Friday, June 5, 2009
ಕುಂಬ್ಳೆಯ "ಡ್ರೀಮ್ ಸಫಾರಿ"
ಪರಿಸರ ದಿನಾಚರಣೆ ಸ್ಪೆಷಲ್ ಆಗಿ ಪೋಟೋ ಗ್ರಾಫರ್ ದಿನೇಶ್ ಕುಂಬ್ಳೆ ತಮ್ಮ ದಕ್ಷಿಣಆಫ್ರಿಕ ಪ್ರವಾಸದಲ್ಲಿ ಸೆರೆಹಿಡಿದ ಛಾಯಾ ಚಿತ್ರಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ಸಹೋದರ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಗುರುವಾರ ಬೆಂಗಳೂರಿನಲ್ಲಿರುವ 'ಲ್ಯಾಂಡ್ ಮಾರ್ಕ್' ಪುಸ್ತಕ ಮಳಿಗೆಯಲ್ಲಿ ಬಿಡುಗಡೆ ಮಾಡಿದರು.
" ಡ್ರೀಮ್ ಸಫಾರಿ"
ಆಥರ್: ದಿನೇಶ್ ಕುಂಬ್ಳೆ
ಪೇಜಸ್: 224
ಪ್ರೈಸ್: 2,250
(ರಿಯಾಯತಿಯಲ್ಲಿ 1,750)
ಪುಸ್ತಕದ ವಿಶೇಷತೆ
1. ತ್ಯಾಜ್ಯ ವಸ್ತುಗಳಿಂದ ತಯಾರಾದ ಪೇಪರ್ ಬಳಸಿ ಪ್ರಿಂಟ್ ಮಾಡಲಾಗಿದೆ. ಪರಿಸರ ಜಾಗ್ರತಿಯ ಸಂದೇಶವನ್ನು ಈ ಪುಸ್ತಕ ರವಾನಿಸಿದೆ. 224 ಪುಟಗಳ ಈ ಪುಸ್ತಕದಲ್ಲಿ ಒಟ್ಟು 250 ಛಾಯಾಚಿತ್ರಗಳಿವೆ. ಜತೆಗೆ ದಿನೇಶ್ ಕುಂಬ್ಳೆ ತಮ್ಮ ಅನುಭವಗಳನ್ನು ಬರೆದುಕೊಂಡಿದ್ದಾರೆ.
2. ಬೆಂಗಳೂರಿನ ಕೆಆರ್ಎಬಿ ಮೀಡಿಯಾ ಮತ್ತು ಮಾರ್ಕೆಟಿಂಗ್ ಈ ಪುಸ್ತಕವನ್ನು ಪ್ರಿಂಟ್ ಮಾಡಿಸಿದೆ. ಪ್ರಿಂಟಿಂಗ್ ನಲ್ಲೂ ವಿಶೇಷತೆ ಇದೆ. ಎಚ್ ಪಿ ಕಂಪನಿ ತನ್ನ ಲೇಟೆಸ್ಟ್ ಪ್ರಿಂಟರ್ HP Indigo Digital Offset press ನಲ್ಲಿ ಪ್ರಿಂಟ್ ಮಾಡಿದ್ದು, ಕೇವಲ 5 ನಿಮಿಷದಲ್ಲಿ ಪುಸ್ತಕದ ಎಲ್ಲ ಪುಟಗಳು ಮುದ್ರಣಗೊಂಡಿವೆ.
3. ಕೆನ್ಯಾ, ತಂಜಾನಿಯ, ಪೆರಪ್ಸ್ ಕಾಡುಗಳನ್ನ ಸುತ್ತಿ, ಅಲ್ಲಿಯ ವನ್ಯ ಜೀವಿಗಳ ಬಗ್ಗೆ ಅಧ್ಯಯನ ನಡೆಸಿ, ಛಾಯಚಿತ್ರಗಳನ್ನು ಸೆರೆಹಿಡಿದು, ಅದನ್ನು ಪುಸ್ತಕ ರೂಪದಲ್ಲಿ ತಂದ ಏಕೈಕ ಭಾರತೀಯ ದಿನೇಶ್ ಕುಂಬ್ಳೆ ಆಗಿದ್ದಾರೆ.
