Saturday, March 14, 2009

''ಮರ ಜಿರಲೆ'' (Cicadas)



ಇದು ಅಸಾಮಾನ್ಯ ಕೀಟ. ಮಲೆನಾಡಿನ ಬಹುತೇಕ ಕಡೆ ಈ ಕೀಟವನ್ನು ನೋಡಲು ಸಾದ್ಯ. ಜಿರಲೆ ಜಾತಿಗೆ ಸೇರಿದ್ದು. ಮಲೆನಾಡಿನಲ್ಲಿ ಇದಕ್ಕೆ ''ಮರ ಜಿರಲೆ'' (Cicadas) ಎಂದೇ ಕರೆಯಲಾಗುತ್ತದೆ. ಪ್ರಾದೇಶಿಕವಾಗಿ ಇನ್ನೂ ಬೇರೆ ಬೇರೆ ಹೆಸರುಗಳಿವೆ. ಮರಗಿರ್ಕಾ, ಮರ್ಜಿರ್ಲೆ, ಮರ್ಕೀಟಾ ಎಂದೂ ಕರೆಯುವುದುಂಟು. ಹೆಸರಿಗೆ ತಕ್ಕಂತೆ ಇದೊಂತರ ವಿಚಿತ್ರ ಕೀಟ. ಇನ್ನೇನು ಮುಸ್ಸಂಜೆ ಹೊತ್ತು ಎಂದು ಗೊತ್ತಾಗುತ್ತಿದ್ದಂತೆ ಜಿರ್ ರ್ರ್ ರ್ರ್ ರ್ರ್ ರ್ರ್ ಎಂದು ಕೂಗಿಕೊಳ್ಳುತ್ತಲೆ ಇರುತ್ತದೆ. ದಟ್ಟ ಕಾನನದೊಳಕ್ಕೆ ನುಗ್ಗಿನೋಡಿ ಸದಾ ಕಾಲ ಇದೇ ತರ ಕೂಗಿಕೊಳ್ಳುತ್ತದೆ.
ಅಷ್ಟಕ್ಕೂ ಯಾವ ಕಾರಣಕ್ಕಾಗಿ ಕೂಗಿಕೊಳ್ಳುತ್ತವೆ ಎನ್ನೂ ಪ್ರಶ್ನೆ ಕಾಡಬಹುದು. ಕಾರಣ ಒಂದೆರಡಿಲ್ಲಾ...
ಮರಕಡಿದು ತಿನ್ನುವಾಗ, ಸಂಗತಿಯ ಜೊತೆ ಸೇರುವಾಗ, ತನಗೆ ವೈರಿಯ ಕಾಟ ಇದೆ ಎಂದು ಗೊತ್ತಾದಾಗ ಕೂಗಿಕೊಳ್ಳುತ್ತವೆ.
ಇನ್ನೂ ಮೋಡ ಕವಿದಾಗಲೂ ಮರಜಿರಲೇ ಕೂಗಾಟ ಜೋರು.
ನೀವೂ ನಂಬಲಿಕ್ಕೇ ಅಸಾದ್ಯ. ಈ ಜಾತಿಯ ಕೀಟ ವಿಶ್ವದ ಮೂಲೆ ಮೂಲೆಯಲ್ಲಿ ನೋಡಲು ಸಾಧ್ಯ. ಕನಿಷ್ಠ ೨೫೦೦ ಜಾತಿಗಳನ್ನು ಗುರುತಿಸಲಾಗಿದೆ. ಜತೆಗೆ ನೂರಾರು ಬಣ್ಣದ ಮರಜಿರಲೆಯನ್ನು ಗುರುತಿಸಬಹುದು.
ಇನ್ನೂ ಒಂದು ವಿಶೇಷ ಇದೆ. ಈ ಜಾತಿಯ ಕೆಲ ಕೀಟ ತನ್ನ ಮೈನ ಮೇಲ್ಭಾಗದಿಂದ ಹೊರಗೆಡಹುತ್ತದೆ. ಆದರೆ ಅಸ್ಟು ಸುಲಭ ವಾಗಿ ಇವನ್ನೆಲ್ಲಾ ನೋಡಲು ಸಾದ್ಯವಿಲ್ಲ.
ಅಂದಾಜು ೧೦ ರಿಂದ ೧೬ ವರ್ಷ ಬದುಕಿರುವ ಈ ಕೀಟ ದೂಡ್ಡ ದೂಡ್ಡ ಮರಗಳ ಕಾಂಡಗಳ ಮೇಲೆ ಇರುತ್ತವೆ. ಇದರ ತಲೆ ದೂಡ್ಡದಾಗಿದ್ದು, ಮೀಸೆ ಇರುತ್ತವೆ. ಕಣ್ಣು ಮೇಲಕ್ಕೆ ಉಬ್ಬಿರುತ್ತವೆ. ರೆಕ್ಕೆಗಳು ಪಾರದರ್ಶಕ. ಆರು ಕಾಲುಗಳಿದ್ದು ಎರಡನ್ನು ಮುಂದಕ್ಕೆ ಚಾಚಿಕೊಂಡಿರುತ್ತವೆ. ನಾನಾ ತರನಾದ ಬಣ್ಣಗಳಲ್ಲಿ ಕಣ್ಣುಗಳನ್ನು ನೋಡಲು ಸಾದ್ಯ.
ಇದು ಅರ್ಧ ಇಂಚ್ ನಿಂದ ಎರಡು ಇಂಚ್ ಉದ್ದವಿರುತ್ತವೆ. ಎಲೆಗಳ ಮೇಲು ನೋಡಲು ಸಾದ್ಯ. ಹರಿತ್ತಿನ ಕಣಕ್ಕಾಗಿ ಬಾಯ್ ಚಪ್ಪರಿಸುತ್ತಿರುತ್ತವೆ. ಇರುವೆಗಳನ್ನೂ ಬಿಡುವುದಿಲ್ಲಾ.


Cicadas
Size: 1/2-2 in.long
What to look for: Large broad - headed insect; transparent or smoky wings.
Habitat: Woods, brushy areas, deserts, yards.

3 comments:

PaLa said...

ಉತ್ತಮ ಚಿತ್ರ ಸಂಗ್ರಹ ಉಪಯುಕ್ತ ಮಾಹಿತಿ.

Ittigecement said...

ತುಂಬಾ ಚೆನ್ನಾಗಿದೆ..

ಮಲೆನಾಡಿಗನಾದ ನನಗೇ ಗೊತ್ತಿರಲಿಲ್ಲ..

ಮಾಹಿತಿ ಉಪಯುಕ್ತವಾಗಿದೆ..

ಧರಿತ್ರಿ said...

ಸರ್..
ತುಳುಭಾಷೆಯಲ್ಲಿ ಏನು ಹೇಳ್ತಾರೆ ಮರೆತುಹೋಯ್ತು. ಆದರೆ ಸಂಜೆ ಹೊತ್ತು ಅದೂ ಮಳೆ ಬರೋ ಟೈಮಲ್ಲಿ ತುಂಬಾ ಜೋರು ಕೂಗುತ್ತದೆ. ಅದರ ಕೂಗಾಟ ಕೇಳಿ ನಮ್ಮಜ್ಜಿ 'ಇವತ್ತು ಮಳೆ ಬರೋ chance ಇದೆ' ಅನ್ತಾ ಇದ್ಳು. ಒಳ್ಳೆ ಮಾಹಿತಿ.
-ಧರಿತ್ರಿ