Monday, August 24, 2009

ಚಿಕ್ ಚೀಕ್ ಕಿರುರೆಕ್ಕೆ ಹಕ್ಕಿಲವು ಮಂದಿ ನಾಲ್ಕು ಗೋಡೆಯಿಂದ ಆಚೆ ಬರಲು ಬಯಸುವುದಿಲ್ಲ. ಕೆಲವರು ಯಾವುದೋ ಅನಿವಾರ್ಯತೆಯಿಂದ ಒಳಸೇರಿಕೊಂಡಿದ್ದರೆ, ಇನ್ನೂ ಕೆಲವರು ಜನ ಸೇರಿದ್ದಾರೆಂದು ಕೋಣೆಯಿಂದ ಹೊರ ಬರುವದೇ ಇಲ್ಲ. ಅದೇನೋ ಒಂದು ರೀತಿಯ ಭಯ, ನಾಚಿಕೆ, ಹಿಂಜರಿಕೆ.
ಇಂಥ ಸ್ವಭಾವ ಕೇವಲ ಮನುಷ್ಯರಲ್ಲಷ್ಟೇ ಅಲ್ಲ. ಪ್ರಾಣಿ-ಪಕ್ಷಿಗಳಲ್ಲಿಯೂ ಕಾಣಲು ಸಾದ್ಯ.
'ಕಿರುರೆಕ್ಕೆ ಹಕ್ಕಿ', 'ಬಿಳಿಹೊಟ್ಟೆ ಹಕ್ಕಿ', 'ಬಿಳಿಹೊಟ್ಟೆ ಸಣ್ಣರೆಕ್ಕೆ' ಅರ್ಥಾತ್ ( While Billed - Shortwing) ಕೂಡ ಇದೇ ಸ್ವಭಾವದ ಹಕ್ಕಿ. ಒಂಥರಾ ನಾಚಿಕೆ, ಭಯಪಡುವ ಸ್ವಭಾವ. ತನ್ನಿಂದ ದೊಡ್ಡ ಗಾತ್ರದ ಹಕ್ಕಿ, ಪ್ರಾಣಿ ಅಥವಾ ಮನುಷ್ಯರನ್ನು ಕಂಡಾಗಲೆಲ್ಲ ಪೊದೆಯೊಳಗೆ ಅಥವಾ ತನ್ನ ಗೂಡಿನೊಳಗೆ ಸೇರಿಕೊಳ್ಳುತ್ತದೆ. ನೀವೂ ಈ ಹಕ್ಕಿಯನ್ನೇ ಹಿಂಬಾಲಿಸಿದಿರಿ ಎಂದುಕೊಳ್ಳಿ. ಆಗ ನಿಮ್ಮ ಕಣ್ಣಿಗೇ ಕಾಣದಂತೆ ಎಲ್ಲೋ ಕಣ್ಮರೆಯಾಗುತ್ತದೆ. ಪೊದೆಯೊಳಗೇ ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ಹಾರುತ್ತ ನೂರಾರು ಮಾರು ದೂರಕ್ಕೆ ಸಾಗಿರುತ್ತದೆ.
ಹೌದು, ಈ ಪುಟ್ಟ ಹಕ್ಕಿ ಜಂಪ್ ಮಾಡುವುದರಲ್ಲಿ ಪ್ರವೀಣ. ಹೆಚ್ಚುಕಡಿಮೆ ಗುಬ್ಬಚ್ಚಿಯಸ್ಟೆ ಗಾತ್ರ ಇರುವ ಕಾರಣ ಸುಲಭವಾಗಿ ಜಂಪ್ ಮಾಡುತ್ತದೆ. ನೋಡಲು ನೋಡಲು ಚೆಂಡಿನಂತ ದೇಹ. ಬಹುತೇಕ ಭಾಗ ಕಪ್ಪು ಮಿಶ್ರಿತ ನೀಲಿಬಣ್ಣ. ಕೊಕ್ಕು ಮತ್ತು ಕಾಲುಗಳು ಕಪ್ಪು. ಇನ್ನು ಹೊಟ್ಟೆ ಮತ್ತು ಎದೆಯ ಭಾಗದಲ್ಲಿ ಹಳದಿ ಮಿಶ್ರಿತ ಬಿಳಿಬಣ್ಣ. ಚಿಕ್ಕದಾದ ಎರಡು ರೆಕ್ಕೆಗಳಿಂದಲೇ ಈ ಹಕ್ಕಿಯನ್ನು ಗುರುತಿಸಲು ಸಾಧ್ಯ.
ಭಾರತ ಸೇರಿದಂತೆ ನೆರೆಯ ಲಂಕಾ, ಬಾಂಗ್ಲ, ಪಾಕಿಸ್ತಾನಗಳಲ್ಲಿಯೂ ನೋಡಲು ಸಾಧ್ಯ. ಮಾರ್ಚ್ ನಿಂದ ಜೂನ್ ತಿಂಗಳಾವಧಿಯಲ್ಲಿ 2-3 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಜಿಟಿಜಿಟಿ ಮಳೆ ಇದ್ದ ಸಂದರ್ಭದಲ್ಲಿ ಮೈ ಮುದುಡಿ ಕುಳಿತಿರುವಾಗ ಮುದ್ದು ಮುದ್ದಾಗಿರುತ್ತದೆ.
ಗಾಬರಿಯಾದಾಗ ಸಾಮಾನ್ಯವಾಗಿ ಚಿಕ್ ಚೀಕ್...ಎಂದು ಸದ್ದು ಮಾಡುತ್ತದೆ.
ಚಿತ್ರ: ಅಂತರ್ಜಾಲ.