ದಿನೇಶ್ ಕುಂಬ್ಳೆ ಅವರ "ಡ್ರೀಮ್ ಸಫಾರಿ" ಪುಸ್ತಕ ವಿಶ್ವದ ಎಲ್ಲಾ 'ಲ್ಯಾಂಡ್ ಮಾರ್ಕ್' ಮಳಿಗೆಗಳಲ್ಲೂ ಲಭ್ಯ. ಈ ಪುಸ್ತಕದ ಬೆಲೆ 2,250 ರುಪಾಯಿ. ನಿಮಗೂ ಈ ಪುಸ್ತಕ ಕೊಂಡುಕೊಳ್ಳುವ ಆಸಕ್ತಿ ಇದ್ದರೆ www.wildlifebeat.comಗೆ ಭೇಟಿ ನೀಡಿ. ಇಲ್ಲಿ ಎಲ್ಲ ಮಾಹಿತಿಗಳೂ ಲಭ್ಯ.
ಅನಿಲ್ ಪ್ರೀತಿಯ ಮಾತು: ಅಣ್ಣ ಮತ್ತು ನಾನು ಸೇರಿಯೇ ಇಂತದ್ದೊಂದು ಪುಸ್ತಕ ತರುವ ಆಸೆ ನನ್ನಲ್ಲಿತ್ತು. ಆದರೆ ಅಣ್ಣ ಮುನ್ನಡೆದಿದ್ದಾರೆ. ಖುಷಿಯಾಗಿದೆ. ನಿಜಕ್ಕೂ ಇದೊಂದು ಅದ್ಬುತ ಸಾಧನೆ ಎಂದೇ ಭಾವಿಸುತ್ತೇನೆ.
(ಅನಿಲ್ ಕುಂಬ್ಳೆ ಕೂಡ ಒಬ್ಬ ಬೆಸ್ಟ್ ಪೋಟೋಗ್ರಾಫರ್.)
ಪರಿಸರ ದಿನಾಚರಣೆ ಶುಭಾಶಯಗಳು
Subscribe to:
Post Comments (Atom)
11 comments:
ಅಗ್ನಿ....
ಖಂಡಿತವಾಗಿ ಈ ಪುಸ್ತಕ ನನ್ನಲ್ಲಿರಬೇಕು...
ಖರಿದಿಸುವ ಆಸೆ ಆಗ್ತಾ ಇದೆ...
ಆದರೆ ಬೆಲೆ ಸ್ವಲ್ಪ ಜಾಸ್ತಿ ಎನಿಸುತ್ತದೆ...
ಅನಿಲ್ ಕುಂಬ್ಳೆ ಫೋಟೊಗ್ರಫಿ ಕೂಡ ಮಾಡ್ತಾರಾ...?
ಈ ವಿಷಯ ಗೊತ್ತಿರಲಿಲ್ಲವಾಗಿತ್ತು...
ದಿನೇಶ್ ಕುಂಬ್ಳೆಯವರಿಗೆ ಅಭಿನಂದನೆಗಳು...
ಅನಿಲ ಕುಂಬ್ಳೆಯವರ ಅಣ್ಣನ ಬಗೆಗೆ ಮತ್ತು ಅವರ Dream Safari ಬಗೆಗೆ ತಿಳಿಸಿದ ಮಾಹಿತಿಗಾಗಿ ಧನ್ಯವಾದಗಳು,ಅಗ್ನಿ.
ಪರಿಸರ ದಿನಾಚರಣೆಗೆ ಸೂಕ್ತ ಲೇಖನ. ದಿನೇಶ್ ಕುಂಬ್ಳೆಗೆ ಅಭಿನಂದನೆಗಳು
ಅಗ್ನಿ ಅವರೇ,
ಒಳ್ಳೆ ವಿಚಾರವುಳ್ಳ ಲೇಖನದಲ್ಲಿ, ಪುಸ್ತಕದ ಎಲ್ಲ ವಿವರಗಳನ್ನು ನೀಡಿದ್ದೀರ! ಧನ್ಯವಾದಗಳು.
ಉತ್ತಮ ಮಾಹಿತಿಗಾಗಿ ವ೦ದನೆ
ಕಾಮೆಂಟ್ ಬರೆದವರಿಗೆಲ್ಲ ಧನ್ಯವಾದಗಳು.
@ಪ್ರಕಾಶ್ ಹೆಗಡೆ
ಅನಿಲ್ ಕುಂಬ್ಳೆ ಫೋಟೊಗ್ರಫಿ ಕೂಡ ಮಾಡ್ತಾರಾ...? ಎಂದು ಕೇಳಿದ್ದೀರಿ.
