavannu tadeyoru yaaru illa.
chikkolagiddaglinda vishnu fan. in fact U wont believe, dat I wanted to become arathi and marry vishnuvrdhan. the whole day while watching his funeral i cudnt control and kept weeping the whole day and the next 3 days too... we lost him! i just cant believe it. is he really gone?! :-(
Asha.