ಹೌದು, ಇಂದು ನಮಗೆಲ್ಲಾ ಸ್ಮರಣೀಯ ದಿನ. ಕಾರಣ ಇಷ್ಟೆ ವಿಶ್ವದ ಖ್ಯಾತ ಪಕ್ಷಿಪ್ರಿಯ, ಚಿತ್ರಕಾರ ಜಾನ್ ಜೇಮ್ಸ್ ಅಡುಬಾನ್ಸ್ ಅವರ 226ನೇ ಬರ್ತ್ ಡೇ. ಪಕ್ಷಿಗಳ ಮೇಲೆ ಅಪಾರ ಪ್ರೀತಿ ಇರಿಸಿಕೊಂಡಿದ್ದ ಈ ಅಸಾಮಾನ್ಯನ ಬಗ್ಗೆ ನಮಗೆ ಇತಿಹಾಸದ ಪುಟಗಳಲ್ಲಿ ಮಾತ್ರ ಮಾಹಿತಿ ಲಭ್ಯ. ನಾನು ಕನ್ನಡಪ್ರಭದಲ್ಲಿ ಪಕ್ಷಿಕಾಶಿ ಅಂಕಣ ಬರೆಯುತ್ತಿದ್ದ ಸಂದರ್ಭದಲ್ಲಿ ಮಾಹಿತಿಗಳಿಗಾಗಿ ಸಾಕಷ್ಟು ಹುಡುಕಾಡುತ್ತಿದ್ದೆ. ಆಗ ಈ ಮೇಧಾವಿಯ ಬಗ್ಗೆ ಒಂದಿಷ್ಟು ಓದಿ ತಿಳಿದುಕೊಳ್ಳಲು ಸಾಧ್ಯವಾಯಿತು.
ಮತ್ತೆ ಇಂದು ಜಾನ್ ಜೇಮ್ಸ್ ನೆನಪಾದರು. ನನ್ನ ಮೊಬೈಲ್ ಬೆಳಿಗ್ಗೆ ಎದ್ದೇಳುತ್ತಿದ್ದಂತೆ ಜಾನ್ ಅವರನ್ನು ನೆನಪಿಸಿತು. ತಕ್ಷಣ ಎದ್ದು ಮಾಡಿದ್ದು ನೆಟ್ ಆನ್ ಮಾಡಿ ಲಾಗಿನ್ ಆಗಿದ್ದು. ನನ್ನ ಗೆಳೆಯರಿಗೂ ನೆನಪಿಸಿದೆ. ಆದರೆ ತಿರುವನಂತಪುರಂನ ನನ್ನ ಸ್ನೇಹಿತ ಮಣಿವಣ್ಣನ್ ನಿನ್ನೆ ರಾತ್ರಿಯೇ ಒಂದು ಮೇಲ್ ಕಳುಹಿಸಿ, ಅಲರ್ಟ್ ಮಾಡಿದ್ದರು. ನಿನ್ನೆ ರಾತ್ರಿ ನಾನು ಮೇಲ್ ಚೆಕ್ ಮಾಡಿಲ್ಲದ ಕಾರಣ ನನ್ನ ಮೊಬೈಲೇ ನನಗೆ ನೆನಪಿಸಿದ್ದು ಎಂದು ಹೇಳಬೇಕಾಯ್ತು.
ಇರಲಿ, ಯಾರು ನೆನಪಿಸಿದರೇನಂತೆ...
ಅಷ್ಟಕ್ಕೂ ಇಂದು ಈ ಸಾಧಕನನ್ನು ಸ್ಮರಿಸೋಣ.
ಅವರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಜಾನ್ ಜೇಮ್ಸ್ ಅಡುಬಾನ್ಸ್ 1785 ಏಪ್ರಿಲ್ 26ರಂದು ಸೇಂಟ್ ಡಾಮಿಂಗ್ಯೂ ಅರ್ಥಾ ತ್ ಇಂದಿನ ಹೈಟಿಯ ಫ್ರೆಂಚ್ ಕಾಲೋನಿಯಲ್ಲಿ ಜನಿಸಿದರು. ಪ್ರಾಯಕ್ಕೆ ಬರುವ ವರೆಗೂ ಫ್ರಾನ್ಸ್ ನಲ್ಲೇ ಜೀವನ ಸಾಗಿಸಿ 18ರ ವಯಸ್ಸಿನಲ್ಲಿ ಅಮೇರಿಕದತ್ತ ಹೆಜ್ಜೆ ಹಾಕಿದರು. ಬಾಲ್ಯದಲ್ಲೇ ಇವರನ್ನು ಕಾಡಿದ್ದು ಪಕ್ಷಿಗಳು ಮತ್ತು ಚಿತ್ರಕಲೆ. ತಮ್ಮ ಕಣ್ಣಿಗೆ ಬಿದ್ದ ಪಕ್ಷಿಗಳ ಬಗ್ಗೆ ತೀವ್ರ ಕೌತುಕದಿಂದ ಮಾಹಿತಿ ಸಂಗ್ರಹಿಸುತ್ತ ಆ ಪಕ್ಷಿಗಳ ಚಿತ್ರ ರಚಿಸುತ್ತಿದ್ದರು. ಮುಂದೆ ಅದೇ ಅವರ ಜೀವನ ಸಾಧನೆಗೆ ದಾರಿಯಾಯಿತು.
ಅಮೇರಿಕಕ್ಕೆ ವಲಸೆ ಬಂದ ಮೇಲೆ ಜಾನ್ ಅವರಿಗೆ ಪಕ್ಷಿಗಳ ಮೇಲೆ ಇನ್ನಷ್ಟು ಆಸಕ್ತಿ ಹುಟ್ಟಿಕೊಳ್ಳುತ್ತೆ. ಬಳಿಕ ಅಮೇರಿಕನ್ ಪಕ್ಷಿ ಸಂಕುಲಗಳ ಅಧ್ಯಯನದಲ್ಲಿ ತೊಡಗಿಸಿಕೊಂಡರು. ತಾನು ಅಧ್ಯಯನ ನಡೆಸುವ ಪ್ರತಿ ಪಕ್ಷಿಯ ಚಿತ್ರಗಳನ್ನು ತಾವೇ ರಚಿಸಿ ಸಂಗ್ರಹಿಸಲಾರಂಭಿಸಿದರು. 1827ರಲ್ಲಿ ಅವರ The Birds of America ಪುಸ್ತಕ ಕೂಡ ಲೋಕಾರ್ಪಣೆಯಾಯಿತು. ಈ ಪುಸ್ತಕದಿಂದಲೇ ಜಾನ್ ಒಬ್ಬ ಅದ್ಭುತ ಪಕ್ಷಿ ತಜ್ಞ ಅನ್ನೋದು ವಿಶ್ವಕ್ಕೆ ಗೊತ್ತಾಗಲು ಕಾರಣವಾಯಿತು. ಆ ನಂತರದ ದಿನಗಳಲ್ಲಿ ಪಕ್ಷಿಗಳ ಕುರಿತು ಅನೇಕ ಪುಸ್ತಕ, ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಪ್ರಾಣಿಗಳ ಮೇಲಿನ ಪ್ರೀತಿ ಕೂಡಾ ಅವ್ರ ಅನೇಕ ಚಿತ್ರಗಳಲ್ಲಿ ಕಾಣಲು ಸಾಧ್ಯ.
ಜಾನ್ ತಮ್ಮ 65ನೇ ವಯಸ್ಸಿನಲ್ಲಿ (1851 ಜನವರಿ 27ರಂದು) ನಿಧನರಾದರು. ಆಗ ಜಾನ್ ನ್ಯೂಯಾರ್ಕ್ ನಲ್ಲಿದ್ದರು. ಈಗಲೂ ನ್ಯೂಯಾರ್ಕ್ ನ ಗ್ಯಾಲರಿಗಳಲ್ಲಿ ಜಾನ್ ಆವರ ವರ್ಣ ಚಿತ್ರಗಳನ್ನು ಕಾಣಲು ಸಾಧ್ಯ.
3 comments:
WOW..
nice paintings and info...
thank you
ಸುಂದರವಾದ ಚಿತ್ರಗಳು. ಈ ಪಕ್ಷಿಪ್ರಿಯನ ಬಗೆಗೆ ತಿಳಿದು ಖುಶಿಯಾಯಿತು.
nice..
visit my blog @ http://ragat-paradise.blogspot.com
RAGHU
Post a Comment