|
- ಗುಬ್ಬಚ್ಚಿ ನಗರ ಬಿಟ್ಟು ಓಡಿದವು... ಎಂದು ಗುಬ್ಬಚ್ಚಿದಿನಾಚರಣೆ ಬಂದಾಗಲೆಲ್ಲ ಕತೆ ಹೇಳ್ತೇವೆ....
- ಮೊಬೈಲ್ ಟವರ್ ಗಳು ಜಾಸ್ತಿ ಆಗ್ತಿರೋ ಕಾರಣ ಗುಬ್ಬಚ್ಚಿ ನಗರ ಬಿಟ್ಟು ಹೋಗ್ತಿವೆ....
ಮೊಬೈಲ್ ಗುಬ್ಬಿಗಳಿಗೊಂದೇ ತೊಂದರೆ ಮಾಡುತ್ತಿವೆಯಾ? ಕಾಗೆ, ಮೈನಾ ಇತ್ಯಾದಿ ಕೆಲ ಪಕ್ಷಿಗಳಿಗೆ ತೊಂದರೆ ಮಾಡುತ್ತಿಲ್ಲವೇ? ಶಿವಾಜಿನಗರ ಸೇರಿದಂತೆ ಬೆಂಗಳೂರಿನ ನೂರಾರು ಕಡೆ ಮಾರಾಟಕ್ಕೆಂದು ಬಂಧಿಸಿಟ್ಟ ತರಾವರಿಯ ಲವ್ ಬರ್ಡ್ಸ್ ಗಳಿಗೆ ಯಾವುದೇ ತೊಂದರೆ ಮಾಡುತ್ತಿಲ್ಲವೇ?
ಹೀಗೆ ಅನೇಕ ಪ್ರಶ್ನೆಗಳು ನನ್ನನ್ನ ಕಾಡಿದ್ದಿದೆ. ಆದರೆ ನಾನು ತಿಳಿದು ಕೊಂಡಂತೆ ಗುಬ್ಬಚ್ಚಿಗಳು ನಗರವನ್ನು ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲೇ ಇವೆ. ನಿಮ್ಮ ಮನೆ ಬಾಗಿಲಿಗೆ ಬರುತ್ತಿಲ್ಲ ಅಸ್ಟೆ.
ಕೆಲ ವರ್ಷಗಳ ಹಿಂದೆ ಈ ಗುಬ್ಬಿಗಳಿಗೆ ನಮ್ಮ-ನಿಮ್ಮ ಮನೆಯಲ್ಲಿ ಆಹಾರ ಸಿಗುತ್ತಿದ್ದವು. ಆದರೆ ಇಂದು ಆಹಾರ ಸಿಗುತ್ತಿವೆಯಾ? ಪ್ರಾಮಾಣಿಕವಾಗಿ ನಾವು ಗುಬ್ಬಚ್ಚಿಗೆ ಬೇಕಾದ ಆಹಾರ ನೀಡುತ್ತಿದ್ದೇವಾ?
ಖಂಡಿತವಾಗಿಯೂ ಇಲ್ಲ ಬಿಡಿ. ಬದಲಾದ ನಮ್ಮ ಜೀವನ ಶೈಲಿ ಈ ಗುಬ್ಬಿಗಳ ಜೀವಕ್ಕೆ ಕಂಟಕ ಪ್ರಾಯವಾಗಿದೆ. ನಮ್ಮ ಮನೆ ಸದಸ್ಯರಂತೆ ವಾಸವಾಗುತ್ತಿದ್ದ ಗುಬ್ಬಿಗಳು ಇಂದಿನ ಸ್ಲ್ಯಾಬ್ ಮನೆಗಳಲ್ಲಿ ಎಲ್ಲಿ ವಾಸಿಸಬೇಕು? ನಾವೇನಾದ್ರು ಅದಕ್ಕೊಂದು ಪ್ರತ್ಯೇಕ ಮನೆ(ಗೂಡು) ಮಾಡಿಕ್ಕೊಟ್ಟಿದ್ದೇವಾ? ಮನೆ ಇರಲಿ ನಾವಿದ್ದ ಮನೆ ಆವರಣಕ್ಕೆ ಕಾಲಿಡಲೇ ಬಿಡುತ್ತಿಲ್ಲ.
