Tuesday, June 9, 2009

ಕತ್ತಲಲ್ಲಿ ಕಾಣದ ಕರಿಗತ್ತಿನ ರಾಟವಾಳ



ಸೌಮ್ಯ ಸ್ವಭಾವ, ಮೃದು ಮನಸ್ಸು, ಮುದ್ದಾದ ದೇಹ, ಉಣ್ಣೆಯಂಥ ಗರಿಗಳು... ಮುದುಡಿ ಕುಳಿತರೆ ಚೆಂಡು ಇಟ್ಟಂತೆ ತೋರುವ ಅಪರೂಪದ ಹಕ್ಕಿ ಇದು.
ಈ ಹಕ್ಕಿ ಮತ್ತು ಮೆತ್ತಗೆ ಗದರಿದರೂ ಅಳುವ ಮಗುವಿಗೂ ಹೆಚ್ಚೇನು ವ್ಯತ್ಯಾಸವಿಲ್ಲ. ನೀವು ಜೋರಾಗಿ ಕೂಗಾಡಿಕೊಳ್ಳುತ್ತಿದ್ದೀರಿ ಎಂದರೆ ಆ ಪ್ರದೇಶಕ್ಕೆ ಮುಖವನ್ನೇ ಹಾಕುವುದಿಲ್ಲ. ಆ ಜಾಗದಿಂದ ನೂರಾರು ಮೀಟರ್ ದೂರದಲ್ಲಿಯೇ ಇರುತ್ತದೆ. ಅದರಲ್ಲೂ ಒಮ್ಮೆ ಇಂಥ ಕೂಗಾಟ ಕೆಳಿಸಿತೆಂದರೆ ಸಣ್ಣ ಗಲಾಟೆಯಾದರೂ ಎಲೆ ಮರೆಯಲ್ಲೆಲ್ಲೋ ಕುಳಿತು ಕಾಲ ಕಳೆಯುತ್ತದೆ.
ಇದು ಈ 'ಕರಿಗತ್ತಿನ ರಾಟವಾಳ' (Black-throated Munia) ಹಕ್ಕಿಯ ವಿಶೇಷ.
ಈ ಹಕ್ಕಿ ಗೂಡು ಕಟ್ಟಿಕೊಳ್ಳುವ ರೀತಿಯೂ ನಮ್ಮನ್ನು ಅಚ್ಚರಿಗೊಳಿಸುತ್ತದೆ. ಸಂತಾನೋತ್ಪತ್ತಿಯ ಸಮಯದಲ್ಲಿ ಚೆಂಡಿನಾಕಾರದ ಹತ್ತಿ, ನಾರಿನ ಮೃದುವಾದ ಗೂಡು ಕಟ್ಟಿಕೊಳ್ಳುತ್ತದೆ. ಗೂಡಿನ ಒಳಗೆ ಹಾಸಿಗೆ ಮೆತ್ತಗಾಗಿರಬೇಕೆಂದು ಹತ್ತಿಯನ್ನು ತಂದು ಜೇಡನ ಬಲೆಯಿಂದ ರಚಿಸಿಕೊಳ್ಳುತ್ತದೆ. ಗೂಡು ಕುಸಿಯ ಬಾರದು ಎನ್ನುವ ಕಾರಣ ಹೊರಭಾಗದಲ್ಲೂ ಜೇಡನ ಬಲೆಯನ್ನು ಬಳಸಿಕೊಳ್ಳುತ್ತದೆ.
ಕತ್ತು ಕಪ್ಪಗಾಗಿರುವ ಕಾರಣಕ್ಕಾಗಿಯೇ ಈ ಹಕ್ಕಿಗೆ ಈ ಹೆಸರು.
ಕರಿಗತ್ತಿನ ರಾಟವಾಳ ಜೂನ್-ನವೆಂಬರ್ ತಿಂಗಳಾವಧಿಯಲ್ಲಿ 3 ರಿಂದ 4 ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತದೆ. ನೋಡಲು ಹೆಚ್ಚು ಕಡಿಮೆ ಗುಬ್ಬಿಯಂತೆ ಇರುತ್ತದೆ. ಕತ್ತು, ತಲೆ, ರೆಕ್ಕೆಯ ಕೆಳಭಾಗ ಮತ್ತು ಪುಕ್ಕದ ತುದಿಯಲ್ಲಿ ಕಂದು ಮಿಶ್ರಿತ ಕಪ್ಪು. ಬೆನ್ನಿನ ಭಾಗದಲ್ಲಿ ಕಂದು ಬಣ್ಣ ಜಾಸ್ತಿಯಿರುತ್ತದೆ. ಕೊಕ್ಕು ಮತ್ತು ಕಾಲುಗಳು ಕಪ್ಪಗಾಗಿರುತ್ತದೆ. ಹೊಟ್ಟೆ ಮತ್ತು ಪುಕ್ಕದ ಕೆಳಭಾಗ ಬೆಳ್ಳಗಿರುತ್ತದೆ.
ಸಾಮಾನ್ಯವಾಗಿ ಹುಲ್ಲುಗಳಿರುವ ಪ್ರದೇಶಗಳಲ್ಲಿ ಕೀಟಗಳನ್ನು ಹಿಡಿದು ತಿನ್ನುತ್ತಿರುತ್ತದೆ. ತಣ್ಣನೆಯ ಗಾಳಿಯಿದ್ದರೆ ಈ ಹಕ್ಕಿಗೆ ಖುಷಿಯೂ ಖುಷಿ. ಲಂಕಾದಲ್ಲಿ ಜಾಸ್ತಿ. ಭಾರತ, ಬಾಂಗ್ಲಾದಲ್ಲೂ ಇವೆ. ಚಿತ್ರ ಕೃಪೆ: ಅಂತರ್ಜಾಲ.