8 comments:

ಬಾಲು said...

ಒಳ್ಳೆಯ ಬರಹ ಅಗ್ನಿ ಹೊತ್ರಿಗಳೆ, ಚೆನ್ನಾಗಿದೆ.
ಫೊಟೊ ಕೂಡ ಮುದ್ದಾಗಿದೆ. ಸಾಧ್ಯವಾದಲ್ಲಿ ಮು೦ದಿನ ಸಲ ಸ್ವಲ್ಪ ದೊಡ್ಡ ಫೊಟೊಗಳನ್ನು ಹಾಕಿರಿ.

Shweta said...

ಸೂಪರ್ ಹಕ್ಕಿ ...

ಇನ್ನೂ ಹೆಚ್ಚು ಹಕ್ಕಿಗಳು ಹೊರಗೆ ಬರಲಿ...... ನನಗೆ ಕ್ರಪಾಕರ ಮತ್ತು ಸೇನಾನಿ ನೆನಪಿಗೆ ಬರುತ್ತಿದ್ದಾರೆ ...ನಿಮಗೂ ಗೊತ್ತಿರಬಹುದಲ್ಲವೇ?

ರೂpaश्री said...

as always very informative!

ಜಿ.ಎಸ್.ಬಿ. ಅಗ್ನಿಹೋತ್ರಿ said...

ಎಲ್ಲರಿಗೂ ಧನ್ಯವಾದಗಳು...
@ಬಾಲು
ಫೋಟೋ ದೊಡ್ಡದಾಗಿ ಬಳಸಿ ಎಂದು ಸಲಹೆ ಮಾಡಿದ್ದಿರಿ. ನಿಮ್ಮ ಸಲಹೆಯನ್ನು ಸ್ವೀಕರಿಸಿದ್ದೇನೆ. ಥ್ಯಾಂಕ್ಸ್.
@ಶ್ವೇತಾ
ಖಂಡಿತ ಗೊತ್ತು. ಕೃಪಾಕರ ಮತ್ತು ಸೇನಾನಿ ಅವರ ಜತೆ ಅನೇಕ ಬಾರಿ ಮಾತನಾಡಿದ್ದೇನೆ, ಚರ್ಚಿಸಿದ್ದೇನೆ. ಇತ್ತೀಚಿಗೆ ಅವರ ಸಂಪರ್ಕಕ್ಕೆ ಸ್ವಲ್ಪ ಬ್ರೇಕ್ ಬಿದ್ದಿದೆ. ಕೆಲಸದ ಒತ್ತಡ ಜಾಸ್ತಿಯಾಗಿದ್ದಕ್ಕೆ ಅಸ್ಟೆ.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಈ ಹಕ್ಕಿಯನ್ನು ನಂದಿಬೆಟ್ಟದಲ್ಲಿ ನೋಡಿದ್ದೆ. ನೀವು ಅದರ ಸ್ವಭಾವವನ್ನು ಚೆನ್ನಾಗಿ ವರ್ಣಿಸಿದ್ದೀರಿ. ನೀವು ಹೇಳಿದಂತೆಯೇ ನನಗೆ ಅನುಭವವಾಗಿದೆ.ಹಳೆಯದನ್ನು ನೆನಪು ಮಾಡಿಸಿ ಮಾಹಿತಿ ಕೊಟ್ಟ ನಿಮಗೆ ಧನ್ಯವಾದಗಳು.

ಜಿ.ಎಸ್.ಬಿ. ಅಗ್ನಿಹೋತ್ರಿ said...

@ಮಲ್ಲಿಕಾರ್ಜುನ್
ಹೌದು, ನಂದಿ ಬೆಟ್ಟದಲ್ಲಿ ಇವೆ. ಬಾಬಾ ಬುಡನ್ ಗಿರಿ, ಮುಳ್ಳಯ್ಯನ ಗಿರಿಯಲ್ಲಿ ಸುಲಭವಾಗಿ ನೋಡಬಹುದು.

Jayalaxmi said...

ಅಗ್ನಿಹೋತ್ರಿಗಳೇ ನಿಮ್ಮ ಬ್ಲಾಗಿಗೆ ಬರದೆ ತುಂಬಾ ದಿನಗಳಾಗಿದ್ದವು, ಎಷ್ಟೆಲ್ಲ ಪಕ್ಷಿಗಳನ್ನು ಇಷ್ಟು ತಡವಾಗಿ ನೋಡುತ್ತಿದ್ದೆನಲ್ಲ ಅನಿಸಿದರೂ ಎಲ್ಲ ಹಕ್ಕಿಗಳನ್ನು ಒಟ್ಟಿಗೆ ನೋಡಿದ ಸಂಭ್ರಮವೂ ಇದೆ ಈಗ. ಈ ಪುಟ್ಟ ಹಕ್ಕಿಯನ್ನು ನಾನೂ ನೋಡಿದ್ದೇನೆ.ಆಗಷ್ಟೆ ಜನಿಸಿದ(ಮೊಟ್ಟೆಯಿಂದ ಹೊರ ಬಂದ)ಕೋಳಿಮರಿಯಂತೆ ಮುದ್ದು ಮುದ್ದಾಗಿದೆ ಪುಟಾಣಿ ಹಕ್ಕಿ.

Unknown said...

Thanks for the information. Waiting for your next set of Birds.....

-Yathi Siddakatte