
ಅದೇನೋ ಕಳೆದು ಕೊಂಡ ವರಂತೆ ಇರುತ್ತದೆ. ಯಾವತ್ತೂ ಚಿಂತಾ ಕ್ರಾಂತ. ಎಲ್ಲಿಲ್ಲದ ಹುಮ್ಮಸ್ಸು ಬಂತೆಂದರೆ ಮರ ಸುತ್ತುವ ಹವ್ಯಾಸ ಇದರದು. ಅತ್ತಿತ್ತ ಸಣ್ಣಪುಟ್ಟ ಸದ್ದಾದರೂ ಕಕ್ಕಾಬಿಕ್ಕಿಯಾಗಿ ಚಡಪಡಿಸುತ್ತದೆ.
ತನ್ನದೇ ಜಾತಿಗೆ ಸೇರಿದ ಇನ್ನೊಂದು ಹಕ್ಕಿ ವಾಸ ಮಾಡಿ ಬಿಟ್ಟ ಪೊಟರೆಯನ್ನೇ ಹುಡುಕಿಕೊಂಡು ತನ್ನ ಮನೆ ಮಾಡಿಕೊಳ್ಳತ್ತೆ. ಈ 'ಹಸಿರು ಮರಕುಟುಕ' (Little green Woodpecker ).
ಹಾಗಂತ ಈ ಹಕ್ಕಿಗೆ ಪೊಟರೆ ಕೊರೆದುಕೊಳ್ಳಲು ಬಾರದು ಎಂದೇನಿಲ್ಲ. ಎಲ್ಲ ಹಕ್ಕಿಗಳನ್ನಸ್ಟೇ ಮರ ಕೊರೆಯುತ್ತದೆ. ಮರಗಳಲ್ಲಿ ಇರುವ ಕೀಟ, ಗೆದ್ದಲು ಹುಳು ಹಾಗೂ ಆಲ, ಮತ್ತಿ ಹಣ್ಣುಗಳೇ ಈ ಹಕ್ಕಿಗೆ ಆಹಾರ.
ನೋಡಲು ಗೊರವಂಕ ಹಕ್ಕಿಗಿಂತ ಸ್ವಲ್ಪ ಚಿಕ್ಕದು. ಇದರ ರೆಕ್ಕೆಗಳು ಹಸಿರಾಗಿರುತ್ತವೆ. ಎದೆ ಮತ್ತು ಹೊಟ್ಟೆ ಭಾಗ ಹಳದಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುತ್ತವೆ. ಕೊಕ್ಕು ಕೂಡ ಹಸಿರು ಮಿಶ್ರಿತ ಬೂದು ಬಣ್ಣದಿಂದ ಇರುತ್ತದೆ. ಗೆದ್ದಲು ಹುಳುಗಳನ್ನು ಹಿಡಿದು ತಿನ್ನುವ ವೈಖರಿ ಆಕರ್ಷಣಿಯ.
ಭಾರತ ಸೇರಿ ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾ ದೇಶಗಳಲ್ಲಿ ಈ ಹಕ್ಕಿಗಳನ್ನು ನೋಡಲು ಸಾಧ್ಯ. ಜನವರಿ ವೇಳೆಗೆಲ್ಲಾ ಸ್ವಲ್ಪ ತೇವಭರಿತ ಹವಾಮಾನ ಇರುವ ಜಾಗಕ್ಕೆ ವಲಸೆ ಹೋಗಿ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತದೆ. ಜೂನ್ ವೇಳೆಗೆಲ್ಲ ನಾಲ್ಕಾರು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಗೆದ್ದಲು, ದುಂಬಿ ಈ ಹಕ್ಕಿಯ ಪ್ರಮುಖ ಆಹಾರ.
ಪ್ರಾದೇಶಿಕವಾಗಿ ಈ ಹಕ್ಕಿಗೆ ಪಾಚಿ ಮರಕುಟುಕ, ಸಣ್ಣ ಮರಕುಟುಕ, ಹಸಿರು ಕುಟುಕ ಎಂದೆಲ್ಲ ಕರೆಯುತ್ತಾರೆ.
ಚಿತ್ರ: ಅಂತರ್ಜಾಲ
6 comments:
ಒಂದು ಹಕ್ಕಿಯ ಮನೋಸ್ಥಿತಿಯನ್ನು ಓರ್ವ ವ್ಯಕ್ತಿಯ ಮನೋಸ್ಥಿತಿಯಂತೆ ವರ್ಣಿಸಿದ ಪರಿ ತುಂಬ ಚೆನ್ನಾಗಿದೆ.
ವಾವ್ ಹಕ್ಕಿಯ ಬಗೆಗಿನ ವರ್ಣನೆ ತುಂಬಾ ಚೆನ್ನಾಗಿದೆ
ಫೋಟೋಗಳು ಸುಂದರ
ನಿಜಕ್ಕು ಹಕ್ಕಿಯ ಗುಣಧರ್ಮದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಫೋಟೋಸ್ ಬಗ್ಗೆ ಯಾವತ್ತಿಗೂ ಎರಡು ಮಾತಿಲ್ಲ.:)
ಚೆ೦ದದ ಉಪಯುಕ್ತ ಮಾಹಿತಿಯ ಲೇಖನ.
ಹಕ್ಕಿಗಳನ್ನು ಕಂಡರೆ ನನ್ನ ಮನ ಅವುಗಳ ಜೊತೆ ಕುಣಿಯ ತೊಡಗುತ್ತದೆ! ಚೆನ್ನಾಗಿದೆ
ಬರಹ ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲ ಸ್ನೇಹಿತ, ಸ್ನೇಹಿತೆಯರಿಗೆ ಧನ್ಯವಾದಗಳು...
Post a Comment