Sunday, July 26, 2009

ಹೇಯ್ ತರ್ಲೆ... 'ದೊಡ್ಡ ಹೆಜ್ಜಾರ್ಲೆ'


ಬ್ಬಬ್ಬಾ... ಇಸ್ಟೊಂದು ದೊಡ್ಡ ಬಾತುಕೋಳಿ..!
ನೀವಂದುಕೊಂಡಂತೆ ಇದು ಖಂಡಿತ ಬಾತುಕೋಳಿಯಲ್ಲ. ಬಾತುಕೋಳಿಗಿಂತ ಸಾಕಷ್ಟು ದೊಡ್ಡದಾಗಿರುವ ಜಲಪಕ್ಷಿ. ನಂಬಲಿಕ್ಕೇ ಅಸಾಧ್ಯ. ಇದು ಮಾಂಸಹಾರಿಯೂ ಹೌದು, ಸಸ್ಯಹಾರಿಯೂ ಹೌದು!
ಹಾಗಾದರೆ ಇದಾವ ಜಾತಿಗೆ ಸೇರಿದ ಹಕ್ಕಿ ಎಂದು ತಡಕಾಡಿದರೆ ನಿಮಗೆ ಸಿಗದಿರುವ ಹಕ್ಕಿಯೇನಲ್ಲ. ಸುಲಭವಾಗಿಯೇ ಗುರುತಿಸುತ್ತೀರಿ. ಇದು ಹೆಜ್ಜಾರ್ಲೆ ಜಾತಿಗೆ ಸೇರಿದ ಹಕ್ಕಿ. ಗಾತ್ರದಲ್ಲಿ ಸಾಮಾನ್ಯ ಹೆಜ್ಜಾರ್ಲೆಗಿಂತ ದೊಡ್ಡದಾಗಿರುವ ಕಾರಣ ಇದನ್ನು ದೊಡ್ಡ ಹೆಜ್ಜಾರ್ಲೆ, ಬಿಳಿ ಜೋಳಿಗೆ ಕೊಕ್ಕ (Great White Pelicon) ಎಂದು ಕರೆಯುತ್ತಾರೆ.
ಜಾತಿಯ ಹಕ್ಕಿಗಳಲ್ಲಿ ಇದು ಭಾರೀ ಗಾತ್ರದ ಹಕ್ಕಿ. ಹದ್ದಿಗಿಂತ ದೊಡ್ಡದಾದ ಹಕ್ಕಿ. ರೆಕ್ಕೆ ಬಿಚ್ಚಿ ನಿಂತರೆ ಹಕ್ಕಿಯ ಅಗಲ ಕನಿಷ್ಠ ನಾಲ್ಕು ಅಡಿ ಇರುತ್ತದೆ. ಅಂದಾಜು ಎರಡರಿಂದ ಎರಡೂವರೆ ಅಡಿ ಉದ್ದವಿರುತ್ತದೆ. ಹಕ್ಕಿಗೆ ಯಾವತ್ತೂ ನೀರಿನಲ್ಲಿ ತೆಲಾಡುವುದೆಂದರೆ ಬಲು ಇಷ್ಟ. ಕೆರೆಯಲ್ಲೇ ಮುಳುಗೇಳುತ್ತ ಕಾಲ ಕಳೆಯುತ್ತದೆ. ಅಗಾಗ ಇನ್ನುಳಿದ ಜಲಜೀವಿಗಳಿಗೆ ತರ್ಲೆ ಮಾಡುತ್ತಿರುತ್ತದೆ.
ನೀರಿಗೆ ಬರುವ ಸಣ್ಣಪುಟ್ಟ ಜೀವಿಗಳು, ನೀರಲ್ಲೇ ಬೆಳೆಯುವ ಹುಲ್ಲುಗಳನ್ನು ತಿಂದು ಬದುಕುತ್ತವೆ. ಹಕ್ಕಿಯಲ್ಲಿ ಕಾಣಬಹುದಾದ ವಿಶೇಷವೆಂದರೆ ದೊಡ್ಡ ಹೆಜ್ಜಾರ್ಲೆ ಬೇಟೆಗಾಗಿ ದಿಡೀರ್ ಎಂದು ನೀರೊಳಗೆ ನುಗ್ಗಿ ಮೀನು, ಹಾವುಗಳನ್ನು ಹಿಡಿದು ತಿನ್ನುತ್ತದೆ. ಅದರಲ್ಲೂ ಇದರ ಬಲಿಷ್ಟ ಕೊಕ್ಕುಗಳು ಇದಕ್ಕೆ ಅನುಕೂಲವಾಗಿದೆ ಕೊಕ್ಕಿನ ಕೆಳಕ್ಕಿರುವ ಚೀಲ ಹಕ್ಕಿಯ ಬಂಡವಾಳ. ಕೊಕ್ಕು ಕತ್ತಿನಸ್ಟೇ ಉದ್ದವಾಗಿರುತ್ತದೆ.
ಸಾಮಾನ್ಯವಾಗಿ ವವೆಂಬರ್-ಮೇ ತಿಂಗಳಿನ ಅವಧಿಯಲ್ಲಿ ಎರಡರಿಂದ ಮೂರು ಮೊಟ್ಟೆ ಇಟ್ಟು ಮರಿಮಾಡುತ್ತದೆ. ಸಂತಾನೋತ್ಪತ್ತಿ ವೇಳೆ ನೆತ್ತಿಯ ಮೇಲೆ ಬೆಳ್ಳಗಿನ ಜುಟ್ಟು ಬರುತ್ತದೆ. ಹಕ್ಕಿಯ ದೇಹ ಬೆಳ್ಳಗಿರುತ್ತದೆ. ಅಥವಾ ಅಲ್ಲಲ್ಲಿ ಬೂದು ಮಿಶ್ರಿತ ಬೆಳ್ಳಗಿನ ಬಣ್ಣವಿರುತ್ತದೆ. ಕೊಕ್ಕು ಮತ್ತು ಕಾಲುಗಳಲ್ಲಿ ಹಳದಿ ಮಿಶ್ರಿತ ಬೆಳ್ಳಗಿನ ಬಣ್ಣ ಇರುತ್ತದೆ. ಸಣ್ಣ ಸಣ್ಣ ಮೀನುಗಳೆಂದರೆ ಹಕ್ಕಿಗೆ ಪಂಚಪ್ರಾಣ. ಇದಕ್ಕೆ ತನ್ನ ಕೊಕ್ಕಿನ ಕೆಳಕ್ಕಿರುವ ಜೋಳಿಗೆಯನ್ನು ಚೆನ್ನಾಗಿ ಬಳಸಿಕೊಳ್ಳುತ್ತದೆ.