ನಮ್ಮ ಅಮ್ಮನೋ, ಅಜ್ಜಿಯೋ ಮನೆಯಲ್ಲಿ ಅಕ್ಕಿ, ಗೋದಿ, ಜೋಳ, ರಾಗಿಯಲ್ಲಿದ್ದ ಹುಳು, ನೆಲ್ಲು ಆರಿಸಿ ಅಂಗಳಕ್ಕೆ ಎಸೆಯುತ್ತಿದ್ದರು. ಅವನ್ನೆಲ್ಲ ಆರಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು ಈ ಗುಬ್ಬಿಗಳು. ಎಸ್ಟೋ ಮನೆಗಳಲ್ಲಿ ಬೆಳಿಗ್ಗೆ, ಸಾಯಂಕಾಲ ಧಾನ್ಯಗಳನ್ನ ತುಳಸಿ ಕಟ್ಟೆಯ ಮೇಲೆ, ಮನೆ ಎದುರ ಬಾಗಿಲಲ್ಲಿ ಇಡುವ ಪರಿಪಾಟ ಇತ್ತು. ಇಗೆಲ್ಲಿವೆ?
ಇನ್ನು ಹಳ್ಳಿಗಳಲ್ಲಿ ಇನ್ನೂ ಉಳಿದಿವೆ. ಹುಲ್ಲಿನಿಂದ ಬತ್ತವನ್ನ ಬೇರ್ಪಡಿಸುವ ವೇಳೆ ಸಹಜವಾಗಿಯೇ ಕಾಣಲು ಸಾಧ್ಯವಿದೆ. ನಗರ ಪ್ರದೇಶದ ಮನೆಗಳಲ್ಲಿ ಇಂಥ ಯಾವುದೇ ಸನ್ನಿವೇಶಗಳು ಇಲ್ಲದಿರುವಾಗ ಹೇಗೆ ಗುಬ್ಬಚ್ಚಿಗಳು ಇರಬೇಕು? ಆದರೆ ಎಪಿಎಮ್ ಸಿ ಯಾರ್ಡ್ ಗಳಲ್ಲಿ , ಮಾರುಕಟ್ಟೆ ಪ್ರದೇಶಗಳಲ್ಲಿ, ಕಿರಾಣಿ ಅಂಗಡಿಗಳ ಮುಂಭಾಗ ಈಗಲೂ ಗುಬ್ಬಿಗಳು ಇವೆ. ಪ್ರತಿಯೊಬ್ಬರೂ ಮನೆಗಳಲ್ಲಿ ಕಾಳು-ಕಡಿ ಹಾಕುವ ಆಭ್ಯಾಸ ಬೆಳೆಸಿಕೊಂಡರೆ ಈಗಲೂ ಗುಬ್ಬಚ್ಚಿಗಳು ನಿಮ್ಮ ಮನೆಯಲ್ಲಿ, ಅಥವಾ ನೆರೆಹೊರೆಯ ಕಟ್ಟಡಗಳಲ್ಲಿ ವಾಸವಾಗಿದ್ದು, ಪ್ರತಿದಿನ ನಿಮ್ಮ ಮನೆಗೆ ಭೇಟಿ ಕೊಡುವುದರಲ್ಲಿ ಅನುಮಾನವಿಲ್ಲ.
11 comments:
ಗುಬ್ಬಚ್ಚಿಗಳ ಬಗ್ಗೆ ನೀವು ಹೇಳಿರುವುದು ನಿಜ.ಅವುಗಳ ಸ್ಥಿತಿ ನಿಜಕ್ಕೂ ಚಿ೦ತಾಜನಕ. http://chithrapata.blogspot.com/2010/12/blog-post_08.html
ತು೦ಬಾ ಚೆನ್ನಾಗಿ ಬರೆದಿದ್ದೀರಿ.... ನಾನಿರುವ ಮು೦ಬಯಿಯ ಬಡಾವಣೆಯಲ್ಲಿ ತು೦ಬಾನೇ ಗುಬ್ಬಚ್ಚಿಗಳಿರುವುದನ್ನು ಕ೦ಡು ಆಶ್ಚರ್ಯ ಆಗಿತ್ತು. ಬಹುಶ: ಇಲ್ಲಿ ತು೦ಬಾ ಮರಗಳು ಇರುವುದರಿ೦ದ ಇರಬಹುದು.
ಅಗ್ನಿಹೋತ್ರಿಗಳೇ ನಮಸ್ಕಾರ,
ಗುಬ್ಬಿಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಆದರೆ ನನಗೊಂದು ಅನುಮಾನ: ನಮ್ಮ ಮನೆಗಳ ಸಮೀಪ ಕಾಗೆ, ಪಾರಿವಾಳ ಮತ್ತು ಅಳಿಲುಗಳ ಸಂಖ್ಯೆ ಮೊದಲಿಗಿಂತಳೂ ಜಾಸ್ತಿಯಾಗಿವೆಯಲ್ಲಾ, ಅವುಳಿಗೆಲ್ಲಾ ಆಹಾರ ಸಿಗುವಾಗ ಗುಬ್ಬಿಳಿಗೇಕೆ ಸಿಗುವುದಿಲ್ಲಾ?