ಹೌದು, ನಾನು ತಿಳಿದಂತೆ ಅನಿಲ್ ಕುಂಬ್ಳೆ ಕೂಡ ಉತ್ತಮ ಛಾಯಚಿತ್ರಕಾರರು. ಅದರಲ್ಲೂ ವೈಡ್ ಲೈಫ್ ನಲ್ಲಿ ವಿಶೇಷ ಆಸಕ್ತಿ ಇರುವವರು. ನೀವು ಅವರ ಕ್ರಿಕೆಟ್ ಆಡಲು ವಿದೇಶ ಪ್ರವಾಸಕ್ಕೆ ಹೋದ ವೇಳೆಯಲ್ಲಿ ಕೆಮರಾ ಇದ್ದೆ ಇರುತ್ತದೆ. ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಅನೇಕ ಕ್ರಿಕೆಟಿಗರ ಬ್ಯಾಟಿಂಗ್, ಬೌಲಿಂಗ್ ಸ್ಟೈಲ್ ಸೆರೆಹಿಡಿದಿದ್ದಾರೆ.
ವಿಶೇಷವಾದ ಮಾಹಿತಿಗಾಗಿ ಧನ್ಯವಾದಗಳು
ಪುಸ್ತಕ ರೂಪದಲ್ಲಿ ಬಂದರೆ ಎಲ್ಲ ಛಾಯಾಗ್ರಾಹಕರಿಗೂ ಹೆಮ್ಮೆ ಅನಿಸುತ್ತೆ. ಇನ್ನೂ ಬೆಲೆ ಕಡಿಮೆಯಾದರೆ ಹೆಚ್ಚು ಜನರನ್ನು ಮುಟ್ಟಬಹುದು. ಅಲ್ವೇ?
@ಮಲ್ಲಿಕಾರ್ಜುನ್
ನೀವು ಹೇಳಿದ್ದು ನಿಜ. ಬೆಲೆ ಸ್ವಲ್ಪ ಕಡಿಮೆಯಾಗಿದ್ದರೆ ಸಾಮಾನ್ಯ ವರ್ಗವನ್ನೂ ತಲುಪಲು ಸಾದ್ಯ. ಇಸ್ಟೊಂದು ಹಣಕೊಟ್ಟು ಕೊಂಡುಕೊಳ್ಳಲು ಎಲ್ಲರಿಗೂ ಸಾದ್ಯವಾಗಲ್ಲ. ದಿನೇಶ್ ಕುಂಬ್ಳೆ ಸಾಮಾನ್ಯ ವರ್ಗವನ್ನು ತಲುಪುವ ಬೆಲೆಗೆ ನೀಡಲು ಸಾದ್ಯವೇ ಎನ್ನುವುದನ್ನು ಪರಿಶೀಲಿಸುವುದು ಒಳ್ಳೆಯದು. ಬಹುತೇಕ ಮಂದಿಯ ಸಲಹೆ ಕೂಡ ಎದೆ ಆಗಿದೆ. ದಿನೇಶ್ ಅವರ ಗಮನಕ್ಕೆ ತರುವ ಪ್ರಯತ್ನ ಮಾಡುವೆ. ಧನ್ಯವಾದಗಳು.
ಅಗ್ನಿ...ನಿಮ್ಮ ಪೋಸ್ಟ್ ಗಳೂ ಅಗ್ನಿಯಸ್ಟೇ ತೀಕ್ಷ್ಣವಾಗಿ ವೈಚಾರಿಕ ಮತ್ತು ನಿಸರ್ಗ ಕುರಿತಾಗಿದ್ದು ಲೇಖನಗಳೂ ಪೂರಕವಾಗಿವೆ. ನಿಮ್ಮ ಹಕ್ಕಿ ಪಕ್ಷಿಗಳ ಮಾಹಿತಿಹೊತ್ತ ಚಿತ್ರ ಸರ್ಣಿಯೂ ಚನ್ನಾಗಿ ಬಂದಿದೆ.
ಅಗ್ನಿ ಪ್ರಪಂಚಕ್ಕೆ ಸ್ವಾಗತ
ಈ ಅಗ್ನಿಯ ಅಕ್ಷರ ಜೋಡಣೆ ಮತ್ತು ಮಾಹಿತಿ ಮೆಚ್ಚಿಕೊಂಡ ತಮಗೆಲ್ಲ ಧನ್ಯವಾದ. ದಯವಿಟ್ಟು ನಿಮಗೇನಾದರೂ ಹೊಸ ಮಾಹಿತಿ ಗೊತ್ತಿದ್ದರೆ ತಿಳಿಸಿ. ಸಲಹೆಗೂ ಸ್ವಾಗತ.
Post a Comment