11 comments:

sunaath said...

ಈ ಭಾರೀ ಹಕ್ಕಿಯ ಫೋಟೋ ನೋಡಿ ಹಾಗು ವಿವರಣೆಯನ್ನು ಓದಿ ಖುಶಿಯಾಯಿತು.

Ittigecement said...

ಸೊಗಸಾದ ವಿವರಣೆಯೊಂದಿಗೆ...

ಚಂದದ ಫೋಟೊಗಳು....

ಅಭಿನಂದನೆಗಳು...

ಶ್ರೀನಿವಾಸಗೌಡ said...

ಸಾರ್ ನಿಮ್ಮ ಬ್ಲಾಗ್ ಓದೋದೆ ಒಂದು ಖುಷಿ, ನಿಮ್ಮ ವಿವರಣೆ ಪೋಟೋಗಳು ಆರಕರ್ಷಕ, ನಾವು ಈ ಪಕ್ಷಿಗಳನ್ನೆಲ್ಲಾ ನೋಡಿದ್ದೀವಿ, ಆದ್ರೆ ಅವುಗಳ ಹೆಸ್ರೂ, ಅವುಗಳ ಕಿಲಾಡಿತನ ಎಲ್ಲಾ ಗೊತ್ತಿರಲಿಲ್ಲ, ನಾವು ನಿಮ್ಮ ಬ್ಲಾಗ್ ನ ನಿರಂತರ ಓದುಗರು, ನೀವು ಬರೀತಾ ಇರಿ ನಾವು ಒದ್ತೀವಿ, ಬಿಡದೇ....

SSK said...

Very interesting....,
thanks for nice article & photos with information.

ಜಿ.ಎಸ್.ಬಿ. ಅಗ್ನಿಹೋತ್ರಿ said...

ಓದಿ ಖುಷಿ ಪಟ್ಟ ಎಲ್ಲರಿಗೂ ಧನ್ಯವಾದಗಳು...
@ಶ್ರೀನಿವಾಸ
ನಿಮ್ಮಂತ ಓದುಗರಿಗಾದರು ಬರಿತಾ ಇರ್ತೀನಿ. ನಿಮ್ಮೆಲ್ಲರ ಆಸಕ್ತಿಯೇ ನನ್ನ ಉತ್ಸಾಹಕ್ಕೆ ಶ್ರೀರಕ್ಷೆ.

Shweta said...

ಪಕ್ಷಿಗಳದೆ ಸಂಭ್ರಮ... ಕುಶಿ ಆಯಿತು ....ತುಂಬಾ ಚೆನ್ನಾಗಿದೆ.....

ಪ್ರಿಯಾ ಕೆರ್ವಾಶೆ said...

NICE ..INTERESTING ARTICLE

shivu.k said...

ಅಗ್ನಿ ಸರ್,

ಹೆಜ್ಜಾರ್ಲೆ ಚಿತ್ರ ಸಹಿತ ಲೇಖನ ತುಂಬಾ ಚೆನ್ನಾಗಿದೆ. ಅದರ ಬಗ್ಗೆ ಅನೇಕ ಮಾಹಿತಿಗಳನ್ನು ನೀಡಿದ್ದೀರಿ..

ಇದನ್ನು ಕೊಕ್ಕರೇ ಬೆಳ್ಳೂರಿನಲ್ಲಿ ನೋಡಿದ್ದೆ...

ಧನ್ಯವಾದಗಳು.

ಜಿ.ಎಸ್.ಬಿ. ಅಗ್ನಿಹೋತ್ರಿ said...

ಶ್ವೇತಾ, ಪ್ರಿಯಾ ಅವರಿಗೆ ಧನ್ಯವಾದಗಳು. ನಿಮ್ಮ ಬ್ಲಾಗ್ ಗಳನ್ನೂ ಭೇಟಿ ಮಾಡಿದ್ದೇನೆ. ಇನ್ನು ಭೇಟಿ ಮಾಡುತ್ತಿರುತೇನೆ.
@ಶಿವೂ
ಇಂದು ಈ ಜಾತಿಯ ಜಲಪಕ್ಷಿಗಳು ತೀರ ವಿರಳವಾಗುತ್ತಿದೆ ಎನ್ನುವುದು ಬೇಸರದ ಸಂಗತಿ.

ಜಲನಯನ said...

ಅಗ್ನಿ ಒಳ್ಳೆಯ ಮಾಹಿತಿಯನ್ನು ಹೊತ್ತ ಚಿತ್ರಗಳ ಸೊಬಗು ...ವಿವರಣೆ ಚನ್ನಾಗಿದೆ...

ಶಶಿಧರ ಹೆಗಡೆ ನಂದಿಕಲ್ said...

Dosta blog tumba chenda iddu. asooye aaguvastu cholo madidde.