@ದಿವಾಸ್, ಸುಧೇಶ್ ಅವರಿಗೆ ಧನ್ಯವಾದಗಳು...
@ಜಿ. ಎಸ್. ಶ್ರೀನಾಥ್
ಕಾಗೆ, ಪಾರಿವಾಳ, ಅಳಿಲುಗಳ ಸಂಖ್ಯೆ ಜಾಸ್ತಿ ಆಗಿದೆ ಎಂದಾದರೆ ಅವುಗಳಿಗೆ ಇಷ್ಟ ಆಗುವ ವಾತಾವರಣ ಅಲ್ಲಿದೆ ಎಂದೇ ಅರ್ಥ. ಅಂದಮಾತ್ರಕ್ಕೆ ಗುಬ್ಬಚ್ಚಿಗಳೂ ಅಲ್ಲಿ ಇರಬೇಕಲ್ಲ ಅನ್ನೂ ನಿಮ್ಮ ಧೋರಣೆ ಸಮಂಜಸವಲ್ಲ. ಜೊತೆಗೆ ಅಲ್ಲಿ ಗುಬ್ಬಿಗಳು ಇಲ್ಲ ಅನ್ನಲಿಕ್ಕೂ ಸಾಧ್ಯವಾಗದು. ಯಾಕಿಲ್ಲ, ಆಹಾರದ ಕೊರತೆ ಆಗ್ತಾ ಇದೆಯಾ? ಅಥವಾ ಇನ್ನೇನಾದ್ರು ತೊಂದರೆ ಆಗ್ತಿದೆಯಾ? ಅನ್ನೋದನ್ನು ಗುರುತಿಸಬೇಕು. ಜೊತೆಗೆ ಆ ಪ್ರದೇಶದಲ್ಲಿ ಮೊದಲು ಗುಬ್ಬಚ್ಚಿಗಳ ಆವಾಸಕ್ಕೆ ಪೂರಕ ಅವಕಾಶ ಇರಬೇಕಾಗುತ್ತದೆ. ಈ ಎಲ್ಲ ಮಾಹಿತಿಗಳನ್ನು ನಿಮ್ಮಿಂದ ಬಯಸುತ್ತೇನೆ.
ಅಗ್ನಿಹೋತ್ರಿಗಳೇ ನಮಸ್ಕಾರ,
ಸುಮಾರು 10 - 15 ವರ್ಷಗಳ ಹಿಂದೆ ನಾವು ಬಾಗಿಲು ತೆಗೆದರೆ ಮನೆಯೊಳಗೆ ಬರುತ್ತಿದ್ದ ಗುಬ್ಬಚ್ಚಿಗಳು ಈಗ ಕಾಣುತ್ತಿಲ್ಲ.
ನಮ್ಮ ಮನೆಯ ಬಳಿ ಬಹುಶಃ ಆಹಾರಕ್ಕೆ ಕೊರತೆ ಇಲ್ಲ, ಯಾಕೆಂದರೆ ನಾನು ಸೇರಿದಂತೆ ಅಕ್ಕ ಪಕ್ಕದ ಮನೆಯ ಬಹಳಷ್ಟು ಮಂದಿ ಮನೆಯ ಮೇಲೆ ಆಹಾರ ಮತ್ತು ನೀರನ್ನು ಇಡುತ್ತಾರೆ, ಹಾಗು ಈ ಭಾಗದಲ್ಲಿ ಹೋಟೆಲ್ ಹಾಗು ಆಹಾರ ಪದಾರ್ಥ ಮಾರುವ ಅಂಗಡಿಗಳ ಸಂಖ್ಯೆ ಬಹಳಷ್ಟಿವೆ. ನನ್ನ ಅನಿಸಿಕೆಯಂತೆ ಆಹಾರದ ಕೊರತೆ ಇಲ್ಲ. (ಹಾಗಾಗಿಯೇ ಕಾಗೆ, ಪಾರಿವಾಳ ಮತ್ತು ಅಳಿಲುಗಳ ಸಂಖ್ಯೆ ಹೆಚ್ಚಾಗಿರಬಹುದು).
ಪ್ರತಿ ಮನೆಗಳ ಮೇಲೆ ಸಜ್ಜಾ, ನೀರಿನ ಟ್ಯಾಂಕ್, ಮತ್ತು ಬೀದಿಗಳಲ್ಲಿ ಮರಗಳು ಬಹಳಷ್ಟಿದ್ದು ಗೂಡು ಕಟ್ಟಲು ತೊಂದರೆಯಿಲ್ಲ ಅಂದುಕೊಂಡಿದ್ದೇನೆ.