10 comments:

Ittigecement said...

ಅಗ್ನಿ....

ಈ ಹಕ್ಕಿಯ ಫೋಟೊ ನನ್ನಲ್ಲಿತ್ತು...
ಇಷ್ಟೆಲ್ಲ ಮಾಹಿತಿ ಇರಲಿಲ್ಲವಾಗಿತ್ತು...

ಮುದ್ದಾದ ಹಕ್ಕಿಯ ಫೋಟೊ ನೋಡು ಖುಷಿಯಾಗುತ್ತದೆ...

ಅವೆಲ್ಲವನ್ನೂ ಸಪರೇಟ್ ಆಗಿ ಹಾಕಿದರೆ ಇನ್ನೂ ಚೆನ್ನಾಗಿತ್ತೆಂದು ಅನಿಸುತ್ತದೆ....

ಅಭಿನಂದನೆಗಳು...

paapu paapa said...

namaste sir,

hakkigaLella muddagive. bareyuttiri.

sunaath said...

ಅಗ್ನಿ,
ಇಷ್ಟೆಲ್ಲಾ ಹಕ್ಕಿಗಳ ಕನ್ನಡ ಹೆಸರುಗಳನ್ನು ಕೇಳಲು ಖುಶಿಯಾಗುತ್ತದೆ.

ರೂpaश्री said...

as always very informative post!!

ಜಿ.ಎಸ್.ಬಿ. ಅಗ್ನಿಹೋತ್ರಿ said...

@ಪ್ರಕಾಶ್ ಜೀ...
ನೀವು ಹೇಳಿದ ಹಾಗೆ ಫೋಟೋಗಳನ್ನು ಸಪರೇಟ್ ಹಾಕಿದರೆ ಚೆನ್ನಾಗಿರತ್ತೆ ನಿಜ. ಎಲ್ಲವೂ ಒಂದೇ ರೀತಿ ಇದ್ದರೆ ಚೆನ್ನ ಎನ್ನುವ ಕಾರಣದಿಂದ ಹೀಗೆ ಇಟ್ಟಿರುತ್ತೆನಸ್ಟೆ. ಹಾಂ ಇನ್ನೊಂದು ವಿಚಾರ, ನಿಮ್ಮಲ್ಲಿ ಹಕ್ಕಿಗಳ ಫೋಟೋ ಇದ್ದರೆ ದಯವಿಟ್ಟು ಕಳಿಸಿಕೊಡಿ. ನನಗೆ ಅಗತ್ಯವಾದಾಗ ಬಳಸಿಕೊಳ್ಳುವೆ.
@ಪ್ರೀತಿ, ಸುನಾತ್, ರೂಪಶ್ರೀ
ಬ್ಲಾಗ್ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

ಚಂದಿನ said...

ಮುದನೀಡುವ ಬರಹ,ಮಾಹಿತಿ ಹಾಗೇ ಮುದ್ದಾದ ಚಿತ್ರ.

ನಲ್ಮೆಯ
ಚಂದಿನ

ಕನಸು said...

ರಾಟವಾಳದ ಜತೆ ಜತೆ ಮೋಹಕ ಪೋಟೊ ಚೆನ್ನಾಗಿವೆ

ವಿನುತ said...

ಮುದ್ದಾಗಿ ಗು೦ಡು ಗು೦ಡಾಗಿದೆ. ಇದರ ವಿಷಯ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು

shivu.k said...

ಸರ್,

ರಾಟವಾಳದ ಫೋಟೋಗಳು ತುಂಬಾ ಚೆನ್ನಾಗಿವೆ...ಅದರ ಬಗ್ಗೆ ವಿವರಣೆಯೂ ಮಾಹಿತಿಯುಕ್ತವಾಗಿದೆ....

ನಿಮ್ಮ ಬ್ಲಾಗನ್ನು ಲಿಂಕಿಸಿಕೊಂಡು ಹಿಂಬಾಲಿಸುತ್ತಿದ್ದೇನೆ...ಇನ್ನು ಮುಂದೆ ವಾರಕ್ಕೊಂದು ಹಕ್ಕಿಯ ಚಿತ್ರಗಳನ್ನು ನೋಡಬಹುದು ಅಲ್ವಾ...

ಧನ್ಯವಾದಗಳು..

ಜಿ.ಎಸ್.ಬಿ. ಅಗ್ನಿಹೋತ್ರಿ said...

@ಶಿವು
ಧನ್ಯವಾದಗಳು. ಖಂಡಿತ ವಾರಕ್ಕೊಂದು ಹಕ್ಕಿಯ ಪರಿಚಯ ಆಗುತ್ತೆ. ನಿಮ್ಮ ಛಾಯಾಚಿತ್ರಗಳನ್ನು ಬಹಳ ಲೈಕ್ ಮಾಡುವವರಲ್ಲಿ ನಾನು ಒಬ್ಬ.