ಆದರೂ ನಮ್ಮ ಮನೆಯ ಬಳಿ ಗುಬ್ಬಚ್ಚಿಗಳು ಕಾಣುತ್ತಿಲ್ಲ ಏಕೆ? ಎನ್ನುವುದು ಹಲವರ ಪ್ರಶ್ನೆ.
ಸರಿಯಾಗಿ ಹೇಳಿದ್ದೀರ.
ನಾನು ಎರಡು ವರ್ಷ ಹಿಂದೆ ಊಟಿಗೆ ಹೋಗಿದ್ದಾಗ ತುಂಬಾ ಗುಬ್ಬಚ್ಚಿ ನೋಡಿದ್ದೆ.
@ ಜಿ.ಎಸ್.ಶ್ರೀನಾಥ್,
ಸಾಧ್ಯವಾದರೆ ನಾಲ್ಕಾರು ಗುಬ್ಬಚ್ಚಿಗಳನ್ನು ನಿಮ್ಮ ಮನೆಯ ಬಳಿ ಬಿಟ್ಟು ಅವುಗಳ ಚಲನ ವಲನ ಗಮನಿಸುವುದು ಒಳ್ಳೆಯದೇನೂ. ದಯವಿಟ್ಟು ನಿಮ್ಮ ಅಡ್ರೆಸ್ ಕಳುಹಿಸಿ. ಜೊತೆಗೆ ಭೌಗೋಳಿಕ ವಿವರ ಬೇಕು. ನನಗಿರುವ ಅಲ್ಪ ಅನುಭವದ ಪ್ರಕಾರ ಪಾರಿವಾಳ ಇವೆ ಎಂದಾದರೆ ಗುಬ್ಬಚ್ಚಿಗಳು ಇರಲು ಯೋಗ್ಯ ವಾಗಿರುವ ಆವಾಸವೇ ಆಗಿರುತ್ತೆ. ನಿಮ್ಮ ಮನೆ ವಾತಾವರಣದ ವಾಸ್ತವ ಅರಿಯಲು ಇಸ್ಟೇ ಮಾಹಿತಿಯಿಂದ ಸಾಧ್ಯವಾಗದು.
ಕೆಲವು ಸಿಂಪಲ್ ಟಿಪ್ಸ್
1 ) ಒಣ ಹುಲ್ಲು, ನಾರು, ಹತ್ತಿಗಳನ್ನು ನಿಮ್ಮ ಮನೆಯ ಎತ್ತರದ ಇಕ್ಕಟ್ಟಿನ ಜಾಗದಲ್ಲಿ ತಟ್ಟೆ ಆಕಾರದಲ್ಲಿ, ಅಥವಾ ಪೇಪರ್ ಬಾಕ್ಸ್ ನಲ್ಲಿ ಇಟ್ಟಿರಿ. ಎರಡು ವೃತ್ತಾಕಾರದ ತೂತು (ಗುಬ್ಬಚ್ಚಿ ಒಳ ಸೇರುವಸ್ಟು) ಮಾಡಿರಿ.
2) ಸಾಧ್ಯವಾದರೆ ಗುಬ್ಬಚ್ಚಿಗಳು ನಿಮ್ಮ ಮನೆಯಿಂದ ಹತ್ತಿರದಲ್ಲಿ ಎಲ್ಲಾದರೂ ಇವೆಯಾ ಎಂದು ಗುರುತಿಸಿ.
4 ) ಅಲ್ಲಿ ಅವುಗಳ ದಿನಚರಿ ಹೇಗೆ ಎಂದು ಒಮ್ಮೆ ಗಮನಿಸಿ.
ಈಗ 8 ವರ್ಷಗಳ ಹಿಂದೆ ನಾನೊಂದು ಪ್ರಯೋಗ ಮಾಡಿದ್ದನ್ನು ನೆನಪಿಸಿ ಕೊಳ್ಳುತ್ತೇನೆ. ನಿಮಗೂ ಹಾಗೆ ಮಾಡಬೇಕು ಅನ್ನಿಸಬಹುದು. ಕುಮಟಾದಲ್ಲಿ ಮುರೂರು ಅನ್ನೋ ಗ್ರಾಮ ಇದೆ. ಅಲ್ಲಿನ ಹಳ್ಳಿ ಕೊಣಾರೆ. ಅಲ್ಲಿನ ವಿಷ್ಣು ಮೂರ್ತಿ ದೇವಾಲಯದಲ್ಲಿ ತುಂಬಾ ಗುಬ್ಬಚ್ಚಿಗಳು ಇದ್ದವು. ಅಲ್ಲಿಂದ 200 ಮೀಟರ್ ಅಂತರದಲ್ಲಿ ನನ್ನ ಸ್ನೇಹಿತನ ಮನೆ. ನಮಗೆ ಆ ಗುಬ್ಬಚ್ಚಿಗಳನ್ನು ಅವರ ಮನೆಗೆ ಕರೆ ತರಬೇಕಿತ್ತು. ಈ ಅಂತರದಲ್ಲಿ ನಾಲ್ಕಾರು ಮನೆಗಳಿದ್ದವು. ಈ ಎಲ್ಲ ಮನೆಗಳೂ ಹೆಂಚಿನ ಮನೆಗಳೇ ಆಗಿದ್ದವು. ಆ ಕಾರಣ ಹೆಂಚಿನ ಮನೆ ಇಕ್ಕಟ್ಟಿನ ಜಾಗದಲ್ಲೆಲ್ಲ (ಕೋಳು) ಎರಡೆರಡು ಬಾಕ್ಸ್ ಇಟ್ಟೆವು. ಎರಡು ತಿಂಗಳು ಕಾದೆವು. ಮನೆಯಿಂದ ಮನೆಗೆ ದಾಟಿಕೊಂಡು ಗುಬ್ಬಿ ಸ್ನೇಹಿತನ ಮನೆಗೂ ಸೇರಿಕೊಂಡಿದ್ದವು.
- ಸರ್ ಈ ಪ್ರಯೋಗ ನೀವು ಮಾಡಬಹುದಲ್ಲವೇ?
ನನ್ನ ಬಾಲ್ಯದಲ್ಲಿ ಗುಬ್ಬಿ ಮತ್ತು ಕಾಗೆ ಇವು ನಾವು ದಿನವೂ ನೋಡುತ್ತಿದ್ದ ಪಕ್ಷಿಗಳಾಗಿದ್ದವು. ಈಗ ಕಾಗೆಗಳು ನೋಡಲು ಸಿಗುತ್ತವೆ. ಆದರೆ ಗುಬ್ಬಿಗಳು ಮಾತ್ರ ಮಾಯವಾಗಿವೆ. ಅವುಗಳನ್ನು ನೋಡದೇ ಮನಸ್ಸು ಚಡಪಡಿಸುತ್ತಿದೆ. ನೀವು ಹೇಳಿದ ಉಪಾಯವನ್ನು ಮಾಡಿ ನೋಡುವೆ.
ಹೀಗೆ ಆಗುತ್ತಿರುವದು ನಿಜಕ್ಕೂ ವಿಷಾದದ ಸಂಗತಿ.
ಗುಬ್ಬಿಗಳ ಬಗ್ಗೆ ಚೆನ್ನಾಗಿ ಅಧ್ಯಯನ ಮಾಡಿ ಬರೆದಿದ್ದೀರಿ.
ಅಗ್ನಿಹೋತ್ರಿಗಳೇ ನಮಸ್ಕಾರ,
ನೀವು ಹೇಳಿರುವುದನ್ನು ಖಂಡಿತ ಗಮನಿಸುವೆ.
ನನ್ನ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಿಮ್ಮ ಈ-ಮೇಲ್ ಮಾಡಿದ್ದೇನೆ. ನಿಮಗೆ ಬಿಡುವಾಗಿದ್ದಾಗ ಖಂಡಿತ ಬನ್ನಿ.
ಗುಬ್ಬಚ್ಚಿಗಳ ಸ೦ತತಿ ಕಡಿಮೆ ಆಗುತ್ತಿವೆಯೆ....ಇ೦ದು ನಗರಗಳಲ್ಲಿ ಆಧುನಿಕ ವಾತಾವರಣದಿ೦ದಾಗಿ ಕಾಣಲು ಸಿಗುತ್ತಿಲ್ಲ..ಆದರೆ ಮೊದಲಿನ೦ತೆ ಹಳ್ಳಿಗಳಲ್ಲಿಯೂ ಗುಬ್ಬಚ್ಚಿ ಗೂಡುಗಳು ಕಾಣುತ್ತಿಲ್ಲ..ಎಲ್ಲೊ ಒ೦ದೊ೦ದು ಕಡೆ ಇರಬಹುದಸ್ಟೆ..ಇವುಗಳ ಕುರಿತು ಈ ಲೇಖನ ಚಿ೦ತನೆಗೆ ಅವಕಾಶ ಮಾಡಿಕೊಡುತ್ತಿದೆ...
Post a